More

    ತುಂಬಿದ ಶಾಲೆಯಲ್ಲಿ ಮಕ್ಕಳ ಮುಂದೆ ಹಸ್ತಮೈಥುನ ಮಾಡಿ, ವಿಡಿಯೋ ಹರಿಬಿಟ್ಟ ಶಿಕ್ಷಕಿ..!

    ಟಿಬಿಲಿಸಿ (ಜಾರ್ಜಿಯಾ): ಏಳರಿಂದ ಎಂಟರ ವಯಸ್ಸಿನ ಶಾಲಾ ಮಕ್ಕಳ ಮುಂದೆಯೇ ಹಸ್ತುಮೈಥುನ ಮಾಡಿಕೊಳ್ಳುವ ಮೂಲಕ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಬದಲಿ ಶಿಕ್ಷಕಿಯೊಬ್ಬಳನ್ನು ಜಾರ್ಜಿಯಾದಲ್ಲಿ ಶುಕ್ರವಾರ ಬಂಧಿಸಲಾಗಿದೆ. ಆರೋಪಿ ಶಿಕ್ಷಕಿ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಆರೋಪದಡಿ ವಿವಿಧ 19 ಪ್ರಕರಣಗಳನ್ನು ದಾಖಲಿಸಲಾಗಿದೆ.

    ಸ್ಥಳೀಯ ಕ್ಯಾರೊಲ್ಲ್​ ಕೌಂಟಿ ಶೆರಿಫ್ಸ್​ ಕಚೇರಿ ನೀಡಿರುವ ಮಾಹಿತಿ ಪ್ರಕಾರ ಶಿಕ್ಷಕಿ ಅಮೆಲಿಯಾ ರೆಸ್ಲರ್​ (30) ಕ್ಯಾರೊಲ್ಲ್​ ಕೌಂಟಿಯಲ್ಲಿರುವ ಮೌಂಟ್ ಜಿಯಾನ್ ಎಲಿಮೆಂಟರಿ ಶಾಲೆಯಲ್ಲಿ ಈ ಕೃತ್ಯ ಎಸಗಿದ್ದಾಳೆ. ಮಕ್ಕಳ ಮುಂದೆ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ತನ್ನ ಕೃತ್ಯವನ್ನು ತಾನೇ ಮೊಬೈಲ್​ನಲ್ಲಿ ಸೆರೆಹಿಡಿದುಕೊಂಡಿರುವ ಆರೋಪವು ಕೇಳಿಬಂದಿದೆ.

    ಇದನ್ನೂ ಓದಿರಿ: ಛೇ, ಅದೆಂಥ ಅಸಹ್ಯ ಮಾತು ಹೇಳಿಬಿಟ್ಟೆ? ನೊಂದ ಪ್ರಿಯತಮೆ ಸತ್ತೇ ಹೋದಳು!

    ತುಂಬಿದ ಶಾಲೆಯಲ್ಲಿ ಮಕ್ಕಳ ಮುಂದೆ ಹಸ್ತಮೈಥುನ ಮಾಡಿ, ವಿಡಿಯೋ ಹರಿಬಿಟ್ಟ ಶಿಕ್ಷಕಿ..!

    ಇಷ್ಟೇ ಅಲ್ಲದೆ, ರೆಕಾರ್ಡ್​ ಮಾಡಿದ ವಿಡಿಯೋವನ್ನು ಪ್ರಸಾರ ಮಾಡುವ ಮೂಲಕ ರೆಸ್ಲರ್​ ವಿಕೃತಿ ಮೆರೆದಿದ್ದಾಳೆ. ವಿಡಿಯೋ ಹರಿದಾಡಿ ಕೊನೆಗೆ ಶಾಲೆಯ ಸದಸ್ಯರ ಕಣ್ಣಿಗೆ ಬೀಳುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಇದೀಗ ರೆಸ್ಲರ್​ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.

    ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯ ಮುಂದೆಯೇ ರೆಸ್ಲರ್​ ತನ್ನ ದುಷ್ಕೃತ್ಯ ಎಸಗಿದ್ದರಿಂದ ಪ್ರತ್ಯೇಕವಾಗಿಯೇ ಪ್ರತಿ ವಿದ್ಯಾರ್ಥಿಗೆ ಸಂಬಂಧಿಸಿದಂತೆ ವಿವಿಧ ಪ್ರಕರಣಗಳು ರೆಸ್ಲರ್​ ವಿರುದ್ಧ ದಾಖಲಾಗಿದೆ. ತನಿಖೆ ಮುಂದುವರಿದಂತೆ ಅದರ ಆಧಾರದ ಮೇಲೆ ಪ್ರಕರಣಗಳು ಮತ್ತಷ್ಟು ನವೀಕರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿರಿ: ದೈಹಿಕ ಸಂಭೋಗ ನೆಪದಲ್ಲಿ ಮಂಚಕ್ಕೆ ಕಟ್ಟಿ ಮಹಿಳೆ ಮೇಲೆ ವಿಕೃತಿ: ಬಂಧಿತರು ಬಿಚ್ಚಿಟ್ಟ ಭಯಾನಕ ಸತ್ಯವಿದು!

    ಇನ್ನು ಶಿಕ್ಷಕಿಯ ದುಷ್ಕೃತ್ಯವು ಜನವರಿ 28ರ ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30ರ ನಡುವೆ ನಡೆದಿದೆ ಎನ್ನಲಾಗಿದೆ. ಕ್ಲಾಸ್​ರೂಮ್​ನಲ್ಲಿರುವ ವಿದ್ಯಾರ್ಥಿಗಳನ್ನು ತೋರಿಸುತ್ತಾ ಆರಂಭವಾಗುವ 13 ಸೆಕೆಂಡ್​ ವಿಡಿಯೋದಲ್ಲಿ ಮಕ್ಕಳ ಮುಂದೆಯೇ ರೆಸ್ಲರ್​ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ದೃಶ್ಯವಿದೆ. ವಿಡಿಯೋವನ್ನು ಸ್ನ್ಯಾಪ್​ಚಾಟ್​ನಲ್ಲಿ ಹರಿಬಿಡಲಾಗಿದ್ದು, ಪೊಲೀಸರು ವಿಡಿಯೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಸ್ವತಃ ತಾನೇ ವಿಡಿಯೋ ರೆಕಾರ್ಡ್​ ಮಾಡಿರುವ ರೆಸ್ಲರ್​ ಸ್ನ್ಯಾಪ್​ಚಾಟ್​ನಲ್ಲಿ ಅದನ್ನು ಹರಿಬಿಟ್ಟಿದ್ದಾಳೆ. ಇದೇ ವಿಡಿಯೋವನ್ನು ಸಾಕ್ಷ್ಯಾಧಾರವನ್ನಾಗಿ ಪರಿಗಣಿಸಲಾಗಿದ್ದು, ಮತ್ತಷ್ಟು ಸಾಕ್ಷಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ತುಂಬಿದ ಶಾಲೆಯಲ್ಲಿ ಮಕ್ಕಳ ಮುಂದೆ ಹಸ್ತಮೈಥುನ ಮಾಡಿ, ವಿಡಿಯೋ ಹರಿಬಿಟ್ಟ ಶಿಕ್ಷಕಿ..!

    ರೆಸ್ಲರ್​ ಪೂರ್ಣ ಅವಧಿಯ ಶಿಕ್ಷಕಿಯಲ್ಲ. ಆಕೆ ಬದಲಿ ಶಿಕ್ಷಕಿಯಾಗಿ ಕ್ಯಾರೊಲ್ಲ್​ ಕೌಂಟಿಯಲ್ಲಿರುವ ಮೌಂಟ್ ಜಿಯಾನ್ ಎಲಿಮೆಂಟರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. ಶಾಲೆಯ ಮುಂಜಾಗ್ರತ ಕ್ರಮದಿಂದ ಮುಂದೆ ನಡೆಯಬಹುದಾದ ಅನಾಹುತವನ್ನು ತಪ್ಪಿಸಿದ್ದು, ಅಧಿಕಾರಿಗಳು ಶಾಲೆಯ ಸುರಕ್ಷತಾ ಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿರಿ: ಮರ್ಮಾಂಗದ ಫೋಟೋ ಕಳಿಸದಿದ್ರೆ ಕೈ ಕೊಯ್ದುಕೊಳ್ತೀನಿ: ಕಾಮುಕನಿಗೆ ಹೆದರಿ ಎಡವಟ್ಟು ಮಾಡಿಕೊಂಡ ಅಪ್ರಾಪ್ತೆ!

    ಸದ್ಯ ಕ್ಯಾರೊಲ್ಲ್ ಕೌಂಟಿ ಜೈಲಿನಲ್ಲಿ ರೆಸ್ಲರ್ ವಿರುದ್ಧ ಪ್ರಕರಣ ದಾಖಲಾಗಿದೆ. ಆಕೆಗೆ ಬಾಂಡ್ ನಿರಾಕರಿಸಲಾಗಿದ್ದು, ಸದ್ಯ ಬಂಧನದಲ್ಲಿದ್ದಾರೆ. ಜಾರ್ಜಿಯಾ ಕಾನೂನಿನಲ್ಲಿ ಮಕ್ಕಳ ಮೇಲಿನ ಕಿರುಕುಳ ಪ್ರಕರಣಕ್ಕೆ 5 ರಿಂದ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. (ಏಜೆನ್ಸೀಸ್​)

    VIDEO| ವಿಚಾರಣೆ ವೇಳೆ ‘ಐ ಲವ್​ ಯು’ ಎಂದ ಆರೋಪಿ: ಜಡ್ಜ್​ ಪ್ರತಿಕ್ರಿಯಿಸಿದ ರೀತಿಗೆ ಭಾರಿ ಮೆಚ್ಚುಗೆ!

    ಮಂಗಳಮುಖಿಯಾಗಿ ಬದಲಾದ ಡಬ್ಲ್ಯೂಡಬ್ಲ್ಯೂಇ ಸ್ಟಾರ್​!

    ಹೇರ್​ ಸ್ಪ್ರೇ ಖಾಲಿಯೆಂದು ತಲೆಗೆ ಗೋರಿಲ್ಲಾ ಗ್ಲೂ ಹಚ್ಚಿಕೊಂಡ ಬೆಡಗಿ! ಮುಂದೇನಾಯ್ತು ನೀವೇ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts