More

    ಪ್ರತಿಟನ್ ಕಬ್ಬಿಗೆ ರಾಜ್ಯ ಸರ್ಕಾರ ಎಷ್ಟು FRP ಫಿಕ್ಸ್ ಮಾಡಿದೆ ಗೋತ್ತಾ?

    ಸಕ್ಕರೆ ಇಲಾಖೆ ಕರಡು ಆದೇಶ, ಇಲ್ಲಿದೆ ಕಾರ್ಖಾನೆವಾರು FRP ಸಮಗ್ರ ಮಾಹಿತಿ..

    ಬೆಂಗಳೂರು: ರಾಜ್ಯ ಸರ್ಕಾರದ ಸಕ್ಕರೆ ಇಲಾಖೆಯು ಪ್ರಸಕ್ತ ಸಾಲಿನ ಕಬ್ಬು ನುರಿಸುವ ಸಕ್ಕರೆ ಹಂಗಾಮಿನ ಹೊಸ ಎ್ಆರ್‌ಪಿ ದರವನ್ನು ನಿಗದಿಪಡಿಸಿ, ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಕಳೆದ ವರ್ಷ ಕಬ್ಬು ನುರಿಸಿ, ಸಕ್ಕರೆ ಉತ್ಪಾದನೆ ಮಾಡಿ ಸರ್ಕಾರಕ್ಕೆ ತೋರಿಸಿರುವ ಇಳುವರಿ ಆಧಾರದ ಮೇಲೆ ಈ ದರವನ್ನು ನಿರ್ಧರಿಸಲಾಗಿದೆ ಎಂದು ಕಬ್ಬು ಅಭಿವೃದ್ಧಿ ಆಯುಕ್ತರು ತಿಳಿಸಿದ್ದಾರೆ. ಸಕ್ಕರೆ ಇಲಾಖೆ ಮೂಲಗಳ ಪ್ರಕಾರ ಇದೇ ಮೊದಲ ಬಾರಿಗೆ ಇಷ್ಟೊಂದು ಎ್ಆರ್‌ಪಿ ದರ ನೀಡುತ್ತಿರುವುದರಿಂದ ರೈತರಿಗೆ ಅನುಕೂಲವಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರದ ನಿರ್ದೇಶನವೂ ಕಾರಣ ಎಂದು ಹೇಳಲಾಗಿದೆ.
    2022-23ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿರುವ ರಾಜ್ಯದ ಸಕ್ಕರೆ ಕಾರ್ಖಾನೆಗಳು ಸಲ್ಲಿಸಿರುವ ಆರ್‌ಟಿಸಿ ವರದಿಗಳ ಪ್ರಕಾರ ಮತ್ತು ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ತಿದ್ದುಪಡಿ ಅಧಿನಿಯಮ 2014ರ ಕಲಂ 9(1)ಪ್ರಕಾರದ ಮೊದಲ ಕಂತಿನಲ್ಲಿ ಪಾವತಿಸಬೇಕಾದ ನ್ಯಾಯಯುತ ಹಾಗೂ ಲಾಭದಾಯಕ ಬೆಲೆಯನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ. ಈ ಕರಡು ಆದೇಶಕ್ಕೆ ನಿಮ್ಮ ಆಕ್ಷೇಪಣೆಗೆನಾದರೂ ಇದ್ದಲ್ಲಿ ಏಳು ದಿನಗಳ ಒಳಗಾಗಿ ಸಕ್ಕರೆ ನಿರ್ದೇಶನಾಲಯಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ರಾಜ್ಯದ ದಕ್ಷಿಣ ಭಾಗದ 11 ಸಕ್ಕರೆ ಕಾರ್ಖಾನೆಗಳಿಗೆ ಉಲ್ಲೇಖ(2)ರಂತೆ ಈಗಾಗಲೇ ಎ್ಆರ್‌ಪಿ ನಿಗದಿಪಡಿಸಿರುವುದರಿಂದ ಈ ಕಾರ್ಖಾನೆಗಳು ಆಕ್ಷೇಪಣೆ ಸಲ್ಲಿಸುವ ಅಗತ್ಯವಿಲ್ಲ. ಇನ್ನೂಳಿದ ಕಾರ್ಖಾನೆಗಳು ಆಕ್ಷೇಪಣೆ ಸಲ್ಲಿಸಬಹುದು ಎಂದು ಸಕ್ಕರೆ ಇಲಾಖೆಯು ತನ್ನ ಆದೇಶದಲ್ಲಿ ಹೇಳಿದೆ.

    ಕಾರ್ಖಾನೆವಾರು FRP ದರ

    ಶೇ.10.25ರಷ್ಟು ಸಕ್ಕರೆ ಇಳುವರಿ ಇರುವ ಪ್ರತಿ ಮೆ.ಟನ್ ಕಬ್ಬಿಗೆ 3150 ರೂ., ಸೇ.10.25ಕ್ಕೆ ಮೇಲ್ಪಟ್ಟು ಇಳುವರಿಗೆ ನಂತರ ಶೇ.1ರಷ್ಟು ಇಳುವರಿಗೆ ಟನ್‌ಗೆ 307ರಂತೆ ಹೆಚ್ಚುವರಿ ಬೆಲೆ, ಶೇ.10.25ಕ್ಕಿಂತ ಕಡಿಮೆ ಹಾಗೂ 9.50 ಕ್ಕೆ ಮೇಲ್ಪಟ್ಟ ಇಳುವರಿ ಹೊಂದಿರುವ ಸಕ್ಕರೆ ಕಾರ್ಖಾನೆಗಳಿಗೆ ಶೇ.1ರಷ್ಟು ಪ್ರತಿಟನ್‌ಗೆ 307 ರೂ.ಗಳ ಸರಾಸರಿಯಂತೆ ಎ್ಆರ್‌ಪಿ ಬೆಲೆ ಕಡಿಮೆ ಮಾಡುವುದು. ಶೇ.9.50ಕ್ಕಿಂತ ಕಡಿಮೆ ಸಕ್ಕರೆ ಇಳುವರಿ ಹೊಂದಿರುವ ಕಾರ್ಖಾನೆಗಳು 2920 ರೂ.ಎ್ಆರ್‌ಪಿ ಬೆಲೆಯನ್ನು (ಎಕ್ಸ್ ಗೇಟ್ ದರ)ನೀಡಬೇಕಾಗಿದೆ.

    ಕಾರ್ಖಾನೆ ಹೆಸರು ಮತ್ತು 2023-24ಸಾಲಿನ ಹಂಗಾಮಿಗೆ
    FRP ದರ(ರೂ.ಗಳಲ್ಲಿ)

    ಬೆಳಗಾವಿ ಜಿಲ್ಲೆ
    1)ಅರಿಹಂತ ಶುಗರ್ಸ್‌- 3601
    2)ಅಥಣಿ ಶುಗರ್ಸ್‌- 3518
    3)ಬೆಳಗಾವಿ ಶುಗರ್ಸ್‌ 3657
    4)ಚಿದಾನಂದ ಬ. ಕೋರೆ ಶುಗರ್ಸ್‌ 3586
    5)ಇಐಡಿ ಪ್ಯಾರಿ ಶುಗರ್ಸ್‌ 3657
    6)ಘಟಪ್ರಭಾ ಶುಗರ್ಸ್‌ 3346
    7)ಗೋಕಾಕ ಶುಗರ್ಸ್‌ 3641
    8)ಹಾಲಸಿದ್ಧನಾಥ ಶುಗರ್ಸ್‌ 3611
    9)ಹರ್ಷ ಶುಗರ್ಸ್‌ 3371
    10)ಹೀರಣ್ಯಕೇಶಿ ಶುಗರ್ಸ್‌ 3488
    11)ಕೃಷ್ಣಾ ಶುಗರ್ಸ್‌ 3528
    12)ಲೈಲಾ ಶುಗರ್ಸ್‌ 3396
    13)ಮಲಪ್ರಭಾ ಶುಗರ್ಸ್‌ 3165
    14)ರೇಣುಕಾ ಶುಗರ್ಸ್‌(ರಾಯಬಾಗ) 3448
    15)ರೇಣುಕಾ ಶುಗರ್ಸ್‌(ಬುರ್ಲಟ್ಟಿ) 3534
    16)ರೇಣುಕಾ ಶುಗರ್ಸ್‌(ಮುನವಳ್ಳಿ) 3773
    17)ಸತೀಶ ಶುಗರ್ಸ್‌ 3635
    18)ಸಂಗಮ್ ಶುಗರ್ಸ್‌ 3589
    19)ಶಿರಗುಪ್ಪಿ ಶುಗರ್ಸ್‌ 3491
    20)ಶಿವಶಕ್ತಿ ಶುಗರ್ಸ್‌ 3623
    21)ಶಿವಸಾಗರ ಶುಗರ್ಸ್‌ 3485
    22)ಸೋಮೇಶ್ವರ ಶುಗರ್ಸ್‌ 3657
    23)ಸೌಭಾಗ್ಯಲಕ್ಷ್ಮೀ ಶುಗರ್ಸ್‌ 3089
    24)ಮಾರ್ಕಂಡೇಯ ಶುಗರ್ಸ್‌ 3475
    25)ಉಗಾರ ಶುಗರ್ಸ್‌ (ಕಾಗವಾಡ) 3564
    26)ವೆಂಕಟೇಶ್ವರ್ ಪಾವರ್ ಶುಗರ್ಸ್‌ 3693

    27)ವಿಶ್ವರಾಜ ಶುಗರ್ಸ್‌ 3632

    ಬಾಲಕೋಟ ಜಿಲ್ಲೆ
    28)ಬದಾಮಿ ಶುಗರ್ಸ್‌ 3402
    29)ಬೀಳಗಿ ಶುಗರ್ಸ್‌ 3377
    30)ಇಐಡಿ ಪ್ಯಾರಿ ಶುಗರ್ಸ್‌ 3629
    31)ಜೆಮ್ ಶುಗರ್ಸ್‌ 3472
    32)ಗೋದಾವರಿ ಶುಗರ್ಸ್‌ 3614
    33)ಇಂಡಿಯನ್ ಕೇನ್ ಶುಗರ್ಸ್‌ 3589
    34)ಜಮಖಂಡಿ ಶುಗರ್ಸ್‌ 3478
    35)ಮೆಲ್‌ಬ್ರೋ ಶುಗರ್ಸ್‌ 3374
    36)ಎಂಆರ್‌ಎನ್ ಕೇನ್ ಪವರ್ ಶುಗರ್ಸ್‌ 3396
    37)ನಿರಾಣಿ ಶುಗರ್ಸ್‌ 3482
    38)ಪ್ರಭುಲಿಂಗೇಶ್ವರ ಶುಗರ್ಸ್‌ 3611
    39)ರನ್ನ ಶುಗರ್ಸ್‌(ಮುಧೋಳ) 3482
    40)ಕೇದಾರನಾಥ ಶುಗರ್ಸ್‌ 3411
    41)ಸಾಯಿ ಪ್ರಿಯಾ ಶುಗರ್ಸ್‌ 3515
    ಬಳ್ಳಾರಿ ಜಿಲ್ಲೆ
    42)ಎನ್‌ಎಸ್‌ಎಲ್ ಶುಗರ್ಸ್‌ 2981
    ಬೀದರ ಜಿಲ್ಲೆ
    43)ಭಾಲ್ಕೇಶ್ವರ್ ಶುಗರ್ಸ್‌ 3138
    44)ಬೀದರ ಕಿಸಾನ್ ಶುಗರ್ಸ್‌ 2920
    45)ಮಹಾತ್ಮಗಾಂಧಿ ಶುಗರ್ಸ್‌(ಭಾಲ್ಕಿ) 2920
    46)ನಾರಂಜಾ ಶುಗರ್ಸ್‌ 2920
    47)ಭವಾನಿ ಶುಗರ್ಸ್‌ 2920
    ಚಾಮರಾಜನಗರ ಜಿಲ್ಲೆ
    48)ಬನ್ನಾರಿ ಅಮನ್ ಶುಗರ್ಸ್‌ 3027
    ದಾವಣಗೇರೆ ಜಿಲ್ಲೆ
    49)ದಾವಣಗೇರೆ ಶುಗರ್ಸ್‌ 2920
    ಗದಗ ಜಿಲ್ಲೆ
    50)ವಿಜಯನಗರ ಶುಗರ್ಸ್‌ 2920
    ಹಾಸನ ಜಿಲ್ಲೆ
    51)ಚಾಮುಂಡೇಶ್ವರಿ ಶುಗರ್ಸ್‌ 2920
    ಹಾವೇರಿ ಜಿಲ್ಲೆ
    52)ಜಿಎಂ ಶುಗರ್ಸ್‌ 2923
    53)ವಿಐಎನ್‌ಪಿ ಡಿಸ್ಟೀಲರಿಸ್ ಮತ್ತು ಶುಗರ್ಸ್‌ 3073
    ಕಲಬುರಗಿ ಜಿಲ್ಲೆ
    54)ಕೆಪಿಆರ್ ಶುಗರ್ 3353
    55)ಎನ್‌ಎಸ್‌ಎಲ್ ಶುಗರ್ಸ್‌ 3018
    56)ರೇಣುಕಾ ಶುಗರ್ಸ್‌(ಅ್ಜಲ್‌ಪುರ) 3337
    57)ಉಗಾರ ಶುಗರ್ಸ್‌ 3150
    ಮಂಡ್ಯ ಜಿಲ್ಲೆ:
    58)ಕೋರಮಂಡಲ್ ಶುಗರ್ಸ್‌ 2944
    59)ಮೈಸೂರು ಶುಗರ್ಸ್‌ 2920
    60)ಎಂಆರ್‌ಎನ್ ಕೇನ್ 2920
    61)ಎನ್‌ಎಸ್‌ಎಲ್ ಶುಗರ್ಸ್‌ 2920
    62)ಚಾಮುಂಡೇಶ್ವರಿ ಶುಗರ್ಸ್‌ 2944
    ಮೈಸೂರ ಜಿಲ್ಲೆ
    63)ಬನ್ನಾರಿ ಅಮ್ಮನ್ 2947
    ಉತ್ತರ ಕನ್ನಡ ಜಿಲ್ಲೆ
    64)ಇಐಡಿ ಪ್ಯಾರಿ 3678
    ವಿಜಯನಗರ ಜಿಲ್ಲೆ
    65)ಇಂಡಿಯನ್ ಶುಗರ್ಸ್‌ 3156
    66)ಜಮಖಂಡಿ ಶುಗರ್ಸ್‌ 3254
    67)ಕೆಪಿಆರ್ ಶುಗರ್ಸ್‌ 3365
    68)ಮನಾಲಿ ಶುಗರ್ಸ್‌ 2920
    69)ನಂದಿ ಶುಗರ್ಸ್‌ 3454
    70)ಸಂಗಮನಾಥ ಶುಗರ್ಸ್‌ 2920
    71)ಬಾಲಾಜಿ ಶುಗರ್ಸ್‌ 3374
    72)ಬಸವೇಶ್ವರ ಶುಗರ್ಸ್‌ 3408
    73)ಭೀಮಾಶಂಕರ್ ಶುಗರ್ಸ್‌ 3221
    ವಿಜಯನಗರ ಜಿಲ್ಲೆ
    74)ಮೈಲಾರ್ ಶುಗರ್ಸ್‌ 3015
    75)ಶಾಮನೂರ ಶುಗರ್ಸ್‌ 2920
    76)ಕೋರ್‌ಗ್ರೀನ್ ಶುಗರ್ಸ್‌ 3138 .

    ‘ವಿಜಯವಾಣಿ’ ಇಂಪ್ಯಾಕ್ಟ್

    ಕೇಂದ್ರ ಸರ್ಕಾರ ಪ್ರತಿಟನ್ ಕಬ್ಬಿಗೆ 3150 ರೂ. FRP ನಿಗದಿ ಮಾಡಿದ್ದರೂ, ರಾಜ್ಯ ಸರ್ಕಾರ ಇನ್ನೂವರೆಗೂ FRP ನಿಗದಿ ಮಾಡದೇ ಇರುವ ಕುರಿತು ‘ವಿಜಯವಾಣಿ ’ಕಳೆದ ಸೆ.10 ರಂದು ‘ದೇಶಾದ್ಯಂತ ಪ್ರತಿಟನ್ ಕಬ್ಬಿಗೆ 3150 FRP ನಿಗದಿ’ ಎಂಬ ವಿಶೇಷ ವರದಿಯನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts