More

    ಅರಬ್‌ನಾಡಿನಲ್ಲಿ ದಾದಾ ಸೂಪರ್ ಕಾರ್ ಡ್ರೈವಿಂಗ್..!

    ದುಬೈ: ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಸದ್ಯ ಅರಬ್‌ನಾಡಿನಲ್ಲಿದ್ದಾರೆ. ಕೋವಿಡ್-19ರಿಂದ ಮುಂದೂಡಿಕೆಯಾಗಿರುವ 14ನೇ ಐಪಿಎಲ್ ಟೂರ್ನಿಯ ಎರಡನೇ ಭಾಗವನ್ನು ಯುಎಇಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಕುರಿತು ಸ್ಥಳೀಯ ಕ್ರಿಕೆಟ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸುವ ಸಲುವಾಗಿ ದುಬೈನಲ್ಲಿರುವ ದಾದಾ, ಬಿಡುವಿನ ವೇಳೆಯಲ್ಲಿ ಕಾರ್ ರೇಸ್‌ನಲ್ಲಿ ಪಾಲ್ಗೊಂಡು ಗಮನಸೆಳೆದಿದ್ದಾರೆ. ಗಂಗೂಲಿ ಕಾರ್ ರೇಸ್‌ಗೆ ಹೋಗಲು ಸಿದ್ಧವಾಗುತ್ತಿರುವ ಫೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಟೆಸ್ಟ್​ ವಿಶ್ವಕಪ್​ ಫೈನಲ್​ನಲ್ಲಿ ಭಾರತಕ್ಕಿರುವ ಹಿನ್ನಡೆಯನ್ನು ವಿವರಿಸಿದ ಯುವರಾಜ್​ ಸಿಂಗ್​

    ಸೌರವ್ ಗಂಗೂಲಿ ಕಾರುಗಳನ್ನು ಕ್ರಿಕೆಟ್‌ನಷ್ಟೇ ಹೆಚ್ಚು ಪ್ರೀತಿಸುತ್ತಾರೆ. ಕೋಲ್ಕತದ ತಮ್ಮ ನಿವಾಸದಲ್ಲಿ ಹಲವು ಬಗೆಯ ಬಿಎಂಡಬ್ಲ್ಯು ಕಾರುಗಳನ್ನು ಹೊಂದಿದ್ದಾರೆ. ದಾದಾ ರೀತಿಯೇ ಭಾರತದ ಮತ್ತೋರ್ವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಹಲವು ಬಗೆಯ ಕಾರ್ ರೇಸ್ ಪ್ರಿಯ. ಫೆರಾರಿ ಕಾರ್ ಒಡೆಯ ಕೂಡ. ಕಾರ್ ರೇಸ್‌ವೊಂದರಲ್ಲಿ ಫಾರ್ಮುಲಾ-1 ದಿಗ್ಗಜ ಮೈಕೆಲ್ ಶುಮೇಕರ್ ಅವರನ್ನು ಭೇಟಿಯಾಗಿದ್ದರು.

    ಇದನ್ನೂ ಓದಿ: 100 ಕೆಜಿ ತೂಕದ ಈ ಕ್ರಿಕೆಟಿಗ ಪಾಕ್​ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾದ ಸೃಷ್ಟಿ!

    ಜೂನ್ 1 ರಂದು ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಸೌರವ್ ಗಂಗೂಲಿ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ತೆರಳಿದ್ದರು. ಮುಂದಿನ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಯುಎಇಯಲ್ಲಿ 14ನೇ ಐಪಿಎಲ್‌ನ ಉಳಿದ 31 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಈ ಕುರಿತು ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆ ಜತೆ ಮಾತುಕತೆ ನಡೆಸಿದ ಅಂತಿಮ ರೂಪು ರೇಷೆ ಸಿದ್ಧಪಡಿಸಲಾಗಿದೆ.

    ಗರ್ಲ್​ಫ್ರೆಂಡ್​​ ಜತೆ ಬ್ರೇಕ್​ಅಪ್​ ಮಾಡಿಕೊಂಡರೇ ಕ್ರಿಕೆಟಿಗ ಇಶಾನ್​ ಕಿಶನ್​?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts