More

    ಟ್ರೆಂಡ್ ಆಗುತ್ತಿದೆ #ModiKaParivar; ಅಭಿಯಾನವನ್ನು ಬೆಂಬಲಿಸಿದ ಇಟಲಿ ಪ್ರಧಾನಿ?

    ನವದೆಹಲಿ: ಮುಂದಿನ ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿದ್ದು, ಪಕ್ಷದ ನಾಯಕರು ಮಾತಿನ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ಕೆಲ ದಿನಗಳ ಹಿಂದೆ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬದ ಕುರಿತು ವೈಯಕ್ತಿಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು.

    ಇದಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್​ ಷಾ ಹಾದಿಯಾಗಿ ಬಹುತೇಕ ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮೋದಿ ಕಾ ಪರಿವಾರ್ ಎಂದು ಬರೆದುಕೊಳ್ಳುವ ಮೂಲಕ ಟಾಂಗ್​ ಕೊಟ್ಟಿದ್ದರು. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ #ModiKaParivar ಹ್ಯಾಶ್‌ಟ್ಯಾಗ್ ಟ್ರೆಂಡ್​ ಆದ ಬಳಿಕ ಆಸಕ್ತಿದಾಯಕ ಪ್ರತಿಕ್ರಿಯೆಗಳನ್ನು ನೀಡಿದ್ದು, ಇದಕ್ಕೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸಹ ಬೆಂಬಲ ಸೂಚಿಸಿದ್ದಾರೆ.

    Giorgia Meloni X

    ಇದನ್ನೂ ಓದಿ: ಮಹಿಳೆಯ ಪರ್ಸ್​ನಿಂದ ಹಣ ಕದ್ದು ಪರಾರಿಯಾದ ಬಾಕ್ಸರ್; ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್​ಗೆ ಮತ್ತೊಮ್ಮೆ ಮುಖಭಂಗ

    ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋ ವೈರಲ್​ ಆಗಿದ್ದು, ಭಾರತ ದೇಶದ ಪ್ರಧಾನಿಗೆ ಇಟಲಿ ಪಿಎಂ ಬೆಂಬಲ ಸೂಚಿಸಿರುವುದು ಹಲವರಲ್ಲಿ ಆಶ್ಚರ್ಯ ಮೂಡಿಸಿದ್ದು, ಇತ್ತ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಸಾಮಾಜಿಕ ಜಾಲತಾಣ ಖಾತೆ ಎಕ್ಸ್​ನಲ್ಲಿ ತಮ್ಮ ಹೆಸರ ಮುಂಭಾಗ ಈ ರೀತಿ ಬರೆದುಕೊಂಡಿರುವುದು ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

    ಇತ್ತ ಈ ಫೋಟೋ ಹೊರಬರುತ್ತಿದ್ದಂತೆ ಹಲವರು ಆಶ್ಚರ್ಯಚಿಕತರಾಗಿ ಪರಿಶೀಲನೆ ನಡೆಸಿದ್ದು, ಇದು ಫೇಕ್​ ಎಂದು ತಿಳಿದು ಬಂದಿದೆ. ಕೆಲವು ಕಿಡಿಗೇಡಿಗಳು ಜನರ ದಾರಿ ತಪ್ಪಿಸಲು ಈ ರೀತಿ ಮಾಡಿದ್ದು, ಇದು ಎಡಿಟೆಡ್​ ಫೋಟೋ ಎಂದು ಪರಿಶೀಲಿಸಿದಾಗ ಸ್ಪಷ್ಟವಾಗಿ ತಿಳಿದು ಬಂದಿದೆ. ಇತ್ತ ಈ ಸುದ್ದಿ ಸುಳ್ಳು ಎಂದು ಗೊತ್ತಾಗುತ್ತಿದ್ದಂತೆ ಹಲವರು ಕಿಡಿಕಾರಿದ್ದು, ಈ ರೀತಿ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts