More

    ಆಸ್ಕರ್​ ರೇಸ್​ನಲ್ಲಿ ‘ಕಾಂತಾರ’; ಎರಡು ವಿಭಾಗಗಳಲ್ಲಿ ಸ್ಪರ್ಧೆ

    ಬೆಂಗಳೂರು: ರಿಷಬ್​ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರದ ಮುಕುಟಕ್ಕೆ ಇನ್ನೊಂದು ಗುರಿ ಸಿಕ್ಕಿದೆ. ಕನ್ನಡದಲ್ಲಿ ಅತೀ ಹೆಚ್ಚು ವೀಕ್ಷಣೆಗೊಳಾಗದ ಚಿತ್ರ ಮತ್ತು ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಾಂತಾರ’ ಚಿತ್ರವು ಇದೀಗ 2023ನೇ ಸಾಲಿನ ಆಸ್ಕರ್​ ಪ್ರಶಸ್ತಿಗೆ ಸ್ಪರ್ಧಿಸುವುದಕ್ಕೆ ಅರ್ಹತೆ ಸಿಕ್ಕಿದೆ.

    ಇದನ್ನೂ ಓದಿ: 11 ಭಾಷೆಗಳಲ್ಲಿ ಹನುಮಾನ್; ಮೇ. 12ರಂದು ಸೂಪರ್​ಹೀರೋ ಸಿನಿಮಾ ತೆರೆಗೆ

    ಈ ವಿಷಯವನ್ನು ಸ್ವತಃ ನಿರ್ಮಾಪಕ ವಿಜಯ್​ ಕಿರಗಂದೂರು ಮತ್ತು ನಟ-ನಿರ್ದೇಶಕ ರಿಷಬ್​ ಶೆಟ್ಟಿ ಹೇಳಿಕೊಂಡಿದ್ದಾರೆ. ಈ ಕುರಿತು ಅವರು ಟ್ವೀಟ್​ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ. ‘ಆಸ್ಕರ್​ ಪ್ರಶಸ್ತಿಗಳ ಎರಡು ವಿಭಾಗಗಳಲ್ಲಿ ಸ್ಪರ್ಧಿಸುವುದಕ್ಕೆ ‘ಕಾಂತಾರ’ ಚಿತ್ರಕ್ಕೆ ಅರ್ಹತೆ ಸಿಕ್ಕಿದೆ. ನಮ್ಮ ಈ ಪಯಣದಲ್ಲಿ ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

    ಆಸ್ಕರ್​ ಪ್ರಶಸ್ತಿ ಕಣದಲ್ಲಿ ‘ಕಾಂತಾರ’ ಚಿತ್ರವು ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ವಿಭಾಗಗಳಲ್ಲಿ ಸ್ಪರ್ಧಿಸುವುದಕ್ಕೆ ಅರ್ಹತೆ ಸಿಕ್ಕಿದೆ. ಈ ಪೈಕಿ ಯಾವ ವಿಭಾಗದಲ್ಲಿ ಚಿತ್ರಕ್ಕೆ ಪ್ರಶಸ್ತಿ ಸಿಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. 301 ಚಿತ್ರಗಳ ಪಟ್ಟಿಯಲ್ಲಿ ‘ಕಾಂತಾರ’ ಚಿತ್ರವೂ ಸ್ಪರ್ಧಿಸುತ್ತಿದೆ ಎನ್ನುವುದು ವಿಶೇಷ. ಜನವರಿ 24ರಂದು ಆಸ್ಕರ್ ವಿಜೇತ ಅಂತಿಮ ಪಟ್ಟಿ ಪ್ರಕಟವಾಗಲಿದೆ.

    ಇದನ್ನೂ ಓದಿ: ಪರಭಾಷೆಗೆ ಕಾಂತಾರ ಲೀಲಾ; ‘ಕಾಳಿ’ಗಾಗಿ ಸಿದ್ಧತೆ ನಡೆಸುತ್ತಿರುವ ಸಪ್ತಮಿ ಗೌಡ

    ‘ಕಾಂತಾರ’ ಚಿತ್ರವನ್ನು ರಿಷಬ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

    ನನಗೆ ಬಂದ ಪರಿಸ್ಥಿತಿ ಯಾರಿಗೂ ಬಾರದಿರಲಿ: ಟ್ರೋಲಿಗರಿಗೂ ಒಳ್ಳೆಯದ್ದನ್ನೇ ಬಯಸಿದ ಸಮಂತಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts