More

    5 ದಿನಗಳಲ್ಲಿ 30% ಏರಿಕೆಯಾದ ಸರ್ಕಾರಿ ಕಂಪನಿ ಸ್ಟಾಕ್: ಮತ್ತಷ್ಟು ಹೆಚ್ಚಾಗುವ ಎನರ್ಜಿ ಈ ಷೇರಿಗೆ ಇದೆ ಎನ್ನುತ್ತಾರೆ ತಜ್ಞರು

    ಮುಂಬೈ: ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ಲಿಮಿಟೆಡ್ (IREDA – Indian Renewable Energy Development Agency) ಷೇರುಗಳು ತಮ್ಮ ಹೂಡಿಕೆದಾರರನ್ನು ಕೇವಲ ಆರು ತಿಂಗಳಲ್ಲಿ, ಶ್ರೀಮಂತರನ್ನಾಗಿ ಮಾಡಿವೆ. ಈ ಅವಧಿಯಲ್ಲಿ ಈ ಷೇರುಗಳು ಶೇ. 194ರಷ್ಟು ಲಾಭ ನೀಡಿವೆ. ಅಲ್ಲದೆ, ಕೇವಲ 5 ವಹಿವಾಟು ದಿನಗಳಲ್ಲಿ ಈ ಷೇರು ಬೆಲೆ 30% ಜಿಗಿದಿದೆ. ಈಗ ಪ್ರಶ್ನೆಯೆಂದರೆ, ಈ ಷೇರು ತನ್ನ ದಾಖಲೆಯ ಗರಿಷ್ಠ ಬೆಲೆ ರೂ 214.80 ಮಟ್ಟವನ್ನು ತಲುಪಬಹುದೇ?

    ಶುಕ್ರವಾರ ಕೂಡ ಈ ಷೇರು ಬೆಲೆ ಶೇ.11.43ರಷ್ಟು ಜಿಗಿದು 176.45 ರೂ. ತಲುಪಿದೆ. ಈ ವರ್ಷದ ಆರಂಭದಲ್ಲಿ ಫೆಬ್ರವರಿ 6 ರಂದು ಈ ಷೇರು ಬೆಲೆ 214.80 ರೂ. ತಲುಪಿತ್ತು. ಇದು ಈ ಷೇರಿನ ದಾಖಲೆಯ ಸಾರ್ವಕಾಲಿಕ ಷೇರಿನ ಬೆಲೆಯಾಗಿದೆ.

    ಸರ್ಕಾರಿ ಹಣಕಾಸು ಸಂಸ್ಥೆಯಾಗಿರುವ ಇರೆಡಾ ಇತ್ತೀಚೆಗೆ 2023-24 ಹಣಕಾಸು ವರ್ಷದಲ್ಲಿ (ಎಫ್‌ವೈ 24) 37,354 ಕೋಟಿ ರೂ.ಗಳ ಅತ್ಯಧಿಕ ಸಾಲವನ್ನು ಮಂಜೂರು ಮಾಡಿರುವುದಾಗಿ ತಿಳಿಸಿದೆ. ರೂ. 25,089 ಕೋಟಿ ಸಾಲವನ್ನು ವಿತರಿಸಲಾಗಿದೆ ಎಂದು ಹೇಳಿದೆ.

    ಇರೆಡಾದ ಒಟ್ಟು ಸಾಲದ ಪುಸ್ತಕವು 59,650 ಕೋಟಿ ರೂ.ಗಳಾಗಿದ್ದು, ಇದು ಶೇಕಡಾ 26.71 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಮಾರ್ಚ್ 2024 ರ ತ್ರೈಮಾಸಿಕದಲ್ಲಿ ಮಂಜೂರಾದ ಸಾಲಗಳು ವರ್ಷದಿಂದ ವರ್ಷಕ್ಕೆ ಶೇಕಡಾ 101.71 ರಷ್ಟು ಏರಿಕೆಯಾಗಿ 23,796 ಕೋಟಿ ರೂ. ಮುಟ್ಟಿವೆ.

    “ಇರೆಡಾ ಸ್ಟಾಕ್​ ಡೈಲಿ ಚಾರ್ಟ್‌ನಲ್ಲಿ ಪ್ರಬಲವಾಗಿ ಕಾಣುತ್ತದೆ ಮತ್ತು ಶೀಘ್ರದಲ್ಲೇ ರೂ 185 ತಲುಪುತ್ತದೆ. ಸ್ಟಾಪ್ ಲಾಸ್ ಅನ್ನು ರೂ 170 ನಲ್ಲಿ ಇರಿಸಲು ಮರೆಯಬೇಡಿ” ಎಂದು ರೆಲಿಗೇರ್ ಬ್ರೋಕಿಂಗ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ (ಚಿಲ್ಲರೆ ಸಂಶೋಧನೆ) ರವಿ ಸಿಂಗ್ ಹೇಳಿದ್ದಾರೆ.

    ಪ್ರಭುದಾಸ್ ಲಿಲ್ಲಾಧರ್ ಬ್ರೋಕರೇಜ್​ ಸಂಸ್ಥೆಯ ತಾಂತ್ರಿಕ ವಿಶ್ಲೇಷಕ ಶಿಜು ಕುತುಪಲಕ್ಕಲ್
    ಅವರು, “ಈ ಸ್ಟಾಕ್ ರೂ. 215 ರ ಗರಿಷ್ಠ ಬೆಲೆಯಿಂದ ಹಿನ್ನಡೆ ಕಂಡಿದೆ. ಇದು ರೂ. 188 ಮಟ್ಟವನ್ನು ನೋಡುವ ಸಾಧ್ಯತೆಯಿದೆ. ಇದರ ನಂತರ ರೂ. 215 ವಲಯವನ್ನು ಮರುಪರೀಕ್ಷೆ ಮಾಡಬಹುದು. ಅಲ್ಪಾವಧಿಯ ಬೆಂಬಲವು ರೂ. 155 ಹತ್ತಿರ ಉಳಿಯುತ್ತದೆ” ಎಂದಿದ್ದಾರೆ.

    ಈ ಸ್ಟಾಕ್​​ ರೂ. 186ರ ಮಟ್ಟಕ್ಕಿಂತ ಹೆಚ್ಚಾದರೆ ರೂ. 199ಕ್ಕೆ ಏರಬಹುದು. ಒಂದು ತಿಂಗಳವರೆಗೆ ನಿರೀಕ್ಷಿತ ವ್ಯಾಪಾರ ಶ್ರೇಣಿಯು ರೂ 160 ರಿಂದ ರೂ 200 ರ ನಡುವೆ ಇರುತ್ತದೆ ಎಂದು ಆನಂದ ರಾಠಿ ಷೇರ್ಸ್​ ಆ್ಯಂಡ್​ ಸ್ಟಾಕ್ ಬ್ರೋಕರ್ಸ್‌ನ ಹಿರಿಯ ವ್ಯವಸ್ಥಾಪಕ ತಾಂತ್ರಿಕ ಸಂಶೋಧನಾ ವಿಶ್ಲೇಷಕ ಜಿಗರ್ ಎಸ್ ಪಟೇಲ್ ಹೇಳಿದ್ದಾರೆ.

    ಷೇರು ಪಾಲು ಮಾರಾಟ ಮಾಡಿದ ಎಚ್​ಡಿಎಫ್​ಸಿ ಬ್ಯಾಂಕ್​: ವೈದ್ಯಕೀಯ ಸೇವಾ ಕಂಪನಿಯ ಸ್ಟಾಕ್​ ಬೆಲೆ ಒಂದೇ ದಿನದಲ್ಲಿ 20% ಏರಿದ್ದೇಕೆ?

    7 ದಿನಗಳಲ್ಲಿ ಷೇರು ಬೆಲೆ 9% ಏರಿಕೆ; ಈ ಬ್ಯಾಂಕಿಂಗ್ ಸ್ಟಾಕ್‌ ಕೆಟ್ಟ ಗಳಿಗೆ ಮುಗಿದಿದೆಯೇ?

    ಐಪಿಒ ಷೇರು ರೂ.76ರಿಂದ 126ಕ್ಕೆ ಏರಿತು: ಮೊದಲ ದಿನವೇ ಹೂಡಿಕೆದಾರರಿಗೆ ಲಾಭದ ಸುರಿಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts