More

    ವಧು-ವರರಿಗೆ ಸಿಹಿ ಸುದ್ದಿ: ‘ಸಪ್ತಪದಿ’ಗೆ ಮುಹೂರ್ತ​ ಫಿಕ್ಸ್​

    ಬೆಂಗಳೂರು: ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವತಿಯಿಂದ ಏರ್ಪಡಿಸುವ ‘ಸಪ್ತಪದಿ’ ಯೋಜನೆಯ ಮುಹೂರ್ತವನ್ನು ಸರ್ಕಾರ ನಿಗದಿ ಮಾಡಿದೆ.

    ‘ಎ’ ದರ್ಜೆ 110 ದೇವಸ್ಥಾನಗಳ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಯೋಜನೆ ಇದಾಗಿದೆ. ಕಳೆದ ಏಪ್ರಿಲ್​ 26 ಮತ್ತು ಮೇ 24ರಂದು ಮದುವೆಗಳು ನಡೆಯಬೇಕಿತ್ತು. ಆದರೆ ಕರೊನಾ ವೈರಸ್​ ಹಾಗೂ ಲಾಕ್​ಡೌನ್​ ಹಿನ್ನೆಲೆಯಲ್ಲಿ, ದಿನಾಂಕಗಳನ್ನು ಮುಂದೂಡಲಾಗಿತ್ತು.

    ಇದೀಗ ಜುಲೈ ಮತ್ತು ಆಗಸ್ಟ್​ ತಿಂಗಳಿನಲ್ಲಿ ಮುಹೂರ್ತವನ್ನು ಸರ್ಕಾರ ನಿಗದಿ ಮಾಡಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಮದುವೆಗೆ ನೊಂದಾಯಿಸಿದ ವಧು, ವರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಒಪ್ಪಿಗೆ ಪತ್ರ ಪಡೆದು ನಿಗದಿತ ದಿನದಂದು ಸಾಮೂಹಿಕ ಮದುವೆ ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    ಇದನ್ನೂ ಓದಿ: ಆಕಾಶದಿಂದ ಉದುರಿದ ಮುಖವಾಡದಂಥ ನಿಗೂಢ ವಸ್ತು!

    ಜುಲೈ 23, 26, 29 ಹಾಗೂ ಆಗಸ್ಟ್ 6, 10, 14, 17 ರಂದು ಒಳ್ಳೆಯ ಮುಹೂರ್ತ ಇದ್ದು, ಈ ಪೈಕಿ ಎರಡು ದಿನಾಂಕಗಳನ್ನು ನಿಗದಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

    ಈಗಾಗಲೇ ಒಂದೂವರೆ ಸಾವಿರಕ್ಕೂ ಅಧಿಕ ವಧು-ವರರು ಸಪ್ತಪದಿ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇಲ್ಲಿಯವರೆಗಿನ ನಿಯಮದಂತೆ ವರನಿಗೆ ಹಾರ ಬಟ್ಟೆ ಖರೀದಿಗೆ 5000 ರೂ. ವಧುವಿನ ಬಟ್ಟೆ ಖರೀದಿಗೆ 10 ಸಾವಿರ ರೂ. ಮತ್ತು ತಾಳಿಗೆ 40 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಮದುವೆ ದಿನವೇ ವಧು-ವರರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

    ನಿಗದಿಯಂತೆ ಮುಜರಾಯಿ ಇಲಾಖೆ ಎ ದರ್ಜೆ ದೇವಾಲಯಗಳಲ್ಲಿ ಮದುವೆ ನಡೆಯಲಿವೆ. ಕರೊನಾ ಭೀತಿ ಇನ್ನೂ ಮಾಸದ ಹಿನ್ನೆಲೆಯಲ್ಲಿ ಎಲ್ಲಾ ನಿಮಯಗಳ ಅನ್ವಯವೇ ಮದುವೆ ಮಾಡಲಾಗಲು ಯೋಜನೆ ರೂಪಿಸಲಾಗಿದೆ.

    ಅಮೆರಿಕದಲ್ಲಿ ಸಿಕ್ಕಿಬಿದ್ದ ಮುಂಬೈ ದಾಳಿ​ ಸಂಚುಕೋರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts