More

    ಈಕೆಯ ಪ್ರಪ್ರಥಮ ರಕ್ತದಾನವೇ ಅವಿಸ್ಮರಣೀಯ; ಕರೊನಾ ಆತಂಕದಲ್ಲೂ ಇವಳಿಂದ ಉಳಿಯಿತು ಒಂದಲ್ಲ ಎರಡು ಜೀವ!

    ಹೈದರಾಬಾದ್:‌ ಸದ್ಯದ ಕರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಹತ್ತಿರದವರೇ ಕೋವಿಡ್‌ನಿಂದ ಸತ್ತರೂ ಆ ಸ್ಥಳಕ್ಕೆ ತೆರಳಿ ಅಂತಿಮ ದರ್ಶನ ಪಡೆಯಲು ಹಿಂದೆಮುಂದೆ ನೋಡುವುದು ಸಹಜ ಎಂಬಂತಾಗಿದೆ. ಇಂಥ ಕರೊನಾತಂಕದ ನಡುವೆಯೂ ಯುವತಿಯೊಬ್ಬಳು ಇದೇ ಮೊದಲ ಬಾರಿಗೆ ರಕ್ತದಾನ ಮಾಡಿದ್ದು, ಅದು ಈಕೆಯ ಪಾಲಿಗೆ ಅವಿಸ್ಮರಣೀಯ ಎಂಬಂತಾಗಿದೆ. ಮಾತ್ರವಲ್ಲ ಇವಳಿಂದ ನಡೆದ ಒಂದೇ ಒಂದು ರಕ್ತದಾನದಿಂದ ಒಂದಲ್ಲ-ಎರಡು ಜೀವ ಉಳಿದಂತಾಗಿದೆ.

    ಎಲ್ಲೆಡೆ ಕರೊನಾ ಆತಂಕ ಇರುವುದರಿಂದ ಇಪ್ಪತ್ತೆರಡು ವರ್ಷದ ಈ ಯುವತಿಗೆ ಮನೆಯವರು ಈಕೆಯ ಮೇಲಿನ ಕಾಳಜಿಯಿಂದ ಆಕ್ಷೇಪ ವ್ಯಕ್ತಪಡಿಸಿದರೂ, ಈಕೆ ಅದನ್ನು ನಯವಾಗಿಯೇ ನಿರಾಕರಿಸಿ ಜೀವ ಉಳಿಸುವ ಮಹತ್ಕಾರ್ಯವನ್ನು ಮಾಡಿದ್ದಾಳೆ. ಹೀಗೆ ರಕ್ತದಾನದ ಮೂಲಕ ಜೀವದಾನದ ಮಾಡಿದ ಈ ಯುವತಿಯ ಹೆಸರು ರವಳಿ ತಿಕ್ಕ. ಹೈದರಾಬಾದ್‌ ನಿವಾಸಿಯಾಗಿರುವ ಈಕೆ ಕೋವಿಡ್‌ ಆತಂಕದ ನಡುವೆಯೂ ಎರಡು ಗಂಟೆಗಳ ಕಾಲ ಪ್ರಯಾಣ ಮಾಡಿ ರಕ್ತದಾನ ಮಾಡಿದ್ದಾಳೆ.

    ಇದನ್ನೂ ಓದಿ: ಲಿಂಬೆರಸ, ಕೊಬ್ಬರಿ ಎಣ್ಣೆ, ಸ್ಟೀಮ್, ಬಿಸಿ ನೀರು: ಕರೊನಾಗೆ ಮನೆಮದ್ದು- ಡಾ. ವಿಜಯ ಸಂಕೇಶ್ವರ ಸಲಹೆ 

    ತೆಲಂಗಾಣದ ಮುಲುಗು ಎಂಬಲ್ಲಿ ಜಿ. ವಜೀರ ಎಂಬ 9 ತಿಂಗಳ ಗರ್ಭಿಣಿ ತೀವ್ರ ಅನಾರೋಗ್ಯದ ಸಮಸ್ಯೆಗೆ ಒಳಗಾಗಿದ್ದು, ಅವರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇತ್ತು. ಈ ಬಗ್ಗೆ ಅವರು ಹತ್ತಿರದ ಎಲ್ಲೆಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಮತ್ತೊಂದೆಡೆ ಇವರ ಪತಿ ಜಿ. ಪ್ರಶಾಂತ್ ಕರೊನಾ ಸೋಂಕಿತರಾಗಿದ್ದು, ಆ ಸಂಕಷ್ಟದ ನಡುವೆಯೇ ತಮ್ಮ ವಾಟ್ಸ್ಯಾಪ್‌ ಸ್ಟೇಟಸ್‌ ಸೇರಿ ಸೋಷಿಯಲ್‌ ಮೀಡಿಯಾ ಮೂಲಕ ರಕ್ತದ ಅಗತ್ಯದ ಬಗ್ಗೆ ವಿನಂತಿಸಿಕೊಂಡಿದ್ದರು.‌ ಇದನ್ನು ತಿಳಿದ ರವಳಿ ರಕ್ತದಾನಕ್ಕೆ ತೆರಳಲು ಮುಂದಾದಾಗ ಮನೆಯವರು ಕರೊನಾ ಕಾರಣಕ್ಕಾಗಿ ಹೋಗುವುದು ಬೇಡ ಎಂದಿದ್ದರು. ಆದರೂ ಅದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದ ರವಳಿ, 2 ಗಂಟೆ ಕಾಲ ಪ್ರಯಾಣ ಮಾಡಿ ಮುಲುಗುಗೆ ತೆರಳಿ ರಕ್ತದಾನ ಮಾಡಿದ್ದಾರೆ. ಈ ಮೂಲಕ ತಮ್ಮ ಪ್ರಪ್ರಥಮ ರಕ್ತದಾನವನ್ನು ಇವರು ಅವಿಸ್ಮರಣೀಯ ಆಗಿಸಿಕೊಂಡಿದ್ದಲ್ಲದೆ, ತಮ್ಮ ಈ ಕೆಲಸದಿಂದ ಹಲವರ ಗಮನ ಸೆಳೆದು, ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

    ಜಗತ್ತಿನಲ್ಲಿನ ಕೋವಿಡ್‌ ಸಾವುಗಳ ಪೈಕಿ ಕಾಲುಭಾಗದಷ್ಟು ಇಲ್ಲೇ ಆಗಿವೆ!: ಸಮೀಕ್ಷೆಯೊಂದರಿಂದ ಬಹಿರಂಗ

    ಮಗಳ ಮಡಿಲಲ್ಲೇ ಪ್ರಾಣ ಬಿಟ್ಟ ತಾಯಿ! ಜೆಸಿಬಿಯಲ್ಲಿ ಶವ ಹೊತ್ತೊಯ್ದ ಸ್ಥಳೀಯರು! ಮನಕಲಕುವ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts