More

    ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​ ಬಿಡುಗಡೆ ಮಾಡಿದರು ‘ಕಬ್ಜ’ ಚಿತ್ರದ ಟ್ರೇಲರ್​​

    ಬೆಂಗಳೂರು: ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರದ ಟ್ರೇಲರ್​ ಶನಿವಾರ ರಾತ್ರಿ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಭಾರತೀಯ ಚಿತ್ರರಂಗದ ಶೆಹನ್​ಷಾ ಎಂದೇ ಜನಪ್ರಿಯರಾಗಿರುವ ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​, ಈ ಟ್ರೇಲರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

    ಇದನ್ನೂ ಓದಿ: ‘ಒಂದು ಸಂಜ್ಞೆ ಒಂದು ಮಾತು’ ಎಂಬ ನವಿರಾದ ಪ್ರೇಮಕಥೆ …

    ‘ಕಬ್ಜ’ ಚಿತ್ರದ ಟ್ರೇಲರ್​ ಶನಿವಾರ ಸಂಜೆ 5 ಗಂಟೆ 2 ನಿಮಿಷಕ್ಕೆ ಬಿಡುಗಡೆಯಾಗಬೇಕಿತ್ತು. ತಮ್ಮ ಅಮೋಘ ಅಭಿನಯದಿಂದ ಜನಮನಸೂರೆಗೊಂಡಿರುವ ಭಾರತದ ಖ್ಯಾತ ನಟ ಅಮಿತಾಭ್ ಬಚ್ಚನ್, ಮುಂಬೈನಲ್ಲಿ ಬಿಡಗಡೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಟ್ರೇಲರ್ ಬಿಡುಗಡೆ ವಿಳಂಬವಾಯಿತು. ಇದರಿಂದಾಗಿ ಉಪೇಂದ್ರ ಮತ್ತು ಸುದೀಪ್​ ಅಭಿಮಾನಿಗಳಲ್ಲಿ ಟೆನ್ಶನ್​ ಉಂಟಾಯ್ತು. ಅಂತಿಮವಾಗಿ, ಮೊದಲು ಚಿತ್ರದ ಹಿಂದಿ ಅವತರಣಿಕೆಯ ಟ್ರೇಲರ್​ ಬಿಡುಗಡೆಯಾಗಿ, ಅದಾಗಿ ಕೆಲವೇ ಹೊತ್ತಿನಲ್ಲಿ ಎಲ್ಲ ಭಾಷೆಗಳ ಟ್ರೇಲರ್​ ಬಿಡುಗಡೆಯಾಗಿದೆ.

    ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಟ್ರೇಲರ್​ನ್ನು ಅಮಿತಾಭ್​ ಬಚ್ಚನ್​ ಬಿಡುಗಡೆ ಮಾಡಿರುವುದು ವಿಶೇಷ. ಟ್ರೇಲರ್​ ಬಿಡುಗಡೆ ಮಾಡಿ, ‘ಬಿಗ್​ ಬಿ’ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

    ಇದನ್ನೂ ಓದಿ: ಚಂದನವನಕ್ಕೆ ದಿ ಗ್ರೇಟ್ ಖಲಿ ಎಂಟ್ರಿ; ‘ಕೆಂಡದ ಸೆರಗು’ ಚಿತ್ರದಲ್ಲಿ WWE ವರ್ಲ್ಡ್ ಚಾಂಪಿಯನ್ …

    ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರದಲ್ಲಿ ಉಪೇಂದ್ರ ಜತೆಗೆ ಸುದೀಪ್​ ಶ್ರೇಯಾ ಶರಣ್​, ಮುಕೇಶ್​ ಶರ್ಮ, ನವಾಬ್​ ಷಾ, ಅನೂಪ್​ ರೇವಣ್ಣ ಸೇರಿದಂತೆ ಹಲವರರು ಅಭಿನಯಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತ ಮತ್ತು ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿದೆ. ‘ಕಬ್ಜ’ ಚಿತ್ರವು ಮಾರ್ಚ್ 17 ರಂದು ವಿಶ್ವದಾದ್ಯಂತ ತೆರೆ‌ ಕಾಣಲಿದೆ.

    VIDEO| ಉರ್ಫಿ ಜಾವೇದ್ ಹೊಸ ಅವತಾರ; ಮೈಮುಚ್ಚಿಕೊಳ್ಳಲು ಹಾವನ್ನೇ ಬಳಸಿದ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts