More

    ಪಾರ್ಟ್ ಟೈಂ ಜಾಬ್ ನೆಪದಲ್ಲಿ ಯುವತಿಗೆ ವಂಚನೆ: 3.83 ಲಕ್ಷ ರೂ. ಮೋಸ

    ಪಡುಬಿದ್ರಿ: ಕಂಪೆನಿಯೊಂದರಲ್ಲಿ ತಾಂತ್ರಿಕ ಸಹಾಯಕಳಾಗಿ ವರ್ಕ್ ಫ್ರಮ್ ಹೋಮ್ ಕೆಲಸ ಮಾಡಿಕೊಂಡಿದ್ದ ಪಡುಬಿದ್ರಿಯ ಬೇಬಿ ಎಂಬುವರು ಫೇಸ್‌ಬುಕ್‌ನಲ್ಲಿ ಬಂದ ಪಾರ್ಟ್ ಟೈಂ ಜಾಬ್ ಜಾಹೀರಾತಿಗೆ ಮರುಳಾಗಿ ವಿವಿಧ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಪ್ರಕರಣ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

    ಆನ್‌ಲೈನ್ ಪಾರ್ಟ್‌ಟೈಂ ಜಾಬ್ ಜಾಹೀರಾತು

    2023 ಅಕ್ಟೋಬರ್ 26ರಂದು ಫೇಸ್‌ಬುಕ್ ನೋಡುತ್ತಿದ್ದಾಗ ಆನ್‌ಲೈನ್ ಜಾಬ್ ಬಗ್ಗೆ ಜಾಹೀರಾತು ಬಂದಿತ್ತು. ಕುತೂಹಲಗೊಂಡು ಓಪನ್ ಮಾಡಿದಾಗ 7081930287 ನಂಬರ್‌ಗೆ ವಾಟ್ಸಪ್ ಚಾಟ್ ಮಾಡಲು ತಿಳಿಸಲಾಗಿತ್ತು. ಅದರಲ್ಲಿ ಪಾರ್ಟ್ ಟೈಂ ಜಾಬ್ ಇದ್ದು, ಮೊಬೈಲ್ ಮುಖೇನ ಮನೆಯಲ್ಲಿಯೇ ಕೆಲಸ ಮಾಡಿ ದಿನಕ್ಕೆ ರೂ.2000 ಹಣ ಗಳಿಸಬಹುದು ಎಂದು ಟೆಲಿಗ್ರಾಂ ಆಪ್‌ನ್ನು ಅಳವಡಿಸುವಂತೆ ಸೂಚಿಸಿದ್ದರು.

    ಟೆಲಿಗ್ರಾಂ ಮುಖೇನ ಮೋಸ: 3.83 ಲಕ್ಷ ರೂ. ವಂಚನೆ

    27ರಿಂದ ವಿದ್ಯಾಸಂದ್ರ ಹೆಸರಿನ ಟೆಲಿಗ್ರಾಂ ಖಾತೆ ಮುಖೇನ ಟಾಸ್ಕ್ ನೀಡಲು ಪ್ರಾರಂಭಿಸಿದ್ದು, ಪ್ರಿಪೇಡ್ ಟಾಸ್ಕ್ ಎಂಬುದಾಗಿ ತಿಳಿಸಿದ್ದರು. ಬೇಬಿ ಪಣಂಬೂರು ಎಸ್‌ಬಿಐ ಶಾಖೆ ಖಾತೆಯಿಂದ ಅನುರಾಧ ಎಂಬ ಹೆಸರಿನ ಖಾತೆಗೆ 1000 ರೂ.ನ್ನು ಗೂಗಲ್ ಪೇ ಮೂಲಕ ಜಮಾ ಮಾಡಿದ್ದರು. ನಂತರ ಅದೇ ಖಾತೆಗೆ 2000 ರೂ. ಹಣ ಗೂಗಲ್ ಪೇ ಮಾಡಿದ್ದಾರೆ. ನಂತರ ರವಿಶಂಕರ್ ಸಿ. ಎಂಬ ಹೆಸರಿನ ಖಾತೆಗೆ 3,000 ಮತ್ತು 10,000 ಮೊತ್ತವನ್ನು, ನಂತರ 30,000 ರೂ.ವನ್ನು ಗೂಗಲ್ ಪೇ ಮುಖೇನ ವರ್ಗಾವಣೆ ಮಾಡಿದ್ದು, ನಂತರ ಅದೇ ಖಾತೆಗೆ ಮತ್ತೆ 50,000, 80,000 ಹಣವನ್ನು ವರ್ಗಾವಣೆ ಮಾಡಿದ್ದರು. 30ರಂದು ಅನುರಾಧ ಖಾತೆಗೆ 80,000, 31ರಂದು ಎನ್‌ಎಡಿಎ ಹೆಸರಿನ ಖಾತೆಗೆ 40,000, ಸಮ್‌ಧಾನ್ ರಾಥೋಡ್ ಹೆಸರಿನ ಖಾತೆಗೆ 40,000, ಸಿಂಧಾಮುಥಾರ್ ಎಂ ಖಾತೆಗೆ 20,000 ಹಾಗೂ 30,000 ಹಣ ಜಮಾ ಮಾಡಿದ್ದು, ಒಟ್ಟು 3,83,000 ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಹಣ ವಾಪಾಸು ನೀಡದೆ ಮೋಸ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts