More

    50,000 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಸರ್ಕಾರದ ಯೋಜನೆ

    ನವದೆಹಲಿ: ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆ ಆಕರ್ಷಿಸುವುದಕ್ಕೆ ಇನ್​ಫ್ರಾಸ್ಟ್ರಕ್ಚರ್ ಇನ್​ವೆಸ್ಟ್​ಮೆಂಟ್ ಟ್ರಸ್ಟ್​ (ಇನ್​ವಿಟ್​) ಅತ್ಯುತ್ತಮ ವೇದಿಕೆಯಾಗಿದೆ. ಕೇಂದ್ರ ಸರ್ಕಾರ ಚುತುಷ್ಪಥ, ಷಟ್ಪಥ ರಸ್ತೆಗಳು ಸೇರಿ 50,000 ಕಿ.ಮೀ.ಗೂ ಅಧಿಕ ಉದ್ದದ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಗಿರಿಧರ ಅರಮಾನೆ ತಿಳಿಸಿದ್ದಾರೆ.

    ಅವರು ಇನ್​ವಿಟ್​ನ ಇನ್​ವೆಸ್ಟರ್ ಮೀಟ್​ನಲ್ಲಿ ಮಾತನಾಡಿದ್ದು, ಪ್ರಸ್ತಾವಿತ ರಸ್ತೆಗಳೆಲ್ಲವೂ ಉತ್ತಮ ಆದಾಯ ತರುವಂಥದ್ದಾಗಿವೆ. ಹೀಗಾಗಿ ಹೂಡಿಕೆಗೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಎಲ್ಲ ಪ್ರಾಜೆಕ್ಟ್​ಗಳ ನಿರ್ವಹಣೆಗೂ ಪ್ರಾಜೆಕ್ಟ್​ ಮ್ಯಾನೇಜರ್​ಗಳನ್ನು ನೇಮಕ ಮಾಡಲಾಗುತ್ತದೆ. ಇವರನ್ನು ಅವರ ವೃತ್ತಿಪರ ಅನುಭವ ಮತ್ತು ಕಾರ್ಯಕ್ಷಮತೆಯನ್ನು ಪರಿಗಣಿಸಿಯೇ ಈ ನೇಮಕಾತಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

    ಇದನ್ನೂ ಓದಿ: ಡ್ರಗ್ಸ್ ಜಾಲದಲ್ಲಿ ತೊಡಗಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಎಬಿವಿಪಿ ಸಹಿ ಸಂಗ್ರಹ ಅಭಿಯಾನ

    ಇನ್​ವಿಟ್​ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಈಗಾಗಲೇ ಅನುಮತಿ ನೀಡಿದೆ. ನ್ಯಾಷನಲ್​ ಹೈವೇಸ್ ಅಥಾರಿಟಿ ಆಫ್ ಇಂಡಿಯಾ (ಎನ್​ಎಚ್​ಎಐ) ಕನಿಷ್ಠ ಒಂದು ವರ್ಷದ ಅವಧಿಯಲ್ಲಿ ಈ ರಸ್ತೆಗಳಲ್ಲಿನ ಟೋಲ್ ಸಂಗ್ರಹದ ದಾಖಲೆಯನ್ನು ಸಂಗ್ರಹಿಸಿಟ್ಟುಕೊಂಡಿದೆ. ಟೋಲ್ ಸಂಗ್ರಹಿಸುವ ಹಕ್ಕನ್ನು ಎನ್​ಎಚ್​ಎಐ ತನ್ನ ಬಳಿಯೇ ಉಳಿಸಿಕೊಂಡಿದೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

    ಏರೋ ಇಂಡಿಯಾ 2021 ವೆಬ್​ಸೈಟ್ ಉದ್ಘಾಟಿಸಿದ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts