More

    34ರ ವ್ಯಕ್ತಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ 13ರ ಅಪ್ರಾಪ್ತ ಮಗಳ ತಲೆ ತುಂಡರಿಸಿದ ತಂದೆ

    ತೆಹ್ರಾನ್​: ಮಲಗಿದ್ದ ವೇಳೆ ಅಪ್ರಾಪ್ತ ಮಗಳ ತಲೆಯನ್ನು ತಂದೆಯೇ ತುಂಡರಿಸಿದ ಆತಂಕಕಾರಿ ಘಟನೆ ಇರಾನ್​ನಲ್ಲಿ ನಡೆದಿದ್ದು, ಇದೊಂದು ಮರ್ಯಾದೆ ಹತ್ಯೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಇದನ್ನೂ ಓದಿ: ಹಳೇ ಪ್ರೇಯಸಿಗೆ ಮಚ್ಚಿನಿಂದ ಹೊಡೆದು ಹೋದವ ಶವವಾದ…

    ರೊಮಿನಾ ಅಶ್ರಫಿ (13) ಮೃತ ದುರ್ದೈವಿ. ಇರಾನ್​ನ ತಲೇಶ್​ ಕೌಂಟಿಯಲ್ಲಿರುವ ತಮ್ಮ ನಿವಾಸದಲ್ಲಿ ರಾತ್ರಿ ಮಲಗಿದ್ದಾಗ ಕುಡುಗೋಲಿನಿಂದ ತಲೆಯನ್ನು ಕತ್ತರಿಸಲಾಗಿದೆ. ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಆಕೆ ಓಡಿ ಹೋಗಲು ತಯಾರಾಗಿದ್ದಾರಿಂದ ಮರ್ಯಾದೆಗೆ ಅಂಜಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

    ರೊಮಿನಾ ಒಮ್ಮೆ 35 ವರ್ಷದ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದಳಂತೆ. ಅಲ್ಲದೆ, ಮದುವೆಯಾಗಲು ಸಹ ತಯಾರಿದ್ದಳಂತೆ. ಈ ವೇಳೆ ಸ್ಥಳೀಯ ಪೊಲೀಸರು ಇಬ್ಬರನ್ನು ಬಂಧಿಸಿ ಆಕೆಯನ್ನು ಮನಗೆ ಒಪ್ಪಿಸಿದ್ದರು. ಇತ್ತ ಮಗಳ ಮದುವೆ ಯೋಜನೆ ವಿಚಾರ ತಿಳಿದು ಆಕೆಯ ತಂದೆ ಕುಪಿತಗೊಂಡು ಬೈದು ಬುದ್ಧಿವಾದ ಹೇಳಿದ್ದರು ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಪ್ರೇಯಸಿ ನೋಡಲು ಮನವಿ ಮಾಡಿದವನಿಗೆ ಸೋನು ಸೂದ್​ ಕೊಟ್ಟ ಉತ್ತರ ಹೀಗಿತ್ತು …

    ಎಷ್ಟೇ ಬುದ್ಧಿವಾದ ಹೇಳಿದರೂ ತನ್ನ ಚಾಳಿ ಮುಂದುವರಿಸಿದ್ದಕ್ಕೆ ತಂದೆಯೇ ಆಕೆಯ ತಲೆಯನ್ನು ಕತ್ತರಿಸಿ ಹತ್ಯೆಗೈದು, ರಕ್ತಸಿಕ್ತ ಕುಡುಗೋಲು ಸಹಿತ ತಲೆಯೊಂದಿಗೆ ಪೊಲೀಸ್​ ಠಾಣೆಗೆ ಹೋಗಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ.

    ಸದ್ಯ ಆರೋಪಿ ತಂದೆಯನ್ನು ನಮ್ಮ ವಶದಲ್ಲಿ ಇರಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಮಹಿಳಾ ಆಯೋಗದ ಉಪಾಧ್ಯಕ್ಷೆ ಮಸೌಮೆಹ್ ಎಬ್ತೆಕರ್ ಸಹ ಪ್ರಕರಣದ ತನಿಖೆಗೆ ವಿಶೇಷ ಆದೇಶವನ್ನು ನೀಡಿದ್ದಾರೆ. ಇಸ್ಲಾಮಿಕ್​ ಪೀನಲ್​ ಕೋಡ್​ ಅನ್ವಯ ಆರೋಪಿಯು ಸಂತ್ರಸ್ತೆ ರೊಮಿನಾ ತಂದೆಯಾಗಿರುವುದರಿಂದ ಆತನಿಗೆ ಮರಣದಂಡನೆ ಶಿಕ್ಷೆಯಿಂದ ವಿನಾಯಿತಿ ಸಿಗಲಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಇದನ್ನೂ ಓದಿ: PHOTO GALLERY| ಬಣ್ಣದ ಲೋಕದ ಗ್ಲಾಮರ್​​ ಗೊಂಬೆಯಾಗಿದ್ರು ಮೆಬಿನಾ

    FACT CHECK: ಮುನ್ನೂರು ಮುಸ್ಲಿಮರ ಮನೆಗಳ ಸುಟ್ಟಿದ್ಯಾರು? ಇಲ್ಲಿದೆ ನೋಡಿ ಅಸಲಿಯತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts