More

    ಊ ಅಂಟವಾ ಹಾಡಿಗೆ ಮಸ್ತ್​ ಬೆಲ್ಲಿ ಡಾನ್ಸ್​: 2022ರಲ್ಲಿ ವೈರಲ್​ ಆದ ತನ್ನ ವಿಡಿಯೋ ಹಂಚಿಕೊಂಡ ಯುವತಿ

    ನವದೆಹಲಿ: ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಕಳೆದಿದ್ದರೂ, ಅದರ ಹಾಡಿನ ಕ್ರೇಜ್​ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಊ ಅಂಟವಾ ಹಾಡಿಗೆ ಅನೇಕರು ಇಂದಿಗೂ ಸೊಂಟ ಬಳಕಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಯುವತಿಯೊಬ್ಬಳು ಅದೇ ಹಾಡಿಗೆ ಬೆಲ್ಲಿ ಡಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    kkhushii_sharma ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಲಾಗಿದ್ದು, ಲಕ್ಷಾಂತರ ಲೈಕ್ಸ್​ ಪಡೆದುಕೊಂಡಿದೆ. ಅಲ್ಲದೆ, ಕಾಮೆಂಟ್​ಗಳ ಸುರಿಮಳೆಯೇ ಹರಿದುಬರುತ್ತಿದೆ. ನೆಟಿಗ್ಗರು ಯುವತಿಯ ನೃತ್ಯವನ್ನು ತುಂಬಾ ಇಷ್ಟಪಟ್ಟಿದ್ದು, ಆಕೆಯ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ವೀಡಿಯೋದಲ್ಲಿ ನೋಡಿದಂತೆ, ಅದ್ಭುತವಾದ ಕೆಂಪು ಸೀರೆಯಲ್ಲಿ ಖುಷಿ ಶರ್ಮಾ ಊ ಅಂಟವಾ ಹಾಡಿಗೆ ಭರ್ಜರಿಯಾಗಿ ಬೆಲ್ಲಿ ಡಾನ್ಸ್​ ಮಾಡಿದ್ದಾರೆ. ಹಳದಿ ಸೀರೆಯುಟ್ಟ ಯುವತಿಯು ಕೂಡ ನಂತರದಲ್ಲಿ ಖಷಿಯೊಂದಿಗೆ ಸೇರಿ ಸೊಂಟ ಬಳುಕಿಸುತ್ತಾರೆ. ಕಾರ್ಯಕ್ರಮಕ್ಕೆ ಹಾಜರಾಗಿದ್ದ ಪ್ರೇಕ್ಷಕರು ಡಾನ್ಸ್​ ನೋಡಿ ಹುರಿದುಂಬಿಸುತ್ತಿರುವುದು ವಿಡಿಯೋದಲ್ಲಿದೆ.

    2022 ರಲ್ಲಿ ನನ್ನ ಅತ್ಯಂತ ವೈರಲ್ ವಿಡಿಯೋ ಎಂದು ಖುಷಿ ಅವರು ಅಡಿಬರಹ ಬರೆದುಕೊಂಡಿದ್ದಾರೆ. ಈ ವಿಡಿಯೋ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಾನು ಹೇಗೆ ಇದನ್ನು ಪೋಸ್ಟ್ ಮಾಡದಿರಲು ಸಾಧ್ಯ ಎಂದಿದ್ದಾರೆ. ಒಟ್ಟಾರೆ, ವಿಡಿಯೋ ಮಾತ್ರ ಎಲ್ಲರಿಗೂ ತುಂಬಾ ಇಷ್ಟವಾಗಿದೆ. (ಏಜೆನ್ಸೀಸ್​)

    ಕೇರಳದ ವಿಶೇಷ ಕುಜಿಮಂತಿ ಬಿರಿಯಾನಿ ತಿಂದ ಯುವತಿ ದುರಂತ ಸಾವು: ವೈದ್ಯರು ಕೊಟ್ಟ ಕಾರಣ ಹೀಗಿದೆ…

    ಎಸ್​​ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಶ್ರೀನಿವಾಸ್ ಬಾಳೆಕಾಯಿ ಸೇರಿದಂತೆ ಯಾರು-ಯಾವ ಕ್ಷೇತ್ರಕ್ಕೆ… ಇಲ್ಲಿದೆ ಮಾಹಿತಿ

    ‘ಯಾವನ್ಲಾ ನೀನು? ತಿ* ಮುಚ್ಕಂಡು ಫೈಲ್ ತಗೋ ಬಾ…’ ಜನರ ಎದುರೇ ಅಧಿಕಾರಿಗೆ ಬೈದ ಸೋಮಣ್ಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts