More

    ಪಾಕಿಸ್ತಾನಿ ನಟಿಯ ಜತೆ ಶಾರುಖ್​ ಪುತ್ರನ ಪಾರ್ಟಿ: ವೈರಲ್​ ಆಯ್ತು ಸಾದಿಯಾ-ಆರ್ಯನ್​ ಖಾನ್​ ಫೋಟೋ

    ಮುಂಬೈ: ವಿವಾದಾತ್ಮಕ ಡ್ರಗ್ಸ್​ ಕೇಸ್​ನಲ್ಲಿ ಬಂಧನವಾಗಿ ಬಿಡುಗಡೆಯಾದಾಗಿನಿಂದ ಸೂಪರ್​ ಸ್ಟಾರ್​ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದಾರೆ. ಬಾಲಿವುಡ್​ಗೆ ಪದಾರ್ಪಣೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಸ್ನೇಹಿತರು ಮತ್ತು ಸಹೋದರಿ ಸುಹಾನಾ ಖಾನ್ ಜೊತೆ ಹೊಸ ವರ್ಷ ಆಚರಿಸಿದ ಜೂನಿಯರ್ ಖಾನ್, ಇದೀಗ ಪಾಕಿಸ್ತಾನಿ ನಟಿಯೊಂದಿಗೆ ಸುತ್ತಾಡುತ್ತಿರುವುದು ಭಾರಿ ಸುದ್ದಿಯಾಗುತ್ತಿದೆ.

    ಪಾಕಿಸ್ತಾನಿ ನಟಿ ಜೊತೆ ಆರ್ಯನ್​ ಖಾನ್​ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅಂದಹಾಗೆ ಆ ಪಾಕ್​ ನಟಿಯ ಹೆಸರು ಸಾದಿಯಾ ಖಾನ್​. ತಮ್ಮ ಇನ್​ಸ್ಟಾಗ್ರಾಂನಲ್ಲಿ ಆರ್ಯನ್​ ಖಾನ್​ ಜೊತೆಗಿರುವ ಫೋಟೋ ಶೇರ್​ ಮಾಡಿ ಹೊಸ ವರ್ಷದ ಸಂಭ್ರಮಾಚರಣೆ ಸಂಜೆಯ ಹಳೆಯ ಫೋಟೋ ಎಂದು ಅಡಿಬರಹ ನೀಡಿದ್ದಾರೆ.

    ಆರ್ಯನ್ ಖಾನ್​, ಮೆರೂನ್ ಟಿ-ಶರ್ಟ್, ನೀಲಿ ಡೆನಿಮ್‌ ಹಾಗೂ ಬಿಳಿ ಜಾಕೆಟ್‌ನಲ್ಲಿ ಕಾಣಿಸಿಕೊಂಡರೆ, ಸಾದಿಯಾ ಕಪ್ಪು ಉಡುಗೆ ಮತ್ತು ಕಪ್ಪು ಓವರ್‌ಕೋಟ್‌ನಲ್ಲಿ ಮಿಂಚಿದ್ದಾಲೆ. ಪರಸ್ಪರ ಹತ್ತಿರವಾಗಿ ತುಂಬಾ ಸಲುಗೆಯಿಂದ ಫೋಟೋಗೆ ಪೋಸ್ ನೀಡಿದ್ದಾರೆ.

    ಪಾಕಿಸ್ತಾನಿ ನಟಿಯ ಜತೆ ಶಾರುಖ್​ ಪುತ್ರನ ಪಾರ್ಟಿ: ವೈರಲ್​ ಆಯ್ತು ಸಾದಿಯಾ-ಆರ್ಯನ್​ ಖಾನ್​ ಫೋಟೋ

    ಅಂದಹಾಗೆ ಆರ್ಯನ್​ ಖಾನ್​ ಇದ್ದ ಹೊಸ ವರ್ಷದ ಪಾರ್ಟಿಯಲ್ಲಿ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್, ಆರ್ಯನ್ ಖಾನ್ ಸಹೋದರಿ ಸುಹಾನಾ ಮತ್ತು ನೋರಾ ಫತೇಹಿ ಕೂಡ ಉಪಸ್ಥಿತರಿದ್ದರು. ಈ ಹಿಂದೆ ನೋರಾ ಫತೇಹಿ ಜತೆ ಆರ್ಯನ್ ಖಾನ್ ಪಾರ್ಟಿ ಮಾಡುತ್ತಿರುವ ಚಿತ್ರಗಳು ವೈರಲ್ ಆಗಿದ್ದವು. ನೋರಾ ಜೊತೆ ಆರ್ಯನ್​ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಊಹಾಪೋಹ ಹಬ್ಬಿತ್ತು.

    35 ವರ್ಷದ ಸಾದಿಯಾ ಖಾನ್ ಜನಪ್ರಿಯ ಪಾಕಿಸ್ತಾನಿ ನಾಟಕ ಖುದಾ ಔರ್ ಮುಹಬ್ಬತ್ ಮತ್ತು ಎಮಾನ್‌ನಲ್ಲಿನ ತಮ್ಮ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. 2019 ರಲ್ಲಿ ಟಿವಿ ಶೋ ಮೇರಿಯಮ್ ಪೆರಿಯೆರಾದಲ್ಲಿ ಸಾದಿಯಾ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ಆರ್ಯನ್ ಬರಹಗಾರರಾಗಿ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ ಮತ್ತು ಅವರ ಮೊದಲ ಯೋಜನೆಗೆ ಸ್ಕ್ರಿಪ್ಟ್ ಬರೆಯುವುದನ್ನು ಪೂರ್ಣಗೊಳಿಸಿದ್ದಾರೆ. ಈ ಯೋಜನೆಯು ವೆಬ್ ಸರಣಿಯಾಗಿದ್ದು, ಇದನ್ನು ಆರ್ಯನ್ ಖಾನ್ ನಿರ್ದೇಶಿಸಲಿದ್ದಾರೆ ಮತ್ತು ಅವರ ತಂದೆಯ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಲಿದೆ. (ಏಜೆನ್ಸೀಸ್​)

    ಊ ಅಂಟವಾ ಹಾಡಿಗೆ ಮಸ್ತ್​ ಬೆಲ್ಲಿ ಡಾನ್ಸ್​: 2022ರಲ್ಲಿ ವೈರಲ್​ ಆದ ತನ್ನ ವಿಡಿಯೋ ಹಂಚಿಕೊಂಡ ಯುವತಿ

    ನಿರಾಣಿ vs ಯತ್ನಾಳ್ | ತಾಕತ್ತಿದ್ರೆ ನಿರಾಣಿ ಸಿ.ಡಿ ಹೊರತರಲಿ; ಸವಾಲೆಸೆದ ಯತ್ನಾಳ್

    ಕೇರಳದ ವಿಶೇಷ ಕುಜಿಮಂತಿ ಬಿರಿಯಾನಿ ತಿಂದ ಯುವತಿ ದುರಂತ ಸಾವು: ವೈದ್ಯರು ಕೊಟ್ಟ ಕಾರಣ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts