More

    ಪ್ರವಾಹ ಭೀತಿಯಲ್ಲಿ ಗಂಗಾವಳಿ ನದಿ

    ಯಲ್ಲಾಪುರ: ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ನೀರಿನ ಮಟ್ಟ ಏರಿಕೆಯಾಗಿ ನದಿ ದಡದ ಮನೆಗಳಿಗೆ ನುಗ್ಗಿ ಅಪಾಯ ಉಂಟಾಗುವ ಸಾಧ್ಯತೆಯಿದೆ. ಗುಳ್ಳಾಪುರದ ಚಿಕ್ಕುಮನೆ ನವಗ್ರಾಮದಲ್ಲಿ ನದಿ ದಡದ ಮನೆಗಳಲ್ಲಿನ ಸಾಮಗ್ರಿಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಇಡಗುಂದಿ ಶೌರ್ಯ ತಂಡದ ಸ್ವಯಂ ಸೇವಕರು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದರು.
    ಕಳೆದ ವರ್ಷ ಮಳೆಯ ಅಬ್ಬರಕ್ಕೆ ನದಿಯಲ್ಲಿ ಪ್ರವಾಹ ಬಂದು ರಾತ್ರೋರಾತ್ರಿ ಮನೆಗಳಿಗೆ ನೀರು ನುಗ್ಗಿ, ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿತ್ತು. ಈ ಬಾರಿ ಪ್ರವಾಹದ ನೀರು ಮನೆಗಳಿಗೆ ನುಗ್ಗಿದರೆ ಅಂತಹ ಸಮಸ್ಯೆ ಎದುರಾಗಬಾರದೆಂದು ಮುಂಜಾಗ್ರತಾ ಕ್ರಮಕ್ಕೆ ಗ್ರಾ.ಪಂ. ಜತೆಯಲ್ಲಿ ಶೌರ್ಯ ತಂಡದ ಸದಸ್ಯರು ಕೈಜೋಡಿಸಿದರು.
    ನವಗ್ರಾಮದ ಕೆಲ ಮನೆಗಳಲ್ಲಿ ಹಿರಿಯರು, ಅಂಗವಿಕಲರಿದ್ದು, ಪ್ರವಾಹ ಬಂದಾಗ ಮನೆಯಲ್ಲಿನ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳದಲ್ಲಿಟ್ಟು, ತಾವೂ ಸುರಕ್ಷಿತ ಸ್ಥಳಕ್ಕೆ ಹೋಗಲು ಅಶಕ್ತರಾಗಿರುತ್ತಾರೆ. ಅಂಥವರ ಅನುಕೂಲಕ್ಕಾಗಿ ಶೌರ್ಯ ತಂಡದವರು ಸಾಮಗ್ರಿಗಳನ್ನು ಸುರಕ್ಷಿತ ಸ್ಥಳದಲ್ಲಿರಿಸಿದರು.
    ಪ್ರವಾಹ ಬಂದರೆ ಗ್ರಾಮಸ್ಥರಿಗೆ ಆಶ್ರಯ ನೀಡಲು ಕಾಳಜಿ ಕೇಂದ್ರವನ್ನೂ ಗುರುತಿಸಿ, ಅದಕ್ಕೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಬಗೆಗೂ ಕ್ರಮ ಕೈಗೊಳ್ಳಲಾಯಿತು. ಇಡಗುಂದಿ ಗ್ರಾ.ಪಂ ಅಧ್ಯಕ್ಷೆ ನಾಗವೇಣಿ ಸಿದ್ದಿ, ಯೋಜನಾಧಿಕಾರಿ ಹನುಮಂತ ನಾಯ್ಕ, ಸೇವಾ ಪ್ರತಿನಿದಿ ರಾಜೀವಿ ನಾಯ್ಕ, ಮೇಲ್ವಿಚಾರಕ ವೆಂಕಟೇಶ, ಒಕ್ಕೂಟದ ಅಧ್ಯಕ್ಷೆ ಸರೋಜಾ ಇತರರು ಚರ್ಚಿಸಿ, ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು. ಇಡಗುಂದಿ ಶೌರ್ಯ ಘಟಕದ ಸದಸ್ಯರಾದ ವಿವೇಕಾನಂದ, ಚಂದ್ರಶೇಖರ, ಗಣೇಶ, ರಾಮ, ಪರಶುರಾಮ, ಸಾಜಿದ್, ಲೋಕೇಶ, ಶಶಿಕಾಂತ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts