More

    ಮಗಳನ್ನು ಕೊಂದು ರಾತ್ರೋರಾತ್ರಿ ಸುಟ್ಟು ಹಾಕಿದ ತಂದೆ-ತಾಯಿ: ಸಹೋದರಿಯಿಂದಲೇ ಕೊಲೆ ರಹಸ್ಯ ಬಯಲು

    ಪುರಿ: ತಂದೆ ಮತ್ತು ಮಲ ತಾಯಿ ಸೇರಿಕೊಂಡು 17 ವರ್ಷದ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಒಡಿಶಾದ ಪುರಿ ಜಿಲ್ಲೆಯ ಗೋಪ್​ ಪ್ರದೇಶದಲ್ಲಿ ನಿನ್ನೆ (ಜ.9) ರಾತ್ರಿ ನಡೆದಿದೆ. ಸಾಕ್ಷಿಯನ್ನು ನಾಶ ಮಾಡಲು ಮಗಳ ಶವವನ್ನು ಸುಟ್ಟು ಹಾಕಿರುವುದಾಗಿ ವರದಿಯಾಗಿದೆ.

    ಮೃತಳನ್ನು ಸೊನಾಲಿ ಮೊಹರಾಣ ಎಂದು ಗುರುತಿಸಲಾಗಿದೆ. ಹಿರಿಯ ಸಹೋದರಿ ರಂಜಿತಾ ಮೊಹರಾಣ ನೀಡಿದ ದೂರಿನ ಆಧಾರದ ಮೇಲೆ ಗೋಪ್​ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ದುರ್ಗಾಚರಣ ಮೊಹರಾಣ ಎಂಬುವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

    ವರದಿಗಳ ಪ್ರಕಾರ 2018 ರಲ್ಲಿ ಮೊದಲ ಪತ್ನಿ ಮೃತಪಟ್ಟ ಬಳಿಕ ದುರ್ಗಾಚರಣ್ 2020 ರಲ್ಲಿ ಮಮತಾ ಓಜಾ ಅವರನ್ನು ಎರಡನೇ ವಿವಾಹವಾದರು. ಮೃತ ಸೊನಾಲಿ ಮೊದಲ ಪತ್ನಿಯ ಮಗಳು. ಎರಡನೇ ಮದುವೆಯ ಬಳಿಕ ಆಕೆಯ ತಂದೆ, ಮಲತಾಯಿ ಮತ್ತು ಆಕೆಯ ಸಹೋದರ ಜೀವನ್ ಓಜಾ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಸಹೋದರಿ ರಂಜಿತಾ ಆರೋಪಿಸಿದ್ದಾರೆ.

    ಸೋನಾಲಿ ಸಾವಿನ ಬಗ್ಗೆ ಮಾಹಿತಿ ಪಡೆದ ರಂಜಿತಾ, ಗೋಪ್ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ತನ್ನ ತಂಗಿಯನ್ನು ಕೊಲ್ಲುವಲ್ಲಿ ದುರ್ಗಾಚರಣ್, ಮಮತಾ ಮತ್ತು ಜೀವನ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಕಳೆದ ರಾತ್ರಿಯೇ ಕೊಲೆ ಮಾಡಿ, ಸಾಕ್ಷಿ ನಾಶ ಮಾಡಲು ಗ್ರಾಮದ ಸ್ಮಶಾಣದಲ್ಲಿ ಮೃತದೇಹವನ್ನು ಸುಟ್ಟು, ಚಿತಾಭಸ್ಮವನ್ನು ಬಚ್ಚಿಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

    ಆಸ್ಕರ್​ ರೇಸ್​ನಲ್ಲಿ ‘ಕಾಂತಾರ’; ಎರಡು ವಿಭಾಗಗಳಲ್ಲಿ ಸ್ಪರ್ಧೆ

    ವಿಮಾನದ ಒಳಗಡೆ ಪ್ರಯಾಣಿಕರಿಬ್ಬರ ಬಡಿದಾಟ: ಅಂಗಿ ಇಲ್ಲದ ವ್ಯಕ್ತಿಯಿಂದ ಹೈಡ್ರಾಮ, ವಿಡಿಯೋ ವೈರಲ್​

    ಪಾಕಿಸ್ತಾನಿ ನಟಿಯ ಜತೆ ಶಾರುಖ್​ ಪುತ್ರನ ಪಾರ್ಟಿ: ವೈರಲ್​ ಆಯ್ತು ಸಾದಿಯಾ-ಆರ್ಯನ್​ ಖಾನ್​ ಫೋಟೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts