More

    ಫೇಸ್​ಬುಕ್​ನಲ್ಲಿ ಅಪರಿಚಿತ ಹುಡುಗಿಯೊಂದಿಗೆ ಚಾಟ್ ಮಾಡೋ ಮುನ್ನ ಈ ಸ್ಟೋರಿ ಓದಿ: ಈತನದ್ದು ಕತೆಯಲ್ಲ ವ್ಯಥೆ​​

    ಕೊಡಗು: ಫೇಸ್​ಬುಕ್​ನಲ್ಲಿ ಪರಿಚಯವಾದ ಯುವತಿಯಿಂದ ಬರೋಬ್ಬರಿ ಮೂವತ್ತೈದು ಲಕ್ಷ ರೂ. ಕಳೆದುಕೊಂಡು ಯುವಕನೊಬ್ಬ ಆಸ್ಪತ್ರೆ ಸೇರಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಬಲ್ಲಮಾವಟಿ ಗ್ರಾಮದ ನಿವಾಸಿ ಪ್ರಸಾದ್ ಕುಮಾರ್, ಮನೆ ಹಾಗೂ ತೋಟ ನೋಡಿಕೊಂಡು ಆರಾಮಾಗಿ ಇರೋದು ಬಿಟ್ಟು ಫೇಸ್​ಬುಕ್​ನಲ್ಲಿರೋ ಶ್ವೇತಾ ಕಾರ್ಯಪ್ಪ ಹೆಸರಿನ ಯುವತಿಗೆ ಹಾಯ್ ಎಂದು ಮೆಸೆಜ್ ಮಾಡಿದ್ದಾನೆ. ಪ್ರಸಾದ್ ಮೆಸೆಜ್​ಗೆ ಪ್ರತಿಕ್ರಿಯಿಸಿದ ಶ್ವೇತಾ ಎಂಬಾಕೆಯ ಜತೆ ಎಂಟು ತಿಂಗಳ ಸ್ನೇಹವನ್ನು ಬೆಳೆಸಿದ್ದಾನೆ. ಒಂದು ಹಂತದಲ್ಲಿ ಶ್ವೇತಾ, ಪ್ರಸಾದ್ ಬಳಿ ಮದುವೆ ಆಗುವುದಾಗಿಯು ಹೇಳಿದ್ದಳಂತೆ. ಬಳಿಕ ಇಬ್ಬರು ಫೇಸ್​ಬುಕ್​ನಿಂದ ವಾಟ್ಸ್​ಆ್ಯಪ್​ಗೆ ಶಿಫ್ಟ್​ ಆಗಿದ್ದಾರೆ. ನಮ್ಮ ತಂದೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡ್ತಾರೆ. ನಾನು ಯಾವುದೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಶ್ವೇತಾ ಕತೆ ಕಟ್ಟಿದ್ದಳು. ಸುಂದರಿಯ ಮಾತು ನಂಬಿದ ಪ್ರಸಾದ್ ಆಗಲೇ ಹಳ್ಳಕ್ಕೆ ಬಿದ್ದಿದ್ದ. ಇದನ್ನೂ ಓದಿ: ಹೇಡಿ ಚೀನಿಯರು ಬಳಸಿದ ಅಸ್ತ್ರ ನೋಡಿ!

    ಪ್ರಸಾದ್ ಕುಮಾರ್ ಪಕ್ಕದ ಮನೆಯ ಸುಬ್ಬಯ್ಯ ಎಂಬಾತ ಬೆಂಗಳೂರಲ್ಲಿ ಸೈಟ್ ಖರೀದಿ ಮಾಡಬೇಕೆಂದು ಹೇಳಿದ್ದ. ಹೀಗಾಗಿಯೇ ಪ್ರಸಾದ್​ ಫೇಸ್​ಬುಕ್​ನಲ್ಲಿ‌ ಪರಿಚಯವಾದ ಶ್ವೇತಾಳಿಗೆ ಈ ವಿಚಾರ ತಿಳಿಸಿದ್ದ. ಶ್ವೇತಾ ಕೂಡ ನಮ್ಮ ಅಪ್ಪನಿಗೆ ಹೇಳ್ತೀನಿ ಸೈಟು ಕೊಡಿಸ್ತೀನಿ ಎಂದು ನಂಬಿಸಿದ್ದಳು. ಅಡ್ವಾನ್ಸ್ ಎಂದು ಪ್ರಸಾದ್ ಕುಮಾರ್ ಅಕೌಂಟ್​ಗೆ ಸುಬ್ಬಯ್ಯ 35 ಲಕ್ಷ ರೂಪಾಯಿ ಹಾಕಿದ್ದ. ಇದಕ್ಕೆ ಕಮಿಷನ್ ಎಂದು ಶ್ವೇತಾ ಹಾಗೂ ಸುಬ್ಬಯ್ಯ ಇಬ್ಬರು ತಲಾ 50 ಸಾವಿರ ರೂ. ಕೊಡುವುದಾಗಿ ಹೇಳಿದ್ದರು. ಹೀಗಾಗಿ ಸೈಟ್ ಕೊಡಿಸಲು ಎಂದು ಅಕೌಂಟ್​ಗೆ ಬಂದಿದ್ದ 35 ಲಕ್ಷ ರೂ. ಹಣವನ್ನು ಡ್ರಾ ಮಾಡಿ ಬೆಂಗಳೂರಿನಿಂದ ಇನೋವಾ ಕಾರಿನಲ್ಲಿ ಕುಶಾಲನಗರಕ್ಕೆ ಬಂದಿದ್ದ ಶ್ವೇತಾಳಿಗೆ ನೀಡಿದ್ದ.

    ಯಾವಾಗ ಶ್ವೇತಾ ಹಣ ಪಡೆದಳೋ ವಾಪಸ್ ಬಂದ ತಕ್ಷಣವೇ ಪೋನ್ ಸ್ವಿಚ್ ಆಫ್ ಮಾಡಿದಳು. ಇತ್ತ ಹಣ ಕೊಟ್ಟ ಸುಬ್ಬಯ್ಯ, ಪ್ರಸಾದ್ ಕುಮಾರ್ ಮೇಲೆ ನಾಪೋಕ್ಲು ಠಾಣೆಗೆ ವಂಚನೆ ದೂರು ಕೊಟ್ಟಿದ್ದ. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಪ್ರಸಾದ್​ನನ್ನು ಹಣದ ವಿಚಾರದಲ್ಲಿ ಬಂಧಿಸಿ ಪೊಲೀಸ್​ ಶೈಲಿಯಲ್ಲೇ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಚಿರು ನಿಧನದ ಬಳಿಕ ಮೇಘನಾ ಮೊದಲ ಟ್ವೀಟ್: ಪತಿಗೆ ಬರೆದರು ಭಾವುಕ ಸಂದೇಶ

    ಇದೀಗ ಫೇಸ್​ಬುಕ್ ನಲ್ಲಿ ಪರಿಚಯವಾದ ಸುಂದರಿ ನಂಬಿ 35 ಲಕ್ಷ ಹಣ ಕೊಟ್ಟ ಪ್ರಸಾದ್ ಇಂಗು ತಿಂದ ಮಂಗನಂತಾಗಿದ್ದಾನೆ. ಪೊಲೀಸರು ಹಣದ ವಿಚಾರದಲ್ಲಿ ಚೆನ್ನಾಗಿ ಥಳಿಸಿದ್ದಾರೆ ಎಂದು ಪ್ರಸಾದ್ ಆರೋಪ ಮಾಡಿದ್ದಾನೆ. ಹೀಗಾಗಿ ಹಣ ಕೊಟ್ಟ ಪ್ರಸಾದ್ ಆಸ್ಪತ್ರೆ ಸೇರಿದರೆ, ಇವನ ನಂಬಿ ಹಣ ಕೊಟ್ಟ ಸುಬ್ಬಯ್ಯ ಕಂಗಾಲಾಗಿದ್ದಾರೆ. ಪ್ರಸಾದ್ ಕೈಲಿ ಹಣ ಪಡೆದವಳು ಮಾತ್ರ ನಾಪತ್ತೆಯಾಗಿದ್ದಾಳೆ. (ದಿಗ್ವಿಜಯ ನ್ಯೂಸ್​)

    ಅಮೆರಿಕ- ಚೀನಾ ಅಧ್ಯಕ್ಷರ ಸಂಬಂಧ ಬಿಚ್ಚಿಟ್ಟ ಭದ್ರತಾ ಸಲಹೆಗಾರ: ಪುಸ್ತಕ ಬಿಡುಗಡೆಗೆ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts