More

    ದಶಕಗಳ ಹೋರಾಟಕ್ಕೆ ಸಿಕ್ಕ ಯಶಸ್ಸು

    ಮುದ್ದೇಬಿಹಾಳ: ನಗರದ ವಾರ್ಡ್ ಸಂಖ್ಯೆ 1ರಲ್ಲಿ ಬರುವ ಸಿಬಿಎಎಸ್‌ಇ ಶಾಲೆಯ ಕೊನೇ ಭಾಗದ ರಸ್ತೆಯ ಅಂಚಿನಿಂದ ಪೊಲೀಸ್ ಠಾಣೆಯ ಸಿಪಿಐ ಕ್ವಾರ್ಟರ್ಸ್‌ವರೆಗಿನ ರಸ್ತೆ ನಿರ್ಮಾಣದ ದಶಕಗಳ ಕಾಲದ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದ್ದು ರಸ್ತೆ ನಿರ್ಮಾಣಕ್ಕಿದ್ದ ಅತಿಕ್ರಮಣ ತೆರವು ಕಾರ್ಯಾಚರಣೆ ಬುಧವಾರ ನಡೆದಿದೆ.

    ಪುರಸಭೆ ಸದಸ್ಯರಾಗಿದ್ದ ದಿ. ಶರಣು ಬೂದಿಹಾಳಮಠ ಈ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಇಟ್ಟು ಅರೆಬೆತ್ತಲೆ ಧರಣಿ ನಡೆಸಿದ್ದರು. ಇದಕ್ಕೆ ಸ್ಥಳೀಯ ವಾರ್ಡ್ ನಿವಾಸಿ, ದೈಹಿಕ ಶಿಕ್ಷಕ ದಿ. ಎಂ.ಎನ್. ಕೆಂಭಾವಿ ಅವರು ಬೆಂಬಲ ಕೊಟ್ಟಿದ್ದರು. ಆದರೆ, ಕಾರಣಾಂತರಗಳಿಂದ ರಸ್ತೆ ನಿರ್ಮಾಣದ ಕಾರ್ಯ ನನೆಗುದಿಗೆ ಬಿದ್ದಿತ್ತು. ಮುಖ್ಯವಾಗಿ ಪೊಲೀಸ್ ಠಾಣೆಯ ಆವರಣದಿಂದ ವಿಜಯಪುರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವುದೇ ದೊಡ್ಡ ಸವಾಲಿನ ಪ್ರಶ್ನೆ ಆಗಿತ್ತು. ಇದೀಗ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಅವರ ನೇತೃತ್ವದಲ್ಲಿ ಸಿಟಿ ಸರ್ವೇಯರ್‌ಗಳು, ಪುರಸಭೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿದ್ದ ವಾರ್ಡ್ ಸದಸ್ಯೆ ಸಹನಾ ಬಡಿಗೇರ ಅವರ ಪತಿ ವಿಜಯಕುಮಾರ ಬಡಿಗೇರ ಅವರು ಈ ರಸ್ತೆಗಿದ್ದ ಸಣ್ಣಪುಟ್ಟ ಅಡಚಣೆಗಳನ್ನು ಬಗೆಹರಿಸಿ ಅತಿಕ್ರಮಣ ತೆರವುಗೊಳಿಸಲು ಯಶಸ್ವಿಯಾದರು.

    ಪುರಸಭೆ ಮುಖ್ಯಾಧಿಕಾರಿ ಸುನೀಲ ಪಾಟೀಲ, ಪುರಸಭೆ ಅಧ್ಯಕ್ಷೆ ಪತಿ ರುದ್ರಗೌಡ ಅಂಗಡಗೇರಿ, ಸದಸ್ಯ ಅಶೋಕ ವನಹಳ್ಳಿ, ವಾರ್ಡ್ ನಿವಾಸಿಗಳಾದ ಮಹಾಂತೇಶ ಬೂದಿಹಾಳಮಠ, ರಾಜುಗೌಡ ಪಾಟೀಲ, ನೂರಾನ್ ಕೆಂಭಾವಿ, ಇಮ್ರಾನ್ ಕೆಂಭಾವಿ, ಸಿಟಿ ಸರ್ವೇಯರ್ ಎಸ್.ಸಿ.ಹಿರೇಮಠ, ಸೂಪರ್‌ವೈಸರ್ ಎಂ.ಎನ್. ಮದಭಾವಿ, ಪುರಸಭೆ ಕಂದಾಯಾಧಿಕಾರಿ ಎಂ.ಬಿ. ಮಾಡಗಿ, ಶಮ್ಸುದ್ದೀನ್ ಮೂಲಿಮನಿ, ರಿಯಾಜ ನಾಯ್ಕೋಡಿ ಇತರರಿದ್ದರು.

    ರಸ್ತೆಗೆ ಬೂದಿಹಾಳಮಠ-ಕೆಂಭಾವಿ ಹೆಸರು ನಾಮಕರಣ
    ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರ ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ, ಈ ರಸ್ತೆ ಸಲುವಾಗಿ ಹಿಂದಿನ ಸದಸ್ಯರಾಗಿದ್ದ ಶರಣು ಬೂದಿಹಾಳಮಠ ಅವರು ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರ ಜನಪರ ಕಾಳಜಿ ವಾರ್ಡ್ ಅಭಿವದ್ಧಿ ಬಗ್ಗೆ ಇದ್ದ ಕನಸು ಈಡೇರಿಸಲು ನಾವು ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದೇವೆ. ರಸ್ತೆ ನಿರ್ಮಾಣಕ್ಕೆ ಮೊದಲು ನಮ್ಮ ಮನೆಯ ಕಾಂಪೌಂಡ್‌ನ್ನು ತೆರವುಗೊಳಿಸಿ ಎಂದು ಸಹಕಾರ ನೀಡಿರುವ ಕೆಂಭಾವಿ ಸರ್ ಅವರ ಹೆಸರನ್ನು ಈ ರಸ್ತೆಗೆ ನಾಮಕರಣ ಮಾಡಲಾಗುತ್ತದೆ. ಇದಕ್ಕೆ ಪುರಸಭೆ ು ಆಡಳಿತ ಮಂಡಳಿ ಸಹಮತ ನೀಡಬೇಕು ಎಂದು ಹೇಳಿದರು.

    ಸಿಪಿಐ ಕಚೇರಿಯಿಂದ ಆರಂಭವಾಗುವ ರಸ್ತೆಗೆ ದಿ. ಶರಣು ಬೂದಿಹಾಳಮಠ ಹಾಗೂ ಸಿಬಿಎಸ್‌ಇ ಶಾಲೆಯಿಂದ ಆರಂಭಗೊಳ್ಳುವ ರಸ್ತೆಗೆ ನಿವೃತ್ತ ಶಿಕ್ಷಕ ದಿ.ಎಂ.ಎನ್. ಕೆಂಭಾವಿ ಅವರ ಹೆಸರಿಡಲು ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

    ಎಂಜಿವಿಸಿ ಕಾಲೇಜಿನ ಕಾಂಪೌಂಡ್ ತೆರವು?
    ಪೊಲೀಸ್ ಠಾಣೆ ಸಿಪಿಐ ಕಚೇರಿಗೆ ಹೊಂದಿಕೊಂಡಿರುವ ಎಂಜಿವಿಸಿ ಕಾಲೇಜಿನ ಕಾಂಪೌಂಡ್ ಕೂಡ ತೆರವುಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ನಿಯಮದಂತೆ ಸರ್ವಿಸ್ ರಸ್ತೆಗೆ ಜಾಗ ಬಿಡಬೇಕಿತ್ತು. ಆದರೆ, ಇಲ್ಲಿ ಅದು ಪಾಲನೆಯಾಗಿಲ್ಲ. ಈ ಬಗ್ಗೆ ಸಂಸ್ಥೆಯವರೊಂದಿಗೆ ಮಾತನಾಡಿ ಕಾಂಪೌಂಡ್ ತೆರವುಗೊಳಿಸಲಾಗುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts