More

    ಮ್ಯಾಕ್ಸ್‌ವೆಲ್ ಸಿಕ್ಸರ್ ಆರ್ಭಟಕ್ಕೆ ಮುರಿದ ಪ್ರೇಕ್ಷಕರ ಆಸನ, ಉತ್ತಮ ಕೆಲಸಕ್ಕೆ ನೆರವಾಯಿತು!

    ವೆಲ್ಲಿಂಗ್ಟನ್: ಇತ್ತೀಚೆಗೆ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿರುವ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 31 ಎಸೆತಗಳಲ್ಲಿ 70 ರನ್ ಸಿಡಿಸುವ ಮೂಲಕ ಆಸ್ಟ್ರೇಲಿಯಾದ ಗೆಲುವಿಗೆ ನೆರವಾದರು. ಈ ವೇಳೆ ಅವರು 8 ಬೌಂಡರಿ, 5 ಸಿಕ್ಸರ್ ಸಿಡಿಸಿ ವಿಜೃಂಭಿಸಿದರು. ಅಲ್ಲದೆ, ಮ್ಯಾಕ್ಸ್‌ವೆಲ್ 25 ಎಸೆತಗಳಲ್ಲೇ ಅರ್ಧಶತಕ ಪೂರೈಸಿ ಆರ್ಭಟಿಸಿದರು. ಜಿಮ್ಮಿ ನೀಶಾಮ್‌ರ ಒಂದು ಓವರ್‌ನಲ್ಲಿ 2 ಸಿಕ್ಸರ್, 4 ಬೌಂಡರಿ ಸಹಿತ 28 ರನ್ ಕಸಿದರು. ಈ ವೇಳೆ ಮ್ಯಾಕ್ಸಿ ಸಿಕ್ಸರ್ ಸಿಡಿಸಿದ ಚೆಂಡು, ಖಾಲಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರ ಆಸನ ಭಗ್ನಗೊಳಿಸಿತು. ಪಂದ್ಯದ ಮುಕ್ತಾಯದ ವೇಳೆಗೆ ಇದು ಒಂದು ಉತ್ತಮ ಕೆಲಸಕ್ಕೆ ನೆರವಾಯಿತು!

    ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್ ಸಿಡಿಸಿದ ಚೆಂಡು ವೆಸ್ಟ್‌ಪಾಕ್ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗೆ ಹೋಗಿ ಬಿದ್ದಿತು. ಕರೊನಾ ಭೀತಿಯಿಂದಾಗಿ ಪಂದ್ಯಕ್ಕೆ ಪ್ರೇಕ್ಷಕರಿಗೆ ಪ್ರವೇಶವಿರಲಿಲ್ಲ. ಇದರಿಂದ ಖಾಲಿಯಾಗಿದ್ದ ಸೀಟು, ಮ್ಯಾಕ್ಸ್‌ವೆಲ್ ಸಿಕ್ಸರ್ ರಭಸಕ್ಕೆ ಮುರಿದುಹೋಯಿತು. ಆದರೆ ಇದರಿಂದ ನಷ್ಟವೇನೂ ಆಗಲಿಲ್ಲ. ಯಾಕೆಂದರೆ ಇದೀಗ ಈ ಮುರಿದ ಸೀಟು ನಿರಾಶ್ರಿತ ಹೆಣ್ಣು ಮಕ್ಕಳ ನೆರವಿಗೆ ನಿಂತಿದೆ!

    ಇದನ್ನೂ ಓದಿ: ಮ್ಯಾಕ್ಸ್‌ವೆಲ್, ಅಗರ್ ಸಾಹಸ; ಕಿವೀಸ್ ವಿರುದ್ಧ 3ನೇ ಟಿ20 ಗೆದ್ದ ಆಸೀಸ್

    ಪಂದ್ಯದ ಬಳಿಕ ಈ ಮುರಿದ ಪ್ಲಾಸಿಕ್ ಆಸನಕ್ಕೆ ಹಸ್ತಾಕ್ಷರ ಹಾಕಿದ ಮ್ಯಾಕ್ಸ್‌ವೆಲ್ ಅದನ್ನು ಹರಾಜಿನ ಮೂಲಕ ಚಾರಿಟಿಗೆ ಹಣ ಸಂಗ್ರಹಿಸಲು ನೀಡಿದರು. ಇದರಿಂದ ಬಂದ ಹಣ ವೆಲ್ಲಿಂಗ್ಟನ್‌ನ ನಿರಾಶ್ರಿತ ಮಹಿಳೆಯರ ಟ್ರಸ್ಟ್‌ಗೆ ಹೋಗಲಿದೆ. ವೆಲ್ಲಿಂಗ್ಟನ್ ಕ್ರೀಡಾಂಗಣದ ಸಿಇಒ ಶೇನ್ ಹರ್ಮನ್, ಪಂದ್ಯದ ನಡುವೆಯೇ ಇಂಥದ್ದೊಂದು ಯೋಜನೆಯನ್ನು ಪ್ರಕಟಿಸಿದ್ದರು. ಇದಕ್ಕಾಗಿ ಅವರು ಪ್ಲಾಸ್ಟಿಕ್ ಆಸನಕ್ಕೆ ಹಸ್ತಾಕ್ಷರ ಹಾಕುವಂತೆ ಮ್ಯಾಕ್ಸ್‌ವೆಲ್‌ಗೆ ಮನವಿ ಸಲ್ಲಿಸಿದ್ದರು. ಪಂದ್ಯದ ಬಳಿಕ ಮ್ಯಾಕ್ಸ್‌ವೆಲ್ ಮುರಿದ ಸೀಟಿಗೆ ಸಹಿ ಹಾಕಿದರು. ಇನ್ನು ಆ ಮುರಿದ ಪ್ಲಾಸ್ಟಿಕ್ ಆಸನ ಎಷ್ಟು ಮೊತ್ತಕ್ಕೆ ಹರಾಜು ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ.

    ಕತಾರ್ ಓಪನ್‌ನಲ್ಲಿ ಸೆಮಿಫೈನಲ್‌ಗೇರಿದ ಸಾನಿಯಾ ಮಿರ್ಜಾ ಜೋಡಿ

    ಮದುವೆ ಸಿದ್ಧತೆಗಾಗಿ ಕ್ರಿಕೆಟ್‌ನಿಂದ ರಜೆ ಬಿಡುವು ಪಡೆದರೇ ಬುಮ್ರಾ?

    ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮ ಅವರ ಈ ಫೋಟೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts