More

    ನವೆಂಬರ್​ನಲ್ಲಿ ಹೃತಿಕ್​ ಮದುವೆಯಂತೆ; ಈ ವಿಷಯ ಅವರಪ್ಪನಿಗೇ ಗೊತ್ತಿಲ್ಲವಂತೆ!

    ಮುಂಬೈ: ಸೂಜಾನ್​ ಖಾನ್​ ಜತೆಗೆ ವೈವಾಹಿಕ ಜೀವನವನ್ನು ಮುರಿದುಕೊಂಡ ನಂತರ, ಸಾಬಾ ಆಜಾದ್​ ಎಂಬ ಇನ್ನೊಬ್ಬ ಯುವತಿಯ ಜತೆಗೆ ಹೃತಿಕ್​ ರೋಶನ್​ ಡೇಟಿಂಗ್​ ಮಾಡುತ್ತಿರುವ ವಿಷಯ ಕಳೆದೊಂದು ವರ್ಷದಿಂದ ಕೇಳಿಬರುತ್ತಿದೆ. ಆದರೆ, ಹೊಸ ವಿಷಯವೆಂದರೆ, ಹೃತಿಕ್​ ಮತ್ತು ಸಬಾ ಇದೇ ನವೆಂಬರ್​ನಲ್ಲಿ ಮದುವೆಯಾಗುತ್ತಿದ್ದಾರಂತೆ.

    ಇದನ್ನೂ ಓದಿ: ರೈತರ ಸಮಸ್ಯೆಗಳ ಸರಮಾಲೆ: ವಿಜಯವಾಣಿ ಸಿನಿಮಾ ವಿಮರ್ಶೆ

    ಹೌದು, ಹೃತಿಕ್ ಮತ್ತು ಸಾಬಾ ಆಜಾದ್​ ಇದೇ ನವೆಂಬರ್​ ತಿಂಗಳಲ್ಲಿ ಮದುವೆಯಾಗುತ್ತದ್ದಾರಂತೆ. ಹಾಗಂತ ಸುದ್ದಿಯೊಂದು ಬಾಲಿವುಡ್​ ಅಂಗಳದಲ್ಲಿ ಕೇಳಿ ಬರುತ್ತಿದೆ. ಆದರೆ, ವಿಚಿತ್ರವೆಂದರೆ, ಇಂಥದ್ದೊಂದು ವಿಷಯ ಹೃತಿಕ್​ ಮನೆಯವರಿಗೇ ಇನ್ನೂ ಗೊತ್ತಿಲ್ಲದಿರುವುದು.

    ಹೃತಿಕ್​ ಮದುವೆ ಯಾವಾಗ ಎಂದು ಬಾಲಿವುಡ್​ ಮಂದಿ ನೇರವಾಗಿ ಹೃತಿಕ್​ ಅಪ್ಪ ರಾಕೇಶ್​ ರೋಶನ್​ ಅವರನ್ನು ಸಂಪರ್ಕಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಕೇಶ್​ ರೋಶನ್​, ತಮಗೆ ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಟಾಲಿವುಡ್​ಗೆ ಹರ್ಷ; ಗೋಪಿಚಂದ್​ ಅಭಿನಯದ 31ನೇ ಚಿತ್ರದ ನಿರ್ದೇಶನ

    ಇನ್ನು, ಕಳೆದ ವರ್ಷ ಬಿಡುಗಡೆಯಾದ ‘ವಿಕ್ರಮ್​ ವೇದ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಹೃತಿಕ್​ ರೋಶನ್​, ಈಗ ‘ಫೈಟರ್​’ ಎಂಬ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡುತ್ತಿದ್ದು, ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುತ್ತಿದೆ.

    ಕನ್ನಡ ಚಿತ್ರರಂಗಕ್ಕೆ ಡಾ. ರಾಜ್​ ಮೊಮ್ಮಗ; ಯುವ ಪರ್ವ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts