More

    ಉತ್ತಮ ಸಾಧನೆಗೆ ಸನ್ನದ್ಧರಾಗಿ

    ಹೂವಿನಹಡಗಲಿ: ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗಳಲ್ಲಿ ಭಾಗಿದವರು ಉತ್ತಮವಾದ ವ್ಯಕ್ತಿತ್ವ ಮತ್ತು ಆರೋಗ್ಯ ಪಡೆಯಲು ಸಾಧ್ಯ ಎಂದು ವಿಎಸ್‌ಕೆ ವಿವಿ ದೈಹಿಕ ನಿರ್ದೇಶಕ ಡಾ.ಸಂಪತ್ ಹೇಳಿದರು.

    ಇದನ್ನೂ ಓದಿ: ಪ್ರಾನ್ಸ್​ ಶಿಕ್ಷಕಿಯಿಂದ ಸಂಜೀವ ಸುವರ್ಣ ಯಕ್ಷಸಾಧನೆ ಸಾಕ್ಷ್ಯಚಿತ್ರ

    ಪಟ್ಟಣದ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಎಸ್‌ಕೆ ವಿವಿಯಿಂದ ಆಯೋಜಿಸಿದ್ದ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಕರಾಟೆ ಪಂದ್ಯಾವಳಿ ಉದ್ಘಾಟಿಸಿ ಶನಿವಾರ ಮಾತನಾಡಿದರು.

    ಕ್ರೀಡೆಯಲ್ಲಿ ಸಾಧನೆ ಮಾಡುವವರಿಗೆ ವಿಶ್ವವಿದ್ಯಾಲಯ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆ, ಯೋಗ, ಧ್ಯಾನ, ವ್ಯಾಯಾಮಗಳನ್ನು ಅಳವಡಿಸಿಕೊಂಡಲ್ಲಿ ಆರೋಗ್ಯ ಸುಧಾರಣೆ ಸಾಧ್ಯ. ಎಲ್ಲ ಕ್ಷೇತ್ರಗಳಲ್ಲಿ ಕ್ರೀಡಾ ಪಟುಗಳಿಗೆ ಸಾಕಷ್ಟು ಅವಕಾಶಗಳಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿವಿಯ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಬೇಕು ಎಂದರು.

    ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗಳಲ್ಲಿ ಭಾಗಿಯಾಗಿ


    ಅಂತರ್ ಕಾಲೇಜು ಕರಾಟೆಯ ಮಹಿಳಾ ವಿಭಾಗದಲ್ಲಿ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೇತ್ರಾಬಾಯಿ ಬಂಗಾರದ ಪದಕ, ಅನುಪಮಾ ರಾಣಿ ಬೆಳ್ಳಿ ಪದಕ, ಪುರುಷರ ವಿಭಾಗದಲ್ಲಿ ಬಳ್ಳಾರಿಯ ಕಾಮರ್ಸ್ ಮತ್ತು ಮ್ಯಾನೇಜಮೆಂಟ್ ಕಾಲೇಜಿನ ಎರ‌್ರಿಸ್ವಾಮಿ ಬಂಗಾರ ಪದಕ, ಪಿ.ವಿರೇಶ್(ದ್ವಿ), ಕುಮಿತೆ ವಿಭಾಗದಲ್ಲಿ ಹಗರಿಬೊಮ್ಮನಹಳ್ಳಿಯ ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿಷೇಕ್ ಬಂಗಾರ ಪದಕ ಪಡೆದಿದ್ದಾರೆ.

    ಪ್ರಾಚಾರ್ಯ ವಿಜಯಕುಮಾರ, ವಿಜಯನಗರ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಮರಿಸ್ವಾಮಿ, ದೈಹಿಕ ನಿರ್ದೇಶಕಿ ರೀಟಾ, ಸಹಪ್ರಾಧ್ಯಾಪಕ ಡಾ.ಸತೀಶ ಪಾಟೀಲ, ಸಹಾಯಕ ಪ್ರಾಧ್ಯಾಕ ಮಾರಯ್ಯ, ಕೊಟ್ರೇಶ್, ಮುರುಗೇಶ, ದೊರೆಬಾಬು, ಉಮಾದೇವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts