More

    ಪ್ರಾನ್ಸ್​ ಶಿಕ್ಷಕಿಯಿಂದ ಸಂಜೀವ ಸುವರ್ಣ ಯಕ್ಷಸಾಧನೆ ಸಾಕ್ಷ್ಯಚಿತ್ರ

    ಉಡುಪಿ: ಯಕ್ಷಗಾನವನ್ನು ಕಲಿಸಿದ ಗುರುಗಳ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಿ ಗುರುದಣೆ ಸಲ್ಲಿಸಲು ದೂರದ ಫ್ರಾನ್ಸ್ ನಿಂದ ಆಗಮಿಸಿದ ಶಿಕ್ಷಕಿ ಭಾರತೀಯ ಮೂಲದ ಅನಿತಾ ಸಾವಿತ್ರಿ ಹರ್​ ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಯಕ್ಷಗಾನದ ಸಾಧನೆಗಳನ್ನು ದಾಖಲೀಕರಣ ಮಾಡುತ್ತಿದ್ದಾರೆ.

    ಕೇರಳದಲ್ಲಿ ಹುಟ್ಟಿರುವ ಅನಿತಾ ಅವರನ್ನು ಬಾಲ್ಯದಲ್ಲಿ ಫ್ರಾನ್ಸ್​ ದಂಪತಿ ದತ್ತು ಪಡೆದು ಫ್ರಾನ್ಸ್ನಲ್ಲಿ ಸಾಕಿದ್ದರು. ಪ್ರಸ್ತುತ ಆಕೆ ಪ್ಯಾರಿಸ್​ ನ ಸೋಬೋರ್ನ್ನೇ ವಿಶ್ವವಿದ್ಯಾಲಯದಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 48 ವಿದ್ಯಾರ್ಥಿಗಳಿಗೆ ಭಾರತೀಯ ಸಂಗೀತ ಕಲೆಗಳ ಬಗ್ಗೆ ಭೋದನೆ ಮಾಡುತ್ತಿದ್ದಾರೆ. ಸದ್ಯ ಎಥ್ನೋ ಮ್ಯೂಸಿಕಲೋಜಿ ಬಗ್ಗೆ ಪಿ.ಎಚ್​.ಡಿ ಅಧ್ಯಯನ ಮಾಡುತ್ತಿದ್ದು, ಅದರ ಭಾಗವಾಗಿ ಬಡ ಕುಟುಂಬದ ಬಾಲಕನೊಬ್ಬ ಯಕ್ಷಗಾನದಲ್ಲಿ ಹಂತ ಹಂತವಾಗಿ ಪರಿಣತಿ ಪಡೆದು, ಯಕ್ಷಗಾನದ ಗುರುವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡಿದ ಸಾಧನೆಯ ಸಾಕ್ಷ್ಯ ಚಿತ್ರವನ್ನು ದಾಖಲಿಕರಣ ಮಾಡಲು ಸಂಜೀವ ಸುವರ್ಣ ಅವರ ಮನೆಯಲ್ಲಿ ತಂಗಿದ್ದಾರೆ. ಯಕ್ಷಗಾನದ ಹೆಜ್ಜೆಗಾರಿಕೆ, ಬಣ್ಣಗಾರಿಕೆ, ಪೂರ್ವರಂಗ ಅಭ್ಯಾಸ ಮತ್ತು ಪ್ರದರ್ಶನದ ಬಗ್ಗೆ ಸುಮಾರು ಒಂದು ಗಂಟೆಯ ಸಾಕ್ಷ್ಯ ಚಿತ್ರಕ್ಕಾಗಿ ವಿಡಿಯೋ ದಾಖಲೀಕರಣ ಮಾಡುತ್ತಿದ್ದಾರೆ. ಇವರಿಗೆ ಸಿನಿಮಾ ಆಟೋಗ್ರಾಫಿ ಮತ್ತು 3 ಡಿ ಆ್ಯನಿಮೇಶನ್​ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಲ್ಯಾಟಿನ್​ ಅಮೇರಿಕಾ ಮೂಲದ ಫ್ರಾನ್ಸ್​ ಪ್ರಜೆ ಮೆಗೇಲಿ ಮೊಬಿಟಿಯವರು ಸಾಥ್​ ನೀಡಿದ್ದಾರೆ.

    ಭಾರತೀಯ ನೃತ್ಯ ಮತ್ತು ಕಲೆಯ ವಿಶೇಷ ಆಸಕ್ತಿ ಹೊಂದಿದ್ದ ಅನಿತಾ, 2004 ರಲ್ಲಿ ತನ್ನ 22 ನೇ ವಯಸ್ಸಿನಲ್ಲಿ ಭಾರತಕ್ಕೆ ಬಂದು ಭರತನಾಟ್ಯ ಕಲಿಯುತ್ತಿದ್ದಾಗ, ಕರಾವಳಿಯ ಗಂಡುಕಲೆ ಯಕ್ಷಗಾನದ ಬಗ್ಗೆ ಆಕರ್ಷಿತರಾಗಿದ್ದರು. ನಂತರ ಉಡುಪಿಗೆ ಆಗಮಿಸಿ ಯಕ್ಷಗಾನ ಬಗ್ಗೆ ಸಂಜೀವ ಸುವರ್ಣ ಅವರ ಬಳಿ ತರಬೇತಿ ಪಡೆದಿದ್ದರು. ನಂತರ ಐದಾರು ಬಾರಿ ಯಕ್ಷಗಾನ ಕಲಾ ಕೇಂದ್ರಕ್ಕೆ ಭೇಟಿ ನೀಡಿ, 3&-4 ತಿಂಗಳು ಇಲ್ಲಿಯೇ ಉಳಿದುಕೊಂಡು ಯಕ್ಷಗಾನವನ್ನು ಅಭ್ಯಾಸ ಮಾಡಿದ್ದಾರೆ. ಇದರಿಂದಾಗಿ ಆಕೆಗೆ ಪ್ಯಾರಿಸ್ನಲ್ಲಿ ಶಿಕ್ಷಕಿಯಾಗಿ ಕೆಲಸವೂ ಸಿಕ್ಕಿತ್ತು. ಈಗ ಯಕ್ಷಗಾನ ಕಲಿಸಿದ ಗುರುಗಳ ಬಗ್ಗೆಯೇ ಸಾಕ್ಷ$್ಯಚಿತ್ರ ತಯಾರಿಸಿ ಗುರುದಣೆ ಸಲ್ಲಿಸಲು ಆಣಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts