More

    ಕನ್ನಡ ಚಿತ್ರರಂಗಕ್ಕೆ ಡಾ. ರಾಜ್​ ಮೊಮ್ಮಗ; ಯುವ ಪರ್ವ ಆರಂಭ

    ಬೆಂಗಳೂರು: ಕಳೆದ ಏಪ್ರಿಲ್​ನಲ್ಲೇ ಯುವ ರಾಜಕುಮಾರ್​ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕಿರಗಂದೂರು ಘೋಷಿಸಿದ್ದರು. ಸಂತೋಷ್​ ಆನಂದರಾಮ್​ ನಿರ್ದೇಶಿಸುತ್ತಿರುವ ಈ ಚಿತ್ರ ಸದ್ಯದಲ್ಲೇ ಶುರುವಾಗಲಿದೆ ಎಂದು ಹೇಳಲಾಗಿತ್ತು. ಈಗ ಈ ಚಿತ್ರ ಕೊನೆಗೂ ಶನಿವಾರ ಶುರುವಾಗಿದೆ. ಚಿತ್ರಕ್ಕೆ ‘ಯುವ’ ಎಂದು ಹೆಸರಿಡಲಾಗಿದೆ.

    ಇದನ್ನೂ ಓದಿ: ಆಸ್ಕರ್​ ವೇದಿಕೆಯಲ್ಲಿ ನಿರೂಪಕಿಯಾಗಿ ದೀಪಿಕಾ ಪಡುಕೋಣೆ!

    ಯುವ ರಾಜಕುಮಾರ್ ಅಭಿನಯದ ಮೊದಲ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಚಿತ್ರದ ಮುಹೂರ್ತ ಇಂದು ಬೆಂಗಳೂರು ನಗರದ ಹೋಟೆಲ್ ಲಲಿತ್ ಅಶೋಕದಲ್ಲಿ ವಿಜೃಂಭಣೆಯಿಂದ ಜರುಗಿದೆ. ಈ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕರಾದ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ್‌ರಾಮ್, ಯುವ ರಾಜಕುಮಾರ್, ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್, ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ ಹಾಗೂ ಚಿತ್ರದ ಇತರೆ ತಾಂತ್ರಿಕ ವಿಭಾಗದವರು ಮತ್ತು ಡಾ. ರಾಜ್​ ಕುಟುಂಬದ ಕುಟುಂಬದ ಅನೇಕ ಗಣ್ಯರು ಪಾಲ್ಗೊಂಡಿದ್ದರು.

    ಚಿತ್ರದ ಮೊದಲ ದೃಶ್ಯಕ್ಕೆ ಶೈಲಜಾ ವಿಜಯ್ ಕಿರಗಂದೂರು ಕ್ಲಾಪ್​ ಮಾಡಿದರೆ, ಅಶ್ವಿನಿ ಪುನೀತ್​ ರಾಜಕುಮಾರ್​ ಕ್ಯಾಮೆರಾ ಚಾಲನೆ ಮಾಡಿದ್ದಾರೆ. ಇನ್ನು, ಚಿತ್ರದ ಮೊದಲ ದೃಶಕ್ಕೆ ಶಿವರಾಜಕುಮಾರ್​ ಆಕ್ಷನ್​-ಕಟ್​ ಹೇಳಿದ್ದಾರೆ.

    ಇದನ್ನೂ ಓದಿ: ‘ಕಬ್ಜ’ದಲ್ಲಿ ಉಪೇಂದ್ರ, ಸುದೀಪ್​ ಜತೆಗೆ ಶಿವಣ್ಣ

    ‘ಯುವ’ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಈ ವರ್ಷದ ಕೊನೆಯಲ್ಲಿ ಬಿಡುಡೆಯಾಗಲಿದೆ. ಡಿ. 22ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರದ ಪ್ರಾರಂಭದ ದಿನವೇ ಘೋಷಿಸಲಾಗಿದೆ.

    ಟಾಲಿವುಡ್​ಗೆ ಹರ್ಷ; ಗೋಪಿಚಂದ್​ ಅಭಿನಯದ 31ನೇ ಚಿತ್ರದ ನಿರ್ದೇಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts