More

    ಜಂಬೂಸವಾರಿ ವೇಳೆ ಭದ್ರತಾ ವೈಫಲ್ಯ: ಅಭಿಮನ್ಯು ಬಳಿ ಹೋಗಲೆತ್ನಿಸಿದ ಮಂಗಳಮುಖಿಯರ ತಂಡ

    ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ ಎದ್ದುಕಂಡಿತು. ಅಂಬಾರಿ ಮೆರವಣಿಗೆ ಆಗಮಿಸುವ ಮುನ್ನವೇ ಸಯ್ಯಜಿರಾವ್ ರಸ್ತೆಯಲ್ಲಿ ಜನರು ಓಡಾಡಲು ಪ್ರಾರಂಭಿಸಿದರು.

    ರಸ್ತೆಗೆ ಓಡಿ ಬರುತ್ತಿದ್ದ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜಿಸಿದರೂ ಸಾರ್ವಜನಿಕರು ರಸ್ತೆಗೆ ಬರುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಅಂಬಾರಿ ಮೆರವಣಿಗೆ ಕೆ.ಆರ್. ವೃತ್ತ ದಾಟಿದ ನಂತರ ಸಾರ್ವಜನಿಕರು ರಸ್ತೆಗೆ ಬರುತ್ತಿರುವುದು ಹೆಚ್ಚಾಯಿತು. ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಯಿತು.

    ಬಂಬೂ ಬಜಾರ್ ಬಳಿ‌ ಮಂಗಳಮುಖಿಯರ ತಂಡ ರಸ್ತಗೆ ಬಂದು ನೃತ್ಯ ಮಾಡುತ್ತಿದ್ದರು. ಬಳಿಕ ಅಂಬಾರಿ ಹೊತ್ತು ಬರುತ್ತಿದ್ದ ಅಭಿಮನ್ಯು ಬಳಿ ತೆರಳಲು ಮುಂದಾದರು. ಈ ವೇಳೆ ಅವರನ್ನು ದೂರ ಕಳಹಿಸಲಾಯಿತು.

    ರಾಜ ಮಾರ್ಗದಲ್ಲಿ ಜನ ಜಾತ್ರೆ!
    ಈ ಬಾರಿ ಮಾಧ್ಯಮದ ಹೆಸರಿನಲ್ಲಿ ಹೆಚ್ಚು ಜನಕ್ಕೆ ಪಾಸ ವಿತರಣೆ ಮಾಡಲಾಗಿತ್ತು. ಅವರು ಸೇರಿದಂತೆ ವಿವಿಧ ಉಪ ಸಮಿತಿಯ ಸದಸ್ಯರು ಮೆರವಣಿಗೆಯಲ್ಲಿ ಅಂಬಾರಿ ಆನೆಯ ಮುಂದೆಯೇ ಸಾಗುತ್ತಿದ್ದರು. ಸ್ವಯಂ ಸೇವಕರ ಪಾಸ್​ ಪಡೆದಿದ್ದ ನೂರಾರು ಜನರೂ ಇದ್ದರು. ಹಾಗಾಗಿ, ರಾಜಮಾರ್ಗದಲ್ಲಿ ಜನ ಜಾತ್ರೆಯೇ ಸೇರಿತ್ತು. ಹಾಗಾಗಿ, ಕೆಲವೊಂದು ‌ಕಡೆ ಕಲಾವಿದರು, ಪೊಲೀಸರಿಗಿಂತ ವಿವಿಧ ಪಾಸ್ ಪಡೆದಿದ್ದ ಜನರೇ ಹೆಚ್ಚಾಗಿದ್ದರು.

    ನಕಲಿ ಪಾಸ್
    ಕೆ.ಆರ್.ಆಸ್ಪತ್ರೆ ಬಳಿ ಜಂಬೂಸವಾರಿ ಮೆರವಣಿಗೆ ಸಾಗುತ್ತಿದ್ದ ವೇಳೆ, ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನ ಗಮನಿಸಿದ ಡಿಸಿಪಿ ಎಂ.ಮುತ್ತುರಾಜ್ ಅವರು, ಪಾಸ್ ತೋರಿಸುವಂತೆ ಕೇಳಿದಾಗ, ಕಲರ್ ಜೆರಾಕ್ಸ್ ಪಾಸ್ ತೋರಿಸಿದ್ದಾನೆ. ನಕಲಿ ಪಾಸ್ ಎಂದು ಪತ್ತೆಯಾದ ಬಳಿಕ ಆತನನ್ನು ಮೆರವಣಿಗೆ ಆಚೆ ಕಳುಹಿಸಲಾಯಿತು.

    ವಿಜಯನಗರದಲ್ಲಿ ಎರಡು ಕಾಲುಗಳುಳ್ಳ ಕರು ಜನನ: ಏನಿದು ಅಚ್ಚರಿ ಎಂದ ಗ್ರಾಮಸ್ಥರು!

    ಜಂಬೂಸವಾರಿ ಮಾರ್ಗದಲ್ಲಿ ನೂಕುನುಗ್ಗಲು: ಜನರ ನಿಯಂತ್ರಣಕ್ಕೆ ಲಾಠಿ ಬೀಸಿದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts