More

    ಈ ಬಾರಿ ಮೈಸೂರು ದಸರಾ ಸರಳ: ಜಂಬೂ ಸವಾರಿ, ಪಂಜಿನ ಕವಾಯತು ಇರಲ್ಲ

    | ಯುವ ದಸರಾಕ್ಕೂ ಕೋಕ್

    | ಕಾರ್ಯಕ್ರಮಗಳು ಚಾಮುಂಡಿ ಬೆಟ್ಟ, ಅರಮನೆಗಷ್ಟೇ ಸೀಮಿತ

    | ಸಿಎಂ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ತೀರ್ಮಾನ

    | ಕರೊನಾ ಯೋಧರಿಂದ ನಾಡಹಬ್ಬದ ಉದ್ಘಾಟನೆ

    | 10 ಕೋಟಿ ರೂ. ಅನುದಾನ ಬಿಡುಗಡೆಗೆ ಸಮ್ಮತಿ

    ಬೆಂಗಳೂರು: ಕೋವಿಡ್-19 ಸಂಕಷ್ಟವಿದ್ದರೂ ಸಂಪ್ರದಾಯ ಕೈಬಿಡದೆ ಈ ಬಾರಿ ನಾಡಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು, ನಾಡದೇವತೆ ಚಾಮುಂಡೇಶ್ವರಿಯ ಅಗ್ರಪೂಜೆ ಹಾಗೂ ಉದ್ಘಾಟನೆಯನ್ನು ವಿಶೇಷವಾಗಿ ಕರೊನಾ ಸೇನಾನಿಗಳಿಂದ ನೆರವೇರಿಸಲು ರಾಜ್ಯ ಸರ್ಕಾರ ತೀರ್ವನಿಸಿದೆ.

    ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ದಸರಾ ಉನ್ನತಮಟ್ಟದ ಸಮಿತಿ ಸಭೆ ಮಂಗಳವಾರ ನಡೆಯಿತು. ನಾಡಿನ ಸಂಪ್ರದಾಯ, ಪರಂಪರೆ, ಸಂಸ್ಕೃತಿಯ ಸಂಕೇತವಾದ ಮೈಸೂರು ದಸರಾ ಮಹೋತ್ಸವದಲ್ಲಿ ಅದ್ದೂರಿತನ ಕೈಬಿಟ್ಟು ಸರಳತನವಿರಲೆಂಬ ಅಪೇಕ್ಷೆಗೆ ಸಮ್ಮತಿ ಮುದ್ರೆಯೊತ್ತಿತು. ಸೋಂಕು ಹರಡುವುದನ್ನು ತಡೆಯಲು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕಟ್ಟುನಿಟ್ಟಿನ ಪಾಲನೆಗೆ ಒತ್ತು ನೀಡಿ, ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಚಾಮುಂಡಿ ಬೆಟ್ಟ ಮತ್ತು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿದೆ.

    ಸರಳ ಆಚರಣೆ ಇದೇ ಮೊದಲಲ್ಲ

    ಮೈಸೂರು ದಸರಾ ವೈಭವದ ಇತಿಹಾಸದಲ್ಲಿ ಸರಳ ಆಚರಣೆ ಇದೇ ಮೊದಲೇನಲ್ಲ. ಪ್ರಭುಗಳ ದಸರಾ ಪ್ರಜೆಗಳ ದಸರಾ ಮಹೋತ್ಸವವಾಗಿ ಪರಿವರ್ತನೆಯಾದ ಬಳಿಕ ವಿವಿಧ ಕಾರಣಗಳಿಗಾಗಿ ಇದುವರೆಗೆ 8 ಬಾರಿ ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ. ಪ್ರಸಕ್ತ ವರ್ಷದ್ದು 9ನೇಯದ್ದಾಗಲಿದೆ.

    ಸರಳ ಆಚರಣೆಯ ಹೆಜ್ಜೆ ಗುರುತು

    1977- ವಿದ್ಯಾರ್ಥಿಗಳ ಮುಷ್ಕರ

    1983, 1993, 1997- ಬರಗಾಲ

    2000- ಡಾ.ರಾಜಕುಮಾರ್ ಅಪಹರಣ ಪ್ರಕರಣ

    2001- ಗುಜರಾತ್ ಭೂಕಂಪ

    2003, 2015- ತೀವ್ರ ಬರಗಾಲ

    2020- ಕರೊನಾವೈರಸ್ ಸಾಂಕ್ರಾಮಿಕ ರೋಗ

    ಕರೊನಾ ಯೋಧರಿಗೆ ಗೌರವ: ಮಾರಕ ಪಿಡುಗು ನಿಯಂತ್ರಿಸಲು ಶ್ರಮಿಸಿರುವ ಕರೊನಾ ಯೋಧರಿಗೆ ವಿಶೇಷ ಗೌರವ ನೀಡುವ ಸಭೆ ನಿರ್ಧರಿಸಿ, ನಾಡದೇವತೆ ಚಾಮುಂಡೇಶ್ವರಿಯ ಅಗ್ರಪೂಜೆ ಹಾಗೂ ದಸರಾ ಉದ್ಘಾಟನೆಯನ್ನು ವೈದ್ಯರು, ಶುಶ್ರೂಷಕರು, ಪೌರಕಾರ್ವಿುಕರು, ಆಶಾ ಕಾರ್ಯಕರ್ತರು ಮತ್ತು ಪೊಲೀಸರಿಂದ ನೆರವೇರಿಸಲಿದೆ.

    10 ಕೋಟಿ ರೂ. ಅನುದಾನ: ದಸರಾ ಆಚರಣೆಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸಿಎಂ ಬಿಎಸ್​ವೈ ಒಪ್ಪಿಗೆ ನೀಡಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 5 ಕೋಟಿ ರೂ. ಒದಗಿಸಲಿದೆ. ಸಂಪ್ರದಾಯಕ್ಕೆ ಭಂಗ ಉಂಟಾಗದಂತೆ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದಾರೆ.

    ಸಭೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವರಾದ ಸಿ.ಟಿ.ರವಿ, ಎಸ್.ಟಿ.ಸೋಮಶೇಖರ್, ಸಂಸದರಾದ ಪ್ರತಾಪ ಸಿಂಹ, ಸುಮಲತಾ ಅಂಬರೀಷ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕೆಎಸ್​ಟಿಡಿಸಿ ಅಧ್ಯಕ್ಷೆ ಶ್ರುತಿ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಶಾಸಕರು, ಮೈಸೂರು ಜಿಲ್ಲಾಧಿಕಾರಿ ಇದ್ದರು.

    ಏನೇನಿರುತ್ತದೆ?

    – ಚಾಮುಂಡೇಶ್ವರಿಯ ಅಗ್ರಪೂಜೆ ಹಾಗೂ ದಸರಾ ಉದ್ಘಾಟನೆ
    – ಗಜಪಡೆ ಪಯಣ, ಕ್ರೀಡಾ ಜ್ಯೋತಿಗೆ ಸ್ವಾಗತ, ಕುಸ್ತಿ ಪಂದ್ಯ ಸಾಂಕೇತಿಕ
    – ಅರಮನೆ ಆವರಣದೊಳಗೆ 5-6 ಆನೆಗಳಿಂದ ಜಂಬೂಸವಾರಿ
    – ಮನೆ ಮನೆಯಲ್ಲಿ ದಸರಾ ಆಚರಣೆ
    – ರಾಜ ಮಾರ್ಗ, ಪ್ರಮುಖ ವೃತ್ತಗಳಿಗೆ ದೀಪಾಲಂಕಾರ

    ಏನೇನಿರಲ್ಲ?

    – ಯುವ, ಮಹಿಳಾ, ಮಕ್ಕಳು, ರೈತ ದಸರಾ
    – ಜಂಬೂ ಸವಾರಿ ಮೆರವಣಿಗೆ
    – ಪಂಜಿನ ಕವಾಯತು, ವಸ್ತು ಹಾಗೂ ಫಲಪುಷ್ಪ ಪ್ರದರ್ಶನ
    – ಆಹಾರ ಮೇಳ,  ಕವಿಗೋಷ್ಠಿ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು
    – ಸಾಹಸ ಕ್ರೀಡೋತ್ಸವ, ಹಾಸ್ಯೋತ್ಸವ, ಚಲನಚಿತ್ರೋತ್ಸವ, ರಂಗೋಲಿ ಚಿತ್ತಾರ

    ಚೀನಿ ವಸ್ತುಗಳ ಮಾರಾಟ ನಿಷಿದ್ಧ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ್ ಭಾರತ’ ಪರಿಕಲ್ಪನೆಯಂತೆ ಮೈಸೂರು ದಸರಾದಲ್ಲಿ ದೇಶಿ ಉತ್ಪನಗಳಿಗೆ ಆದ್ಯತೆ ನೀಡಬೇಕು. ಚೀನಾ ವಸ್ತುಗಳ ಮಾರಾಟ ನಿಷಿದ್ಧವಾಗಿದ್ದು, ಅಂತಹ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಯಡಿಯೂರಪ್ಪ ಖಡಕ್ ನಿರ್ದೇಶನ ನೀಡಿದ್ದಾರೆ.

    ದಸರಾ ವೆಚ್ಚದ ಅಂದಾಜು
    * ಪ್ರಮುಖ ಗುಂಡಿಗಳನ್ನು ಮುಚ್ಚುವುದು, ಲೇನ್ ಮತ್ತು ಕರ್ಬ್​ಗೆ ಬಣ್ಣ ಬಳಿಯುವುದು, ರಸ್ತೆ ಮತ್ತು ಇತರ 192 ಅಭಿವೃದ್ಧಿ ಕಾಮಗಾರಿಗಳು- ಅಂದಾಜು 22.73 ಕೋಟಿ ರೂ.
    * 13 ವಿದ್ಯುತ್ ಕಾಮಗಾರಿಗಳು- 1.39 ಕೋಟಿ ರೂ.
    * 4 ತೋಟಗಾರಿಕೆ ಕಾಮಗಾರಿಗಳು- 50 ಲಕ್ಷ ರೂ.
    * 10 ಆರೋಗ್ಯ ಶಾಖೆಯ ಕಾಮಗಾರಿಗಳು- 27.59 ಲಕ್ಷ ರೂ.
    * ಒಳಚರಂಡಿ ಮತ್ತು ನೀರು ಸರಬರಾಜು ಕಾಮಗಾರಿ- 10 ಲಕ್ಷ ರೂ.
    ಒಟ್ಟು ಅಂದಾಜು ಮೊತ್ತ 25.78 ಕೋಟಿ ರೂ.

    ಮೈಸೂರು ದಸರಾ ಕಾರ್ಯಕ್ರಮಗಳನ್ನು ಮುಚ್ಚಿದ ಸಭಾಂಗಣದಲ್ಲಿ ಆಯೋಜಿಸಿ, ಚಿತ್ರೀಕರಿಸಿಕೊಂಡು ಟಿವಿ ವಾಹಿನಿಗಳಲ್ಲಿ ಪ್ರಸಾರ ಮಾಡಬೇಕೆಂಬ ಸಲಹೆಗಳು ಬಂದಿದ್ದು, ಮತ್ತೊಮ್ಮೆ ರ್ಚಚಿಸಿ ಸಿಎಂ ಗಮನಕ್ಕೆ ತರಲಾಗುವುದು.ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತದೆ. ವೈಭವಕ್ಕೆ ಕಡಿವಾಣ ಹಾಕಿ, ಜನದಟ್ಟಣೆ ಸೇರದಂತೆ ಸಾಂಪ್ರಾದಾಯಿಕ, ಸಾಂಕೇತಿಕವಾಗಿ ನೆರವೇರಿಸಲು ತೀರ್ವನಿಸಲಾಗಿದೆ.
    | ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

    ಮೈಸೂರು ದಸರಾ ಕಾರ್ಯಕ್ರಮಗಳನ್ನು ಮುಚ್ಚಿದ ಸಭಾಂಗಣದಲ್ಲಿ ಆಯೋಜಿಸಿ, ಚಿತ್ರೀಕರಿಸಿಕೊಂಡು ಟಿವಿ ವಾಹಿನಿಗಳಲ್ಲಿ ಪ್ರಸಾರ ಮಾಡಬೇಕೆಂಬ ಸಲಹೆಗಳು ಬಂದಿದ್ದು, ಮತ್ತೊಮ್ಮೆ ರ್ಚಚಿಸಿ ಸಿಎಂ ಗಮನಕ್ಕೆ ತರಲಾಗುವುದು.

    | ಸಿ.ಟಿ.ರವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

    ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ: ನ್ಯಾಯಮೂರ್ತಿ ವಿ.ಪಾರ್ಥಿಬನ್ ಐತಿಹಾಸಿಕ ಆಬ್ಸರ್ವೇಶನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts