More

    ‘ಒಂದು ಸಂಜ್ಞೆ ಒಂದು ಮಾತು’ ಎಂಬ ನವಿರಾದ ಪ್ರೇಮಕಥೆ …

    ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಅದೆಷ್ಟು ಹೊಸಹೊಸ ತಂಡಗಳು ಚಿತ್ರ ಮಾಡುವುದಕ್ಕೆ ಬರುತ್ತಿವೆಯೋ ಲೆಕ್ಕ ಇಡುವುದು ಕಷ್ಟವಾಗಿದೆ. ಹೀಗಿರುವಾಗಲೇ, ಇನ್ನೊಂದು ಹೊಸ ತಂಡ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಸಂಪೂರ್ಣ ರಂಗಭೂಮಿ ಕಲಾವಿದರೇ ಅಭಿನಯಿಸಿರುವ ಈ ಚಿತ್ರಕ್ಕೆ ಸಂತೋಷ್ ಬಾಗಲಕೋಟಿ ಆಕ್ಷನ್-ಕಟ್ ಹೇಳಿದ್ದಾರೆ.

    ಇದನ್ನೂ ಓದಿ: ರೈತರ ಸಮಸ್ಯೆಗಳ ಸರಮಾಲೆ: ವಿಜಯವಾಣಿ ಸಿನಿಮಾ ವಿಮರ್ಶೆ

    ನವಿರಾದ ಪ್ರೇಮ ಕಥೆ ಹೊತ್ತ ಈ ಚಿತ್ರದ ಹೆಸರೇ ‘ಒಂದು ಸಂಜ್ಞೆ ಒಂದು ಮಾತು’. ಇತ್ತೀಚೆಗೆ ಈ ಚಿತ್ರದ ನಾಯಕ ಅಮೋಘ್ ಸಿದ್ದಾರ್ಥ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಶುಭ ಕೋರುವ ಪೋಸ್ಟರ್​​ ಬಿಡುಗಡೆ ಮಾಡಲಾಗಿದೆ.

    ‘ಒಂದು ಸನ್ನೆ ಒಂದು ಮಾತು’ ಚಿತ್ರವು ಸಂತೋಷ್ ಬಾಗಲಕೋಟಿ ಅವರ ಹಲವು ವರ್ಷಗಳ ಕನಸಂತೆ. ಕಳೆದ 15 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರು ‘ಪಾನಿಪುರಿ’, ‘ಜಿಂಕೆಮರಿ’, ‘ನಮಸ್ತೆ ಇಂಡಿಯಾ’ ಸೇರಿದಂತೆ ಏಳೆಂಟು ಸಿನಿಮಾಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕನಾಗಿ ದುಡಿದಿದ್ದು, ಈಗ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

    ಇನ್ನು, ನಾಯಕ ಅಮೋಘ್​ಗೆ ನಾಯಕಿಯಾಗಿ ಯಶಸ್ವಿನಿ ನಾಚಪ್ಪ ನಟಿಸುತ್ತಿದ್ದಾರೆ. ‘ಮುಗುಳು ನಗೆ’ ಸಿನಿಮಾಗೆ ಸಹಾಯಕ ನಿರ್ದೇಶಕಿಯಾಗಿ ಯೋಗರಾಜ್ ಭಟ್ ಜೊತೆ ಕೆಲಸ ಮಾಡಿದ ಅನುಭವ ಇವರಿಗಿದೆ. ಕಳೆದ ಐದು ವರ್ಷದಿಂದ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಇವರಿಗೆ ನಾಯಕಿಯಾಗಿ ಇದು ಮೊದಲ ಸಿನಿಮಾ. ಉಳಿದಂತೆ ದಯಾನಂದ್ ನೀನಾಸಂ, ವೆಂಕಣ್ಣ ಜಾಲಿಮನೆ, ಮುರುಳಿ ಶೃಂಗೇರಿ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಈ ಚತ್ರದಲ್ಲಿ ನಟಿಸುತ್ತಿದ್ದಾರೆ.

    ಇದನ್ನೂ ಓದಿ: ವಿಶೇಷ ಕ್ರಿಕೆಟರ್ ಸೈಯಾಮಿ; ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಚಿತ್ರದಲ್ಲಿ ನಟನೆ

    ಥ್ರಿ ಮಂಕೀಸ್ ಶೋ ಬ್ಯಾನರ್​ನಡಿ ಸುವರ್ಣ ಲಕ್ಷಣ್ ಚೂನಪ್ಪಗೋಳ್​ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎರಡು ಹಾಡುಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಬಹುತೇಕ ಚಿತ್ರೀಕರಣ ಮುಗಿದಿದ್ದು, ಜೂನ್​ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಾರವಾರ, ಉತ್ತರ ಕನ್ನಡ, ಉಡುಪಿ, ಶಿರಸಿ, ಧಾರಾವಾಡ ಮುಂತಾದ ಕಡೆ ಚಿತ್ರೀಕರಣ ಮಾಡಿತುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ಮತ್ತು ಕಿಟ್ಟಿ ಕೌಶಿಕ್ ಛಾಯಾಗ್ರಹಣವಿದೆ.

    ನವೆಂಬರ್​ನಲ್ಲಿ ಹೃತಿಕ್​ ಮದುವೆಯಂತೆ; ಈ ವಿಷಯ ಅವರಪ್ಪನಿಗೇ ಗೊತ್ತಿಲ್ಲವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts