More

    ಅಡುಗೆ ಅನಿಲ ಸಿಲಿಂಡರ್​ ಸ್ಫೋಟ: ಏಳು ಕೂಲಿ ಕಾರ್ಮಿಕರ ಸಾವು

    ಹೊಸಕೋಟೆ: ತಾಲೂಕಿನ ಮೇಡಿಹಳ್ಳಿಯಲ್ಲಿ ಮಾ.26ರಂದು ಅಡುಗೆ ಅನಿಲ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಕೂಲಿ ಕಾರ್ಮಿಕರ ಪೈಕಿ ಶನಿವಾರ ಇಬ್ಬರು ಕಾರ್ಮಿಕರು ಕೊನೆಯುಸಿರೆಳೆದಿದ್ದು ಸಾವಿನ ಸಂಖ್ಯೆ ಏಳಕ್ಕೇರಿದೆ. ಮತ್ತೊಬ್ಬ ಕಾರ್ಮಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

    ಪ್ರಕರಣ ನಡೆದು 5 ದಿನಗಳಾದರೂ ಹೊರಗಡೆ ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಲಾಗಿತ್ತು ಎನ್ನಲಾಗಿದ್ದು, ಶನಿವಾರ ಕೂಲಿ ಕಾರ್ಮಿಕರ ಮುಖಂಡ ಚಂದ್ರಭಾನು ಸಾವಿನಿಂದ ಪ್ರಕರಣ ಬೆಳಕಿಗೆ ಬಂದಿದೆ. ಗುರುವಾರ ಇಬ್ಬರು ಮೃತಪಟ್ಟಿದ್ದರು, ಶುಕ್ರವಾರ ಮತ್ತೆ ಮೂವರು ಸಾವಿನ ಕದ ತಟ್ಟಿದ್ದರು. ಶನಿವಾರ ಇನ್ನಿಬ್ಬರು ಇಹಲೋಕ ತ್ಯಜಿಸಿದ್ದಾರೆ.

    ಇದನ್ನೂ ಓದಿ: ಮನೆಯ ಕೋಣೆಯಲ್ಲೇ ನೇತಾಡುತ್ತಿತ್ತು ಪತ್ನಿಯ ಶವ; ಪತಿಯ ವಿರುದ್ಧ ಆರೋಪ

    ಬಿಹಾರ ಮೂಲದ ಅಮೀತ್ ಕುಮಾರ್ (33) ಉತ್ತರ ಪ್ರದೇಶದ ಸನೋಜ್ (24), ನೀರಜ್ ಭಾರತಿ(20), ಸೋಮಯ್ ಗುಪ್ತಾ(34), ತಿಲಕ್ ರಾಮ್ (43), ಲಕ್ಷ್ಮಣ್ (38), ಚಂದ್ರ ಭಾನು(37) ಮೃತರು.

    ವಲಸೆ ಕಾರ್ಮಿಕರು: ಮೃತ ಅಮೀತ್ ಕುಮಾರ್ ಬಿಹಾರದಿಂದ ವರ್ಷದ ಹಿಂದೆ ಹೊಸಕೋಟೆಗೆ ವಲಸೆ ಬಂದು ಅರವಿಂದ ಗುಪ್ತಾ ಎಂಬುವರ ಬಳಿ ಕೂಲಿ ಕೆಲಸಕ್ಕೆ ಸೇರಿದ್ದ. ಮೇಡಿಹಳ್ಳಿಯ ಭಾಸ್ಕರ್ ಎಂಬುವರಿಗೆ ಸೇರಿದ ಶೆಡ್‌ನಲ್ಲಿ ವಾಸವಾಗಿದ್ದ. ಕೆಲ ದಿನಗಳ ನಂತರ ಈತನ ಜತೆಗೆ ಇನ್ನುಳಿದವರು ಬಂದು ನೆಲೆಸಿದ್ದು ಎಲ್ಲರೂ ಗುಪ್ತಾ ಬಳಿ ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಅತ್ತ ಮಾಡಾಳ್​ಗೆ 14 ದಿನಗಳ ನ್ಯಾಯಾಂಗ ಬಂಧನ; ಇತ್ತ ಬಿಜೆಪಿ ಕೋರ್​ ಕಮಿಟಿ ಸಭೆ, ಭಾರಿ ಚರ್ಚೆ

    ಮಾ.26ರಂದು ದುರ್ಘಟನೆ: ಕಾರ್ಮಿಕರಿಗೆ ಅಡುಗೆ ಮಾಡಿಕೊಳ್ಳಲು ಗುತ್ತಿಗೆದಾರರೇ ಒಂದು ಅನಿಲ ಸಿಲಿಂಡರ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ಪ್ರಕರಣ ದಿನ ಕಾರ್ಮಿಕರು ಅಡುಗೆ ಮಾಡಿ, ಊಟ ಮಾಡಿ ನಿದ್ರೆಗೆ ಜಾರಿದ್ದರು. ಈ ವೇಳೆ ಅನಿಲ ಸೋರಿಕೆಯಾಗಿದೆ, ಮಲಗಿದ್ದವರ ಪೈಕಿ ಓರ್ವ ಶೌಚಕ್ಕೆ ಎದ್ದು ಲೈಟ್ ಸ್ವಿಚ್ ಹಾಕಿದಾಗ ದಿಢೀರ್ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಚೀರಾಟ ಕೇಳಿದ ನೆರೆಹೊರೆಯವರು ಪೊಲೀಸರ ಸಹಾಯದಿಂದ ತಕ್ಷಣವೇ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದರು. ಶೇ.60 ಸುಟ್ಟ ಗಾಯಗಳೊಂದಿಗೆ ನರಳಾಡಿದ್ದ ಕಾರ್ಮಿಕರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದರು ಚಿಕಿತ್ಸೆ ಲಕಾರಿಯಾಗದೆ ಒಬ್ಬರ ಹಿಂದೆ ಒಬ್ಬರಂತೆ ಸಾವಿನ ಮನೆ ಕದತಟ್ಟಿದ್ದಾರೆ.

    ಇದನ್ನೂ ಓದಿ: ಈ ಯಂತ್ರವೊಂದಿದ್ದರೆ ಸಾಕು, ಕಳ್ಳರಿಗೆ ‘ಹೊಗೆ’ನೇ; ಕಳವಿಗೆ ಬಂದವರು ಧೂಮಕ್ಕೆ ಹೆದರಿ ಪರಾರಿ!?

    ಪ್ರಕರಣ ದಾಖಲು: ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ನಿರ್ಲಕ್ಷ್ಯ ತೋರಿದ ಆರೋಪದಡಿ ಗುತ್ತಿಗೆದಾರ ಅರವಿಂದ ಗುಪ್ತ ಮತ್ತು ಭಾಸ್ಕರ್ ಎಂಬುವರ ವಿರುದ್ಧ ಅನುಗೊಂಡನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಗುತ್ತಿಗೆದಾರನ ಬಂಧನ: ಘಟನೆಗೆ ಗುತ್ತಿಗೆದಾರ ಹಾಗೂ ವಾಸದ ಶೆಡ್‌ನಲ್ಲಿ ಸುರಕ್ಷಿತ ಕ್ರಮಗಳನ್ನು ಕಲ್ಪಿಸದ ಮನೆಯ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಸಂಬಂಧಿ ರಾಹುಲ್ ಅನುಗೊಂಡಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುತ್ತಿಗೆದಾರ ಅರವಿಂದ ಗುಪ್ತಾನನ್ನು ಪೊಲೀಸರು ಬಂಧಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಮೂಲಕ ಅನಿಲ ಸೋರಿಕೆಯಾಗಿ ಬೆಂಕಿ ಅಪಘಡ ಸಂಭವಿಸದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts