More

    ಪುಟ್ಟು ಮಗಳ ಗುದದ್ವಾರಕ್ಕೆ ಸುಡುಗಂಜಿ ಸುರಿದ ಪಾಪಿ ಅಪ್ಪ!

    ಶ್ರೀಕಾಂತ ಅಕ್ಕಿ
    ಬಳ್ಳಾರಿ: ತಾಯಿಯಿಲ್ಲದ ಬಾಲಕಿಯರಿಗೆ ಪೋಷಣೆ ಮಾಡಬೇಕಾದ ಹೆತ್ತ ತಂದೆಯೇ ವಿಲನ್ ಆಗಿದ್ದಾನೆ.ಪದೆ ಪದೇ ಮಲ ಮಾಡುತ್ತಾಳೇ ಎಂದು ಬೇಸರಗೊಂಡ ತಂದೆ ಮಗಳ ಗುದದ್ವಾರಕ್ಕೆ ಸುಡುಗಂಜಿಯನ್ನು ಸುರಿದಿದ್ದರೇ ಇತ್ತ ಪಕ್ಕದ ಮನೆಯ ಪಾಪಿಯೊಬ್ಬ ಇದೇ ಬಾಲಕಿಯ ಅಕ್ಕನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಾಯಿಯಿಲ್ಲದ ಈ ಇಬ್ಬರ ಮಕ್ಕಳ ಪಾಡು ಪಾಡು ಗಣಿಜಿಲ್ಲೆಯಲ್ಲಿ ದೇವರಿಗೆ ಪ್ರೀತಿ ಎಂಬಂತಾಗಿದೆ.

    ಪದೆಪದೇ ಮಲವಿಸರ್ಜನೆ ಮಾಡುತ್ತದೆ ಎಂದು ಗುದದ್ವಾರಕ್ಕೆ ಗಂಜಿ ಸುರಿದ ತಂದೆಯ ವಿರುದ್ಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ.ಇದೇ ಬಾಲಕಿಯ ಅಕ್ಕನ ಮೇಲೆಯ ಪಕ್ಕದ ಮನೆಯ ನಿವಾಸಿಯಿಂದ ಲೈಂಗಿಕ ದೌರ್ಜನ್ಯ ಯತ್ನ ನಡೆದಿತ್ತು. ಹೀಗಾಗಿ ಈ ಮಕ್ಕಳನ್ನು ಬಳ್ಳಾರಿ ನಗರದ ಶಾಂತಿಧಾಮದಲ್ಲಿ ಉಳಿಸಿಕೊಳ್ಳಲಾಗಿದೆ.
    ಸಯ್ಯದ್ ಚಾಂದಪಾಷಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಬಳ್ಳಾರಿ

    ಏನಾಗಿದೆ..?: ಜಿಲ್ಲೆಯ ಸಿರಗುಪ್ಪ ಪಟ್ಟಣದ ಡ್ರೈವರ್ ಕಾಲೋನಿಯಲ್ಲಿರುವ ಮಹಮ್ಮದ್ ಇಸಾಕ್ ಖಾನ್ ಎಂಬುವವ ತಾಯಿ ಪ್ರೀತಿ ಕಾಣದ 3ಹಾಗೂ 4ವರ್ಷದ ಬಾಲಕಿಯರನ್ನು ರಕ್ಷಣೆ ಮಾಡುವುದು ಬಿಟ್ಟು ತನ್ನ ಕಿರಿಯ ಮಗಳು ಪದೆ ಪದೇ ಮಲ ವಿಸರ್ಜನೆ ಮಾಡುತ್ತಾಳೆ ಎಂದು ಅನ್ನದ ಸುಡುವ ಗಂಜಿಯನ್ನು ಗುದದ್ವಾರಕ್ಕೆ ಸುರಿದು ಗಾಯಗೊಳಿಸಿದ್ದು ಇತ್ತೀಚಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಬಾಲಕಿಯರಿಬ್ಬರಿಗೆ ರಕ್ಷಣೆ ಇಲ್ಲದಿರುವುದನ್ನು ಮನಗಂಡ ಪಕ್ಕದ ಮನೆಯ ನಿವಾಸಿ ಮೂರ್ತಿ ಎನ್ನುವವ ಇದೇ ಬಾಲಕಿ ಅಕ್ಕನ ಮೇಲೆ ಪಕ್ಕದ ಮನೆಯ ನಿವಾಸಿ ಮೂರ್ತಿ ಎನ್ನುವವ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿವೆ.

    ಬಾಲಕಿಯರಿಗೆ ರಕ್ಷಣೆ ಯಾವಾಗ..?: ದುರಂತವೆಂದರೇ ಈ ಎರಡು ಘಟನೆಗಳು ಕರೊನಾ ಲಾಕ್‌ಡೌನ್ ಸಂದರ್ಭದಲ್ಲೇ ಜರುಗಿವೆ. ಲಾಕ್‌ಡೌನ್ ವೇಳೆ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಅಧಿಕವಾಗಿತ್ತು. ಅದರ ಜತೆಗೆ ಪೋಕ್ಸೋ, ದೌರ್ಜನ್ಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿರುವ ಮಾಹಿತಿ ಹೊರಬಿದ್ದಿದೆ.ಈ ಎರಡು ಪ್ರಕರಣಗಳು ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿಯೇ ನಡೆದಿರುವುದು ಜನತೆಯನ್ನು ಬೆಚ್ಚಿ ಬಿಳಿಸಿದೆ. ಎರಡು ಪ್ರಕರಣಗಳಲ್ಲಿ ಬಾಲಕಿಯರಿಗೆ ಸುರಕ್ಷತೆಯಿಲ್ಲದಿರುವುದು ಕಂಡು ಬಂದಿದೆ. ತಾಯಿಯಿಲ್ಲದ ಮಕ್ಕಳಿಗೆ ತಾಯಿಯಾಗಬೇಕಾದ ತಂದೆಯೇ ರಕ್ಷಣೆ ಒದಗಿಸಲಿಲ್ಲ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

    ಇದನ್ನೂ ಓದಿ:  ಕರೊನಾ ಕರಾಮತ್ತು- ಹೃದ್ಯ ಕ್ಷಣಕ್ಕೆ ಸಾಕ್ಷಿಯಾಗುವ ಭಾಗ್ಯ ಗಣಿನಾಡಿನದ್ದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts