More

    ಸರ್ಕಾರದ ಯೋಜನೆಗಳು ಸದ್ಬಳಕೆಯಾಗಲಿ

    ಯಲಬುರ್ಗಾ: ಮಕ್ಕಳ ದೈಹಿಕ ಕ್ಷಮತೆ ಹಾಗೂ ಕ್ರಿಯಾಶೀಲತೆಗೆ ಪೌಷ್ಟಿಕ ಆಹಾರ ಅಗತ್ಯ ಎಂದು ಗ್ರಾಪಂ ಸದಸ್ಯ ಬಸಪ್ಪ ಅಕ್ಕಿ ಹೇಳಿದರು.

    ಇದನ್ನೂ ಓದಿ: ಪ್ರತಿಟನ್ ಕಬ್ಬಿಗೆ ರಾಜ್ಯ ಸರ್ಕಾರ ಎಷ್ಟು FRP ಫಿಕ್ಸ್ ಮಾಡಿದೆ ಗೋತ್ತಾ?

    ತಾಲೂಕಿನ ಮುಧೋಳ ಗ್ರಾಮದ ತ್ರಿಲಿಂಗೇಶ್ವರ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಗ್ರಾಪಂ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನದಲ್ಲಿ ಮಾತನಾಡಿದರು.

    ಮಕ್ಕಳು ಪೌಷ್ಟಿಕತೆಯಿಂದ ಬಳಲಬಾರದು ಎನ್ನುವ ಸದುದ್ದೇಶದಿಂದ ಸರ್ಕಾರ, ಇಲಾಖೆ ಮೂಲಕ ನಾನಾ ಯೋಜನೆ ಜಾರಿಗೊಳಿಸಿದೆ. ಈ ಬಗ್ಗೆ ಅರಿವು ಮೂಡಿಸಬೇಕಿದೆ.

    ತಾಯಂದಿರುವ ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮಕ್ಕಳಲ್ಲಿ ಪೌಷ್ಟಿಕ ಆಹಾರದ ಕೊರತೆಯಾಗದಂತೆ ಆರೋಗ್ಯದ ಕಡೆಗೆ ಹೆಚ್ಚು ಮಹತ್ವ ನೀಡಬೇಕು ಎಂದರು.

    ಅಂಗನವಾಡಿ ವಲಯ ಮೇಲ್ವಿಚಾರಕಿ ಚನ್ನಮ್ಮ ಶಾನುಭೋಗರ ಮಾತನಾಡಿ, ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ನಿರ್ಮೂಲನೆಗೆ ಸರ್ಕಾರ ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಪೋಷಣ್ ಅಭಿಯಾನ ಆಯೋಜಿಸಿದೆ ಎಂದರು.

    ಬಸವಜ್ಯೋತಿ ಶಾಲೆಯ ಅಧ್ಯಕ್ಷ ಶಿವಶರಣಪ್ಪ ಬಳಿಗಾರ, ಗ್ರಾಪಂ ಸದಸ್ಯರಾದ ಮಹಾದೇವಿ ತಳವಾರ್, ಅನಿತಾ ವಿವೇಕಿ ಗಣ್ಯರಾದ ಬಸವರಾಜ ಶ್ರೀಗಿರಿ, ಭೀಮಪ್ಪ ವಡ್ಡರ, ವೀರಭದ್ರಪ್ಪ ನಿಡಗುಂದಿ, ಈರಮ್ಮ ಮಂಡ್ಲಿಗೇರಿ, ಬಸಮ್ಮ ಉಣಚಗೇರಿ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts