More

    11 ಭಾಷೆಗಳಲ್ಲಿ ಹನುಮಾನ್; ಮೇ. 12ರಂದು ಸೂಪರ್​ಹೀರೋ ಸಿನಿಮಾ ತೆರೆಗೆ

    ಪ್ರಶಾಂತ್ ವರ್ಮಾ ನಿರ್ದೇಶನದ ‘ಹನುಮಾನ್’ ಚಿತ್ರ, ಟೀಸರ್ ಮೂಲಕವೇ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದೆ. ಕಡಿಮೆ ಬಜೆಟ್​ನಲ್ಲಿ ನಿರ್ವಣವಾಗಿದ್ದರೂ, ಚಿತ್ರದ ವಿಎಫೆಕ್ಸ್ ಬಗ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸೂಪರ್​ಹೀರೋ ಸಿನಿಮಾದಲ್ಲಿ ತೇಜಾ ಸಜ್ಜಾ ನಾಯಕನಾಗಿದ್ದು, ಅವರಿಗೆ ಅಮೃತಾ ಅಯ್ಯರ್ ನಾಯಕಿಯಾಗಿದ್ದಾರೆ.

    ಪ್ಯಾನ್ ಇಂಡಿಯಾ ಎಂದು ಚಿತ್ರತಂಡಗಳು ತೋಳೇರಿಸುವ ಸಮಯದಲ್ಲೇ ‘ಹನುಮಾನ್’ ತಂಡ, ಚಿತ್ರವನ್ನು ಪ್ಯಾನ್ ವರ್ಲ್ಡ್ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೇ ಮೇ 12ರಂದು ‘ಹನುಮಾನ್’ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಇಂಗ್ಲೀಷ್, ಮರಾಠಿ, ಸ್ಪಾನಿಶ್, ಕೊರಿಯನ್, ಚೈನೀಸ್ ಮತ್ತು ಜಪಾನೀ ಹೀಗೆ 11 ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

    ಹಾಲಿವುಡ್​ನಲ್ಲಿ ಸೂಪರ್​ಹೀರೋ ಸಿನಿಮಾಗಳು ಸಾಮಾನ್ಯವಾಗಿವೆ. ಬಾಲಿವುಡ್​ನಲ್ಲಿ ‘ಕ್ರಿಷ್’, ‘ಶಕ್ತಿಮಾನ್’ ಹೊರತುಪಡಿಸಿದರೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸೂಪರ್​ಹೀರೋ ಇಲ್ಲ. ಅವುಗಳ ನಡುವೆ ಇದೀಗ ವಿಶ್ವದ ಮೊದಲ ಹಾಗೂ ಅತ್ಯಂತ ಶಕ್ತಿಶಾಲಿ ಸೂಪರ್​ಹೀರೋ ಎಂದು ಚಿತ್ರತಂಡ ಹೇಳಿಕೊಂಡಿರುವ ‘ಹನುಮಾನ್’ ಬಿಡುಗಡೆಗೆ ರೆಡಿಯಾಗಿದೆ. ತೇಜಾ ಸಜ್ಜಾ, ಅಮೃತಾ ಅಯ್ಯರ್ ಜತೆ ವಿನಯ್ ರೈ, ವರಲಕ್ಷ್ಮೀ ಶರತ್ ಕುಮಾರ್ ಪ್ರಮುಖ ತಾರಾಗಣದಲ್ಲಿದ್ದಾರೆ. –ಏಜೆನ್ಸೀಸ್

    ‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

    ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts