More

    ನಿರಾಣಿ vs ಯತ್ನಾಳ್ | ತಾಕತ್ತಿದ್ರೆ ನಿರಾಣಿ ಸಿ.ಡಿ ಹೊರತರಲಿ; ಸವಾಲೆಸೆದ ಯತ್ನಾಳ್

    ವಿಜಯಪುರ: ಸಚಿವ ಮುರುಗೇಶ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಧ್ಯೆ ಇದೀಗ ಸಿ.ಡಿ ವಾರ್ ಶುರುವಾಗಿದೆ. ಇಂದು(ಜ.07) ಬೆಳಗ್ಗೆಯಷ್ಟೇ ಸಚಿವ ನಿರಾಣಿ ವಿಜಯಪುರ ನಗರ ಶಾಸಕ ಯತ್ನಾಳ ವಿರುದ್ದ ವಾಗ್ದಾಳಿ ನಡೆಸಿದ್ದರು.

    ಸಚಿವ ನಿರಾಣಿ ಮಾತನಾಡುತ್ತಾ, ಸಿಡಿ ವಿಚಾರವೆಲ್ಲ ನಮಗೆ ಗೊತ್ತಿಲ್ಲ. ದಿನದ 24 ಗಂಟೆ ಜನರ ಸೇವೆ ಮಾಡಲು ಸಮಯವೇ ಸಿಗಲ್ಲ. ಅಂಥದರಲ್ಲಿ ನಾವೆಲ್ಲಿ ಸಿ.ಡಿ ಮಾಡೋದು. ಅದೇನಿದ್ದರು ಅವರದ್ದೇ ವಿಚಾರ. ಹಾಗಿದ್ದವರು ಸ್ಟೇ ತರಬೇಕಿತ್ತು ಎಂದಿದ್ದರು‌.

    ಇದೀಗ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಾಕತ್ತು ಇದ್ರೆ ಸಿ.ಡಿ ಹೊರಕ್ಕೆ ತೆಗೆಯಲಿ. ಸಿಡಿ ವಿಚಾರದಲ್ಲಿ ಸಚಿವ ನಿರಾಣಿ ಸ್ಟೇ ತಂದಿಲ್ವಾ. ಸಿ.ಡಿಯಲ್ಲಿ ಎರಡು ಫ್ಯಾಕ್ಟರಿ ಇವೆ.‌ ಒಂದು ಬಿಜೆಪಿ, ಮತ್ತೊಂದು ಕಾಂಗ್ರೆಸ್​ ಎಂದು ಗಂಭೀರ ಆರೋಪ ಮಾಡಿದರು. ನಿರಾಣಿ ಸಿ.ಡಿ ಇಟ್ಟುಕೊಂಡು ಮಂತ್ರಿ ಆಗಿದ್ದಾರೆ. ಸಿ.ಡಿ ಬಳಸಿಕೊಂಡು ನಾನು ಅಂತಹ ಹಲ್ಕಾ ಕೆಲಸ ಮಾಡುವುದಿಲ್ಲ ಎಂದು ಯತ್ನಾಳ್ ಹೇಳಿದರು.

    ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನನ್ನ ವಿರುದ್ಧ ನಿರಾಣಿ, ವಿಜಯೇಂದ್ರ ಹಣ ಹೂಡಿಕೆ ಮಾಡಿದ್ರು. ಇಬ್ಬರು ಹಣ ಕಳಿಸಿಲ್ಲ ಎಂದು ಧರ್ಮಸ್ಥಳದ‌‌ ಮಂಜುನಾಥ ಮೇಲೆ ಆಣೆ ಮಾಡ್ಲಿ ಎಂದು ಸವಾಲ್ ಹಾಕಿದರು. ಬಿಜೆಪಿ ಅಭ್ಯರ್ಥಿಗಳಿಗೆ ಹಣ ಬಂದಿಲ್ಲ. ಪಕ್ಷೇತರ ಅಭ್ಯರ್ಥಿಗಳಿಗೆ ಹಣ ನೀಡಿದ್ದಾರೆ. ವಿಜಯಪುರ ಜನತೆ ಹಣ ತೆಗೆದುಕೊಳ್ಳದೇ ಮತ ಹಾಕಿದ್ದಾರೆ. ನಿರಾಣಿ ಬೆಂಬಲಿಗರು ಹಣ ಹೊಡೆದುಕೊಂಡಿದ್ದಾರೆ. ಇದೆಲ್ಲ‌ ಹೈಕಮಾಂಡ್‌ಗೆ ಮಾಹಿತಿ ಹೋಗಿದೆ ಎಂದು ಸಚಿವ ನಿರಾಣಿ ಹಾಗೂ ವಿಜಯೇಂದ್ರ ವಿರುದ್ಧ ಯತ್ನಾಳ್ ಆರೋಪಿಸಿದರು.

    ಅಲ್ಲದೇ, ಇಂವ್ ಯಾರಿ ನನಗೆ ಟಿಕೆಟ್ ಕೊಡಲು ಎಂದು ಸಚಿವ ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts