More

    ದೇವಾಲಯಗಳ ರಕ್ಷಣೆಗೆ ಮುಂದಾದ ಸರ್ಕಾರ: ವಿಧಾನಸಭೆಯಲ್ಲಿ ವಿಧೇಯಕ

    ಬೆಂಗಳೂರು: ಸುಪ್ರೀಂ ಕೋರ್ಟ್​ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ಹಲವು ದೇವಸ್ಥಾನಗಳನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಜನಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಅಧಿಕಾರವಿಲ್ಲದೆ ನಿರ್ಮಿಸಲ್ಪಟ್ಟಿರುವ ದೇವಾಲಯಗಳು ಮತ್ತು ಇತರ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ ಒದಗಿಸುವ ಹೊಸತೊಂದು ಕಾನೂನು ಜಾರಿಗೊಳಿಸಲು ಮುಂದಾಗಿದೆ.

    ಧಾರ್ಮಿಕ ಕಟ್ಟಡಗಳ ರಕ್ಷಣೆಗಾಗಿ ಕಾನೂನು ರಚಿಸಬೇಕೆಂದು ಇಂದು ಬೆಳಿಗ್ಗೆ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆ ಪ್ರಕಾರವಾಗಿ, ವಿಧಾನಸಭೆಯಲ್ಲಿ ‘ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಅಧಿನಿಯಮ, 2021’ಕ್ಕೆ ಪೂರ್ವಭಾವಿ ವಿಧೇಯಕವನ್ನು ಸರ್ಕಾರ ಮಂಡಿಸಿದೆ.

    ಇದನ್ನೂ ಓದಿ: ತವರುಮನೆಗೆ ಬಂದಿದ್ದ ಮಹಿಳೆ ಹೆಣವಾದಳು; ಪುರಸಭೆ ಆವರಣದಲ್ಲಿ ಪತ್ತೆಯಾದ ಶವ!

    “ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಅಡಕವಾಗಿದ್ದರೂ ಅಥವಾ ಯಾವುದೇ ನ್ಯಾಯಾಲಯ, ನ್ಯಾಯಾಧೀಕರಣ ಅಥವಾ ಪ್ರಾಧಿಕಾರದ ಯಾವುದೇ ತೀರ್ಪು, ಡಿಕ್ರಿ ಅಥವಾ ಆದೇಶ ಏನೇ ಇದ್ದರೂ, ಈ ಹೊಸ ಕಾನೂನು ಜಾರಿಯಾದ ನಂತರ ಹಾಲಿ ಅಸ್ತಿತ್ವದಲ್ಲಿರುವ ಎಲ್ಲಾ ಧಾರ್ಮಿಕ ಕಟ್ಟಡಗಳನ್ನು ಸಂರಕ್ಷಿಸತಕ್ಕದ್ದು” ಎಂದು ಈ ವಿಧೇಯಕದಲ್ಲಿ ಹೇಳಲಾಗಿದೆ.

    ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರವಾಗಿ ಅಸ್ತಿತ್ವದಲ್ಲಿರುವ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಲು ಈ ಕಾನೂನು ಅನ್ವಯಿಸುತ್ತದೆ. ಮತ್ತೊಂದೆಡೆ, ರಾಜ್ಯ ಸರ್ಕಾರ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರವು ಭವಿಷ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕಟ್ಟಡವನ್ನು ನಿರ್ಮಿಸಲು ಅವಕಾಶ ಕೊಡತಕ್ಕದ್ದಲ್ಲ ಎಂದೂ ವಿಧೇಯಕಯಲ್ಲಿ ಪ್ರಸ್ತಾವನೆ ಮಾಡಲಾಗಿದೆ.

    ‘ಗಂಡಸಿನಂಥ ದೇಹದವಳು ತಾಪ್ಸೀನೇ’ ಎಂದ ಟ್ವೀಟ್​ಗೆ ನಟಿ ನೀಡಿದ ಉತ್ತರ ನೋಡಿ!

    ಟೀಚರ್​​ಗೆ ಗಿಫ್ಟ್ ತಂದಿದೀನಿ ಎನ್ನುತ್ತಾ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ!

    ಕಮ್ಯಾಂಡೋ ವೇಷ ಧರಿಸಿ ಐಎಸ್​ಐಗೆ ಸೇನೆ ಮಾಹಿತಿ ಕಳಿಸ್ತಿದ್ದ! ಬೆಂಗಳೂರಲ್ಲಿ ಬಟ್ಟೆ ವ್ಯಾಪಾರ ಮಾಡ್ತಿದ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts