More

    ಕನ್ನಡದ ‘ಗಮನಂ’ ಚಿತ್ರದ ಟ್ರೇಲರ್​ ಲಾಂಚ್​ ಮಾಡ್ತಾರೆ ಶಿವಣ್ಣ

    ಬೆಂಗಳೂರು: ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಗಮನಂ ಚಿತ್ರ ಇದೀಗ ಬಿಡುಗಡೆಗೆ ಸಿದ್ಧತೆ ಮಾಡಕೊಳ್ಳುತ್ತಿದೆ. ಶ್ರೀಯಾ ಸರಣ್ ಮತ್ತು ನಿತ್ಯಾ ಮೆನನ್ ಸೇರಿ ಹಲವು ಸ್ಟಾರ್ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನೇನು ಟ್ರೇಲರ್ ಬಿಡುಗಡೆಗೂ ದಿನಾಂಕ ನಿಗದಿಯಾಗಿದೆ. ಭಾರತದ ಸೂಪರ್​ಸ್ಟಾರ್​ಗಳೇ ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಿದ್ದಾರೆ.

    ಇದನ್ನೂ ಓದಿ: ಚಿರಂಜೀವಿ ಕರೊನಾ ಗೆದ್ದು ಬರಲಿ: ದೇವಸ್ಥಾನ ಸುತ್ತುತ್ತಿರುವ ಅಭಿಮಾನಿ ಬಳಗ

    ಜಾಹೀರಾತುಗಳನ್ನು ನಿರ್ದೇಶಿಸಿದ ಅನುಭವ ಇರುವ ಸುಜನಾ ರಾವ್ ಗಮನಂ ಮೂಲಕ ನಿರ್ದೇಶಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಈ ಮೊದಲ ಪ್ರಯತ್ನಕ್ಕೆ ಸ್ಟಾರ್​ಗಳ ಬೆಂಬಲ ಸಿಕ್ಕಿದೆ. ನವೆಂಬರ್​ 11ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಟ್ರೇಲರ್​ ಅನ್ನು ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬ ನಟರು ರಿಲೀಸ್​ ಮಾಡಲಿದ್ದಾರೆ. ಕನ್ನಡದಲ್ಲಿ ಶಿವರಾಜ್​ಕುಮಾರ್​, ತೆಲುಗಿನಲ್ಲಿ ಪವನ್ ಕಲ್ಯಾಣ್​, ಹಿಂದಿಯಲ್ಲಿ ಸೋನು ಸೂದ್​, ತಮಿಳಿನಲ್ಲಿ ಜಯಂ ರವಿ ಮತ್ತು ಮಲಯಾಳಂನಲ್ಲಿ ಫಹಾದ್ ಫಾಸಿಲ್ ಗಮನಂ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಿದ್ದಾರೆ.

    ಕನ್ನಡದ 'ಗಮನಂ' ಚಿತ್ರದ ಟ್ರೇಲರ್​ ಲಾಂಚ್​ ಮಾಡ್ತಾರೆ ಶಿವಣ್ಣ

    ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರಿದ್ದಾರೆ. ಹಿರಿಯ ನಟ ಚಾರು ಹಾಸನ್, ಶ್ರಿಯಾ ಸರಣ್, ಪ್ರಿಯಾಂಕಾ ಜವಾಲ್ಕರ್, ಶಿವ ಕಂದುಕುರಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದು, ಸಂಜಯ್ ಸ್ವರೂಪ್, ಇಂದೂ ಆನಂದ್, ಪ್ರಿಯಾ, ಸುಹಾಸ್, ಮಾಸ್ಟರ್ ನೇಹಾಂತ್, ಬಿತಿರಿ ಸತ್ತಿ, ರವಿಪ್ರಕಾಶ್ ಮುಂತಾದ ಕಲಾವಿದರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಗಾಯಕಿಯಾಗಿ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಶಿವರಾಜಕುಮಾರ್​-ಧನಂಜಯ್​ ಜತೆಯಾದ ಫೃಥ್ವಿ ಅಂಬರ್​

    ಹಿರಿಯ ಸಂಗೀತ ನಿರ್ದೇಶಕ, ಇಳಯರಾಜಾ ʻಗಮನಂʼಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಹಿಂದಿಯ ಮಣಿಕರ್ಣಿಕಾ, ತೆಲುಗಿನ ಗೌತಮೀಪುತ್ರ ಶಾತಕರ್ಣಿ, ವೇದಂ ಮೊದಲಾದ ಸಿನಿಮಾಗಳಿಗೆ ಕ್ಯಾಮರಾ ಕೆಲಸ ನಿರ್ವಹಿಸಿದ್ದ ಜ್ಞಾನಶೇಖರ್ ವಿ.ಎಸ್. ಛಾಯಾಗ್ರಹಣ, ಸಾಯಿ ಮಾಧವ ಬುರಾ ಸಂಭಾಷಣೆ ಬರೆದಿರುವ ʻಗಮನಂʼ ಚಿತ್ರವನ್ನು ರಮೇಶ್ ಕರುತೂರಿ ಮತ್ತು ವೆಂಕಿ ಪುಶದಾಪು ಮತ್ತು ಜ್ಞಾನಶೇಖರ್ ವಿ.ಎಸ್. ಸೇರಿ ಕ್ರಿಯಾ ಫಿಲ್ಮ್ಸ್ ಕಾರ್ಪ್ ಮೂಲಕ ನಿರ್ಮಾಣ ಮಾಡಿದ್ದಾರೆ.

    ಧಾರವಾಡದ ನುಗ್ಗಿಕೇರಿ ಹನುಮಪ್ಪನ ದರ್ಶನ ಪಡೆದ ಪುನೀತ್ ರಾಜ್​ಕುಮಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts