More

    ‘ಗೃಹಜ್ಯೋತಿ’ಯೂ ಗ್ಯಾರಂಟಿ: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಖಚಿತ ಎಂದು ಸರ್ಕಾರಿ ಆದೇಶ

    ಬೆಂಗಳೂರು: ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳ ಪೈಕಿ ಹೆಚ್ಚು ಗಮನ ಸೆಳೆದಿದ್ದು, ಪ್ರತಿ ಮನೆಗೂ ಉಚಿತವಾಗಿ ನೀಡುವ ಮಾಸಿಕ 200 ಯುನಿಟ್ ವಿದ್ಯುತ್. ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆದ್ದಲ್ಲಿಂದ ಅಧಿಕಾರ ಪಡೆದು ಸರ್ಕಾರ ರಚಿಸುವವರೆಗೂ ಹೆಚ್ಚು ಚರ್ಚೆ ಆಗಿದ್ದೇ ಈ ಗ್ಯಾರಂಟಿ.

    ಸರ್ಕಾರ ಉಚಿತವಾಗಿ ವಿದ್ಯುತ್ ಕೊಡುತ್ತದೆಯೋ ಇಲ್ಲವೋ ಎಂಬ ಬಗ್ಗೆ ಹೆಚ್ಚಿನ ಮಾತುಗಳು ಕೇಳಿಬಂದಿದ್ದವು. ನಾವು ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ನೂತನ ಸರ್ಕಾರ ರಚನೆ ಆಗುವ ಮೊದಲೇ ಕೆಲವರು ಹೇಳಿದ್ದು, ಮನೆಯಲ್ಲಿ ಫಲಕ ತಗುಲಿ ಹಾಕಿದ್ದು, ಬಿಲ್ ನೀಡಲು ಬಂದ ಅಧಿಕಾರಿಗಳಿಗೆ ಬಿಲ್ ನೀಡಬೇಡಿ ಎಂದು ಹೇಳಿದ್ದೂ ನಡೆದಿದೆ.

    ಇದನ್ನೂ ಓದಿ: ಐದೂ ‘ಗ್ಯಾರಂಟಿ’, ಆರನೇ ಭರವಸೆ ಗ್ಯಾರಂಟಿಯಾ?: ರಾಹುಲ್ ಗಾಂಧಿ ಹೇಳಿದ್ದೇನು?

    ರಾಜ್ಯದ ಪ್ರತಿ ಮನೆಗೆ ತಿಂಗಳಿಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಗೂ ಈಗ ನೂತನ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಪ್ರತಿ ಮನೆಗೂ ತಿಂಗಳಿಗೆ 200 ಯುನಿಟ್ ವಿದ್ಯುತ್ ಉಚಿತ ಖಚಿತ ಎಂದು ಸರ್ಕಾರ ತಿಳಿಸಿದೆ.

    ಇದನ್ನೂ ಓದಿ: ಅಮ್ಮ 20 ಸಾವಿರ ರೂ. ಕೊಡಲಿಲ್ಲ ಅಂತ ಪ್ರಾಣ ಕಳ್ಕೊಂಡ ಬಿಕಾಂ ಪದವೀಧರ!

    “ಗೃಹಜ್ಯೋತಿ ಯೋಜನೆ”ಯನ್ನು ಅನುಷ್ಠಾನಗೊಳಿಸುವ ಸಂಬಂಧ ಸರ್ಕಾರ ಇಂದು ನಡೆದ ಸಚಿವ ಸಂಪುಟದ ತೀರ್ಮಾನದಂತೆ ಆದೇಶವನ್ನು ಹೊರಡಿಸಲಾಗಿದೆ. ಆದರೆ ಈ ಯೋಜನೆ ಅನುಷ್ಠಾನಗೊಳಿಸುವ ಕುರಿತು ಅನುಸರಿಸಬೇಕಾದ ಕಾರ್ಯವಿಧಾನ, ಪಾಲಿಸಬೇಕಾದ ಷರತ್ತು ಮತ್ತು ನಿಬಂಧನೆಗಳನ್ನು ಪ್ರತ್ಯೇಕ ಆದೇಶದಲ್ಲಿ ತಿಳಿಸುವುದಾಗಿಯೂ ಸರ್ಕಾರ ತಿಳಿಸಿದೆ.

    'ಗೃಹಜ್ಯೋತಿ'ಯೂ ಗ್ಯಾರಂಟಿ: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಖಚಿತ ಎಂದು ಸರ್ಕಾರಿ ಆದೇಶ

    ಮಹಿಳೆಯರಿಗೆ ಸಿಹಿಸುದ್ದಿ: ಮಾಸಿಕ 2000 ರೂಪಾಯಿ; ಆದೇಶ ಮಾಡಿಯೇ ಬಿಡ್ತು ನೂತನ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts