More

    ಧಾರವಾಡದ ನುಗ್ಗಿಕೇರಿ ಹನುಮಪ್ಪನ ದರ್ಶನ ಪಡೆದ ಪುನೀತ್ ರಾಜ್​ಕುಮಾರ್​

    ಯುವರತ್ನ ಸಿನಿಮಾ ಮುಗಿಸಿ, ಜೇಮ್ಸ್ ಚಿತ್ರದ ಒಂದಷ್ಟು ಭಾಗದ ಶೂಟಿಂಗ್​ನಲ್ಲಿ ಭಾಗವಹಿಸಿದ ಪುನೀತ್​ ರಾಜ್​ಕುಮಾರ್​ ಸದ್ಯ ಪ್ರವಾಸದಲ್ಲಿದ್ದಾರೆ. ಉತ್ತರ ಕರ್ನಾಟಕದತ್ತ ಮುಖಮಾಡಿರುವ ಪುನೀತ್ ದಂಪತಿ, ಉತ್ತರ ಕನ್ನಡದ ದಾಂಡೇಲಿ, ಜೋಯಿಡಾಗೆ ತೆರಳಿ ಕಾಲ ಕಳೆದಿದ್ದಾರೆ. ಇದೀಗ ಧಾರವಾಡದ ಹೊರವಲಯದಲ್ಲಿರುವ ನುಗ್ಗಿಕೇರಿ ಹನುಪ್ಪನ ದರ್ಶನವನ್ನೂ ಪುನೀತ್​ ಪಡೆದುಕೊಂಡಿದ್ದಾರೆ. ಇಂದು (ಮಂಗಳವಾರ) ಬೆಳಗ್ಗೆ ಪತ್ನಿ ಜತೆಗೆ ತೆರಳಿ ಅರ್ಚನೆ ಮಾಡಿಸಿ ಬಂದಿದ್ದಾರೆ. ಆ ಭೇಟಿಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಇತ್ತೀಚೆಗಷ್ಟೇ ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯನ ದರ್ಶನ ಪಡೆದಿದ್ದ ಪುನೀತ್, ಜೋಯಿಡಾದಲ್ಲಿ ಕಾಳಿ ನಡದಿಯ ಬಗ್ಗೆ ಸಾಕ್ಷ್ಯ ಚಿತ್ರದ ಶೂಟಿಂಗ್​ ಸಲುವಾಗಿ ತೆರಳಿದ್ದರು. ಬಳಿಕ ಹಿರಿಯ ಅಭಿಮಾನಿಯೊಬ್ಬರನ್ನು ಭೇಟಿಯಾಗಿ ಬಂದಿದ್ದರು. ಈಗ ಅಲ್ಲಿಂದ ನೇರವಾಗಿ ಧಾರವಾಡದ ನುಗ್ಗಿಕೇರಿಗೆ ಆಗಮಿಸಿ ಹನುಮನ ದರ್ಶನ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts