More

    ರಾಜ್ಯ ಸರ್ಕಾರದ ಬಜೆಟ್​ ಬಗ್ಗೆ ಸ್ವಪಕ್ಷೀಯರಲ್ಲೇ ಅಸಮಾಧಾನ; ಆದರೆ ಪರಿಸ್ಥಿತಿ ಅರ್ಥ ಮಾಡಿಕೊಂಡ ಜಿ.ಟಿ.ದೇವೇಗೌಡರು..

    ಮೈಸೂರು: ಬಿಜೆಪಿ ಪರ ಮಾತನಾಡಿ ಈಗಾಗಲೇ ತಮ್ಮ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಜೆಡಿಎಸ್​ ಮುಖಂಡ ಜಿ.ಟಿ.ದೇವೇಗೌಡರು, ಇನ್ನು ಮೂರು ವರ್ಷ ಎಲ್ಲಿಗೂ ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದರು.

    ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಜೆಡಿಎಸ್​ನಿಂದ ಗೆದ್ದು ಶಾಸಕನಾಗಿದ್ದೇನೆ. ನನ್ನ ಅವಧಿ ಇನ್ನೂ ಮೂರು ವರ್ಷ ಇದೆ. ಆ ಮೂರು ವರ್ಷ ಎಲ್ಲಿಗೂ ಹೋಗೋದಿಲ್ಲ. ನಮ್ಮ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ, ಪಕ್ಷವೂ ಗಟ್ಟಿಯಾಗಿದೆ ಎಂದು ತಿಳಿಸಿದರು.

    ಎಲ್ಲರೂ ಅವಕಾಶಕ್ಕಾಗಿ, ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಹೋಗುತ್ತಾರೆ. ಜನರೂ ಇದನ್ನು ಒಪ್ಪುತ್ತಾರೆ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾದರು. ಕುಮಾರಸ್ವಾಮಿಯವರಿಗೆ ಇನ್ನೂ ವಯಸ್ಸಿದೆ. ಅವರೂ ಮತ್ತೆರಡು ಬಾರಿ ಮುಖ್ಯಮಂತ್ರಿಯಾಗಬಹುದು. ದೈವ ಬಲ ಇದ್ದರೆ ಖಂಡಿತ ಆಗುತ್ತಾರೆ ಎಂದು ಹೇಳಿದರು.

    ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಅವರದ್ದೇ ಪಕ್ಷದ ಶಾಸಕರಿಂದ ಅಸಮಾಧಾನ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿ.ಟಿ.ದೇವೇಗೌಡರು, ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲದ ಕಾರಣ ಹೀಗಾಗಿದೆ. ಕೇಂದ್ರದಿಂದ ಅನುದಾನ ಕಡಿತವಾಗಿದೆ. ನಾನು ಸಹ ಮೈಸೂರು ಅಭಿವೃದ್ಧಿಗೆ ಅನುದಾನ ಕೇಳಿದ್ದೆ. ಆದರೆ ಕೊಟ್ಟಿಲ್ಲ. ಉಮೇಶ್​ ಖತ್ತಿ ಕೂಡ ತಮ್ಮ ಭಾಗಕ್ಕೆ ಅನ್ಯಾಯವಾಗಿದೆ ಎಂದಿದ್ದಾರೆ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವಾಗ ಹೀಗಾಗುತ್ತದೆ ಎಂದು ಉತ್ತರಿಸಿದರು.

    ಪ್ರಸ್ತುತ ಸನ್ನಿವೇಶದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ನವರಿಗೆ ಯಾವುದೇ ತತ್ವ ಸಿದ್ಧಾಂತಗಳೂ ಇಲ್ಲ. ಈಗ ನಡೆಯುತ್ತಿರುವುದು ಅಧಿಕಾರ ರಾಜಕೀಯ ಮಾತ್ರ. ಇದನ್ನು ಜನರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

     

    ಆರೋಗ್ಯಕಾರಿ ಆಡುಸೋಗೆ; ವಸಡುಗಳಲ್ಲಿ ಇಟ್ಟುಕೊಳ್ಳುವುದರಿಂದ ರಕ್ತಸ್ರಾವ ಕಡಿಮೆಯಾಗುತ್ತದೆ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts