More

    ಕರೊನಾ ಲಸಿಕಾ ನೀತಿ, ಖರೀದಿ ಬಗ್ಗೆ ಎಲ್ಲಾ ವಿವರ ಕೊಡಿ : ಸುಪ್ರೀಂ

    ನವದೆಹಲಿ : ಕರೊನಾ ಲಸಿಕೆಯ ಖರೀದಿಯ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪಾರದರ್ಶಕಗೊಳಿಸಬೇಕು ಎಂದು ವಿರೋಧ ಪಕ್ಷಗಳು ಈ ಹಿಂದೆ ಆಗ್ರಹಿಸಿದ್ದವು. ಇದೀಗ ಸುಪ್ರೀಂ ಕೋರ್ಟ್​ ಇದೇ ನಿಟ್ಟಿನಲ್ಲಿ ಆದೇಶ ಹೊರಡಿಸಿದ್ದು, ಈವರೆಗೆ ಕೇಂದ್ರ ಖರೀದಿಸಿರುವ ಲಸಿಕೆಗಳ ಪೂರ್ಣ ವಿವರಗಳನ್ನು ಕೇಳಿದೆ. ಜೊತೆಗೆ, ಕೇಂದ್ರ ಸರ್ಕಾರದ ಲಸಿಕಾ ನೀತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತನ್ನ ಮುಂದೆ ಇರಿಸುವಂತೆ ಸುಪ್ರೀಂ ಸೂಚಿಸಿದೆ.

    “ಕೋವಿಡ್​ 19 ಲಸಿಕಾ ನೀತಿಯ ಕುರಿತಾದ ಎಲ್ಲಾ ಪ್ರಮುಖ ದಾಖಲೆಗಳು ಮತ್ತು ಲಸಿಕಾ ನೀತಿಯನ್ನು ರೂಪಿಸುವುದರಲ್ಲಿ ಪಾತ್ರ ವಹಿಸಿದ ಫೈಲ್ ನೋಟಿಂಗ್ಸ್​ನ ಪ್ರತಿಗಳನ್ನು ಕೋರ್ಟ್​ಗೆ ಸಲ್ಲಿಸಿ, 2 ವಾರಗಳೊಳಗೆ ಅಫಿಡೆವಿಟ್ ಸಲ್ಲಿಸಬೇಕು” ಎಂದು ಸುಪ್ರೀಂ ಕೋರ್ಟ್​ನ ವಿಶೇಷ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಲಿಖಿತ ಆದೇಶ ಹೊರಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ, ಖಾಸಗಿ ಆಸ್ಪತ್ರೆಗಳಿಗೆ ವಿಭಿನ್ನ ಲಸಿಕೆ ದರಗಳಿರುವ ಬಗ್ಗೆ ಪ್ರಶ್ನೆ ಎತ್ತಿರುವ ರಿಟ್​ ಅರ್ಜಿ ಸಂದರ್ಭದಲ್ಲಿ ಈ ನಿರ್ದೇಶನ ನೀಡಿದೆ.

    ಇದನ್ನೂ ಓದಿ: ಎರಡನೇ ಡೋಸ್​ ಲಸಿಕೆ ಕೊರತೆ: ದೆಹಲಿ ಸರ್ಕಾರಕ್ಕೆ ಹೈಕೋರ್ಟ್​ ತರಾಟೆ!

    ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್.ಎನ್.ರಾವ್ ಮತ್ತು ಎಸ್.ರವೀಂದ್ರ ಭಟ್ ಜಾರಿಗೊಳಿಸಿರುವ ಈ ಆದೇಶದಲ್ಲಿ ಈವರೆಗಿನ ಲಸಿಕೆ ಖರೀದಿಯ ಪೂರ್ಣ ವಿವರವನ್ನು ಕೇಳಲಾಗಿದೆ. ಭಾರತದಲ್ಲಿ ಲಭ್ಯವಿರುವ ಮೂರು ಲಸಿಕೆಗಳ ಖರೀದಿಗಾಗಿ ಕೇಂದ್ರ ಸರ್ಕಾರ ನೀಡಿದ ಆರ್ಡರ್​ಗಳ ದಿನಾಂಕಗಳು, ಪ್ರತಿ ದಿನಾಂಕದಲ್ಲಿ ಆರ್ಡರ್ ಮಾಡಿದ ಲಸಿಕೆಯ ಪ್ರಮಾಣ ಮತ್ತು ಪೂರೈಕೆಗೆ ನಿಗದಿಪಡಿಸಲಾದ ದಿನಾಂಕ – ಇಷ್ಟನ್ನೂ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಈ ಅಂಶಗಳನ್ನು ಒಳಗೊಂಡಂತೆ ಈವರೆಗೆ ಪಡೆದುಕೊಂಡಿರುವ ಕೋವಾಕ್ಸಿನ್, ಕೋವಿಶೀಲ್ಡ್​ ಮತ್ತು ಸ್ಪುಟ್ನಿಕ್​ ವಿ ಲಸಿಕೆಗಳ ಖರೀದಿ ಇತಿಹಾಸ(ಪರ್ಚೇಸ್​ ಹಿಸ್ಟರಿ)ವನ್ನು 2 ವಾರಗಳಲ್ಲಿ ಸಲ್ಲಿಸಬೇಕೆಂದು ಸುಪ್ರೀಂ ನಿರ್ದೇಶಿಸಿದೆ. (ಏಜೆನ್ಸೀಸ್)

    ಒಪ್ಪಂದದ ಮೂಲಕ ಹೆಚ್ಚುವರಿ ವಿದ್ಯುತ್ ಮಾರಾಟಕ್ಕೆ ಕ್ರಮ: ಸಿಎಂ ಸೂಚನೆ

    ಐ ಡ್ರಾಪ್ಸ್​ನಿಂದ ಕರೊನಾದಿಂದ ಗುಣಮುಖನಾದೆ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ… ಆಸ್ಪತ್ರೆಯಲ್ಲಿ ನಿಧನ

    VIDEO | ‘ಚಿಕ್ಕ ಮಕ್ಕಳಿಗೆ ಇಷ್ಟೊಂದು ಕೆಲಸವೇಕೆ, ಮೋದಿ ಸಾಬ್ ?’ ಮುದ್ದು ಹುಡುಗಿಯ ಪ್ರಶ್ನೆ !

     

     

     

     

    (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts