More

    ಅಮೆರಿಕ- ಚೀನಾ ಅಧ್ಯಕ್ಷರ ಸಂಬಂಧ ಬಿಚ್ಚಿಟ್ಟ ಭದ್ರತಾ ಸಲಹೆಗಾರ: ಪುಸ್ತಕ ಬಿಡುಗಡೆಗೆ ತಡೆ

    ವಾಷಿಂಗ್ಟನ್: ಅಮೆರಿಕದ ಮಾಜಿ ಮಾಜಿ ಭ‌ದ್ರತಾ ಸಲಹೆಗಾರ ಜಾನ್ ಬಾಲ್ಟನ್, ಒಂದು ಪುಸ್ತಕ ಹೊರತಂದಿದ್ದು, ಅದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಅಮೆರಿಕ ಅಧ್ಯಕ್ಷ ಷಿ ಜಿನ್​ಪಿಂಗ್​ ನಡುವಿನ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ.

    ಅಮೆರಿಕದ ಅಧ್ಯಕ್ಷೀಯ ಚುನಾವಣೆ ಎದುರಿಗೆ ಇರುವ ಈ ಸಂದರ್ಭದಲ್ಲಿ ತಮ್ಮ ಮರು ಆಯ್ಕೆಗೆ ಸಹಾಯ ಮಾಡುವಂತೆ ಟ್ರಂಪ್​, ಷಿ ಜಿನ್‌ಪಿಂಗ್ ಅವರಿಗೆ ಮನವಿ ಮಾಡಿರುವ ಕುರಿತು ಜಾನ್​ ಹೇಳಿದ್ದಾರೆ. 2019ರ ಜೂನ್ 29ರಂದು ಒಸಾಕಾದಲ್ಲಿ ನಡೆದ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ನಡೆದ ಮಾತುಕತೆಯಲ್ಲಿ ಟ್ರಂಪ್ ಅವರು ಷಿ ಸಹಾಯ ಕೋರಿದ್ದರು ಎಂದಿದ್ದಾರೆ.

    ಭದ್ರತಾ ಸಲಹೆಗಾರ ಕೆಲಸದಿಂದ ಹೊರಬಂದ ನಂತರ ಜಾನ್​, ಒಂದು ಪುಸ್ತಕವನ್ನು ಹೊರತಂದಿದ್ದು, ಅದರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ‘ದಿ ರೂಮ್ ವೇರ್ ಇಟ್ ಹ್ಯಾಪೆನ್ಡ್: ಎ ವೈಟ್ ಹೌಸ್ ಮೆಮೊಯಿರ್’ ಎಂಬುದು ಪುಸ್ತಕದ ಹೆಸರು. ಜಾನ್​ರನ್ನು ಕಳೆದ ವರ್ಷ ಟ್ರಂಪ್ ಕೆಲಸದಿಂದ ವಜಾಗೊಳಿಸಿದ್ದರು. ಆ ನಂತರ ಸೇವಾ ಅವಧಿಯಲ್ಲಿ ತಮಗಾಗಿರುವ ಅನುಭವಗಳನ್ನು ಅವರು ಈ ಪುಸ್ತಕದಲ್ಲಿ ಬರೆದಿದ್ದಾರೆ.

    ಇದನ್ನೂ ಓದಿ: ಪಾಲ್ಗರ್​ನಲ್ಲಿ ​ಸಾಧುಗಳ ಹತ್ಯೆ: ಐವರು ಆರೋಪಿಗಳಿಗೆ ಕರೊನಾ

    ಆದರೆ ಈ ಪುಸ್ತಕ ಪ್ರಕಟಣೆಗೆ ಅಮೆರಿಕದ ನ್ಯಾಯಾಂಗ ಇಲಾಖೆ ತಡೆ ನೀಡಿದೆ. ಈ ಪುಸ್ತಕದಲ್ಲಿರುವ ಮಾಹಿತಿಯು ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದೆ ಎಂಬ ಕಾರಣವನ್ನು ಅದು ನೀಡಿದೆ. ಇದರಲ್ಲಿ ಉಲ್ಲೇಖಿಸಿರುವ ಅಂಶಗಳು ಅಮೆರಿಕ ಸರ್ಕಾರದ ಆಂತರಿಕ ವರ್ಗೀಕೃತ ಮಾಹಿತಿಯಾಗಿದ್ದು, ಅದನ್ನು ಯಾರೂ ಪರಿಶೀಲನೆ ಮಾಡಿಲ್ಲ. ಆದ್ದರಿಂದ ಪ್ರಕಟಣೆಗೆ ಅದು ಸದ್ಯ ಯೋಗ್ಯವಾಗಿಲ್ಲ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಮೆಕ್ ಎನಾನಿ ಅವರು ಹೇಳಿದ್ದಾರೆ.

    ‘ಟ್ರಂಪ್ ಅಧ್ಯಕ್ಷ ಸ್ಥಾನವು ಯಾವುದೇ ತತ್ವ, ಸಿದ್ಧಾಂತ ಅಥವಾ ನೀತಿಗಳನ್ನು ಆಧರಿಸಿಲ್ಲ. ಆದರೆ ಎಲ್ಲವೂ ಟ್ರಂಪ್‌ ಅವರಲ್ಲಿಯೇ ನೆಲೆಗೊಂಡುಬಿಟ್ಟಿದೆ. ಎರಡನೇ ಅವಧಿಯಲ್ಲಿ ಟ್ರಂಪ್ ಏನು ಮಾಡುತ್ತಾರೆಂಬುದನ್ನು ಚೀನಾದ ವಾಸ್ತವವಾದಿಗಳು ಅರ್ಥಮಾಡಿಕೊಂಡರೆ ಉತ್ತಮ ಎಂದು ಪುಸ್ತಕದಲ್ಲಿ ಅವರು ಉಲ್ಲೇಖಿಸಿದ್ದಾರೆ.

    ಕೆಲವು ಅಮೆರಿಕದ ರಾಜಕಾರಣಿಗಳು ಚೀನಾದ ಜತೆ ಹೊಸ ಶೀತಲ ಸಮರ ಆರಂಭ ಕುರಿತು ತಪ್ಪು ಹೇಳಿಕೆಗಳನ್ನು ನೀಡುತ್ತಿರುವುದಾಗಿ ಷೀ ಅವರು, ಟ್ರಂಪ್​ ಎದುರು ಆರೋಪಿಸಿದ್ದರು. ಆದರೆ ಯಾರೊಬ್ಬರ ಹೆಸರನ್ನು ಅವರು ಹೊರಗೆಡವಲಿಲ್ಲ. ಷಿ ಹೇಳಿದ್ದು ಡೆಮಾಕ್ರಟಿಕ್ ಪಕ್ಷದವರ ಬಗ್ಗೆಯೇ ಅಥವಾ ಎದುರುಗಡೆ ಸಾಲಿನಲ್ಲಿ ಕುಳಿತಿದ್ದ ನಮ್ಮ ಬಗ್ಗೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಆರೋಪವನ್ನು ಒಪ್ಪಿದ್ದ ಟ್ರಂಪ್, ಡೆಮಾಕ್ರಟಿಕ್ ಪಕ್ಷದವರಿಗೆ ಚೀನಾದ ಬಗ್ಗೆ ದ್ವೇಷವಿದೆ ಎಂದು ತಿಳಿಸಿದ್ದು ಎಂದು ಪುಸ್ತಕದಲ್ಲಿ ಉಲ್ಲೇಖವಾಗಿದೆ. (ಏಜೆನ್ಸೀಸ್​)

    ಸುಶಾಂತ್​ನಂತೆ ನಾನೂ ಆತ್ಮಹತ್ಯೆ ಮಾಡಿಕೊಳ್ಳಬಲ್ಲೆ ಎಂದ ಬಾಲಕ ನೇಣಿಗೆ ಶರಣು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts