More

    ಬಾಸ್ಕೆಟ್‌ಬಾಲ್ ಆಟಗಾರ್ತಿ ಈಗ ಫೈಟರ್ ಜೆಟ್ ಪೈಲಟ್!

    ನಾಗ್ಪುರ: ಬಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಆಡುತ್ತಿದ್ದ ಹುಡುಗಿ ಈಗ ಆಕಾಶದಲ್ಲಿ ಹಾರಾಡುತ್ತಿದ್ದಾಳೆ! ಹೌದು, ರಾಷ್ಟ್ರಮಟ್ಟದ ಬಾಸ್ಕೆಟ್‌ಬಾಲ್ ಆಟಗಾರ್ತಿ ಅಂತರಾ ಮೆಹ್ತಾ ಅವರು ಈಗ ಭಾರತದ 10ನೇ ಹಾಗೂ ಮಹಾರಾಷ್ಟ್ರ ಮೊದಲ ಫೈಟರ್ ಜೆಟ್ ಪೈಲಟ್ ಆಗಿದ್ದಾರೆ. 24 ವರ್ಷದ ಅಂತರಾಗೆ ಬಾಲ್ಯದಿಂದಲೂ ವಾಯುಸೇನೆ ಸೇರುವ ಕನಸು ಇತ್ತು. ಅದು ಈಗ ನನಸಾದ ಸಂಭ್ರಮದಲ್ಲಿದ್ದಾರೆ.

    ‘ಫ್ಲೈಯಿಂಗ್​ ಆಫೀಸರ್ ಆಗಿ ಆಯ್ಕೆಯಾಗಿರುವುದು ನನಗೆ ನಿರೀಕ್ಷಿತ ಸುದ್ದಿ. ಆದರೆ ಸ್ನೇಹಿತರು ಮತ್ತು ಹಿತೈಷಿಗಳಿಂದ ಹರಿದುಬರುತ್ತಿರುವ ಸಂದೇಶಗಳಿಂದ ನನ್ನ ತಂದೆ-ತಾಯಿ ಅಪಾರ ಖುಷಿಯಾಗಿದ್ದಾರೆ. ಅವರು ಈಗ ಆಕಾಶದಲ್ಲಿ ತೇಲಾಡುತ್ತಿದ್ದಾರೆ. ನಾನು ನನ್ನ ತರಬೇತಿಯನ್ನು ಮುಂದುವರಿಸಲಿದ್ದೇನೆ ಮತ್ತು ದೀಪಾವಳಿಯ ವೇಳೆ ಬಿಡುವು ಪಡೆದುಕೊಳ್ಳಲು ಪ್ರಯತ್ನಿಸಲಿದ್ದೇನೆ’ ಎಂದು ಅಂತರಾ ಹೇಳಿದ್ದಾರೆ. ಸಹೋದರಿ ದೀಪಶಿಕಾ ಸ್ಫೂರ್ತಿಯಿಂದ ಅಂತರಾ ಬಾಸ್ಕೆಟ್‌ಬಾಲ್ ಆಟಗಾರ್ತಿಯಾಗಿದ್ದರು. ಅವರ ತಂದೆ ರವಿ ಮೆಹ್ತಾ ಸ್ಕೂಟರ್ ಮೇಲೆ ಕೂರಿಸಿಕೊಂಡು ಅವರನ್ನು ಬಾಸ್ಕೆಟ್‌ಬಾಲ್ ಟೂರ್ನಿಗಳಿಗೆ ಕರೆದುಕೊಂಡು ಹೋಗತ್ತಿದ್ದರಂತೆ.

    ಇದನ್ನೂ ಓದಿ: ಭಾರತೀಯ ವೇಟ್‌ಲಿಫ್ಟಿಂಗ್ ಒಕ್ಕೂಟದಿಂದ ‘ಮೇಡ್ ಇನ್ ಚೀನಾ’ ಸಲಕರಣೆಗಳಿಗೆ ಬಹಿಷ್ಕಾರ

    ಮನೆ ಸಮೀಪದ ಬಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಕೋಚ್ ಅನಿಲ್ ನಾಯರ್ ಮಾರ್ಗದರ್ಶನದಲ್ಲಿ ಆಡಲಾರಂಭಿಸಿದ್ದ ಅಂತರಾ, 2012ರಲ್ಲಿ 16 ವಯೋಮಿತಿಯ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದರು. ಇತರ ಕೆಲ ವಯೋಮಿತಿ ಮಟ್ಟದ ರಾಷ್ಟ್ರೀಯ ಟೂರ್ನಿಗಳಲ್ಲೂ ಆಡಿದ್ದರು. 2015ರಲ್ಲಿ ಕಣ್ಣೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಹಾರಾಷ್ಟ್ರ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲೂ 2 ಬಾರಿ ಆಡಿದ್ದರು.

    ಇದನ್ನೂ ಓದಿ: ಮಹಿಳೆಯರ ಟಿ20 ವಿಶ್ವಕಪ್ ದಾಖಲೆ; ಅತಿ ಹೆಚ್ಚು ಜನರು ವೀಕ್ಷಿಸಿದ ಮಹಿಳಾ ಕ್ರಿಕೆಟ್ ಟೂರ್ನಿ

    ಭಾರತೀಯ ವಾಯುಸೇನೆಯಲ್ಲಿ ಬಾಸ್ಕೆಟ್‌ಬಾಲ್ ಆಟಗಾರ್ತಿಯರ ಸಂಖ್ಯೆ ಕಡಿಮೆ ಇರುವ ಕಾರಣ ಅವರು ಪುರುಷರ ಜತೆಗೂ ಆಡುತ್ತಾರಂತೆ. ‘ನನ್ನ ಜೀವನದಲ್ಲಿ ಬಾಸ್ಕೆಟ್‌ಬಾಲ್ ಆಟ ಪ್ರಮುಖ ಪಾತ್ರ ನಿರ್ವಹಿಸಿದೆ. ಐಎಎ್ ತರಬೇತಿಯ ವೇಳೆಯೂ ಇದು ನೆರವಾಗಿದೆ. ತಂಡ ಕ್ರೀಡೆಯಾಗಿರುವುದರಿಂದ ಸಹ-ಆಟಗಾರರ ಜತೆಗೆ ಹೊಂದಾಣಿಕೆಯ ಪಾಠವನ್ನು ಕಲಿಸಿದೆ’ ಎಂದು ಅಂತರಾ ವಿವರಿಸಿದ್ದಾರೆ.

    ‘ನಾನು ಯಾವ ವಿಮಾನವನ್ನು ಹಾರಿಸಲಿದ್ದೇನೆ ಎಂಬುದು ನನ್ನ ತರಬೇತಿಯ ಲಿತಾಂಶವನ್ನು ಆಧರಿಸಿರುತ್ತದೆ. ಆದರೆ ನಾನು ತೇಜಸ್ ಜೆಟ್ ಹಾರಿಸಲು ಬಯಸಿದ್ದೇನೆ. ಯಾಕೆಂದರೆ ಅದೊಂದು ದೇಶೀಯ ವಿಮಾನ. ಇದಲ್ಲದೆ ರಾೆಲ್ ಅಥವಾ ಜಾಗ್ವಾರ್ ಕೂಡ ಹಾರಾಡಿಸುವ ಅವಕಾಶವನ್ನು ಬಯಸಿದ್ದೇನೆ. ಆರಂಭದಲ್ಲಿ ರಾೆಲ್ ಹಾರಾಡಿಸುವ ಅವಕಾಶ ಹಿರಿಯರಿಗೆ ಮಾತ್ರ ಸಿಗಬಹುದು. ತರಬೇತಿ ಕಠಿಣವಾಗಿತ್ತು ಎಂದು ನಾನು ಮಹಿಳೆಯಾಗಿ ಹೇಳಲಾರೆ. ಆದರೆ ಸವಾಲುಗಳು ಇದ್ದುದು ನಿಜ. ಐಎಎ್ನ ತರಬೇತಿಯೂ ನಮಗೆ ವೇಗವಾಗಿ ಕಲಿಯುವುದನ್ನೂ ಕಲಿಸುತ್ತದೆ’ ಎಂದು ಅಂತರಾ ಮೆಹ್ತಾ ಹೇಳಿದ್ದಾರೆ.

    ಮೈಸೂರಿನಲ್ಲಿ ತರಬೇತಿ

    ಬಾಸ್ಕೆಟ್‌ಬಾಲ್ ಆಟಗಾರ್ತಿ ಈಗ ಫೈಟರ್ ಜೆಟ್ ಪೈಲಟ್!

    2018ರಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ ಅವರು ಭಾರತೀಯ ವಾಯುಸೇನೆ ಸೇರುವ ಸಲುವಾಗಿ ವಾರಣಾಸಿ ಮತ್ತು ಮೈಸೂರು ಕೇಂದ್ರಗಳಲ್ಲಿ ತರಬೇತಿಯನ್ನೂ ಪಡೆದಿದ್ದರು. 18 ತಿಂಗಳ ತರಬೇತಿಯ ಬಳಿಕ ಅವರು ಫ್ಲೈಯಿಂಗ್​ ಆಫೀಸರ್ ಆಗಿ ಆಯ್ಕೆಯಾಗಿದ್ದಾರೆ. ಹೈದರಾಬಾದ್ ಸಮೀಪದ ದುಂಡಿಗಲ್‌ನ ಏರ್ ಫೋರ್ಸ್ ಅಕಾಡೆಮಿಯಲ್ಲಿ ಪದವಿ ಪಡೆದಿರುವ ಅವರು, ಫೈಟರ್ ಜೆಟ್ ಪೈಲಟ್ ಆಗಿ ಇನ್ನಷ್ಟು ತರಬೇತಿಯನ್ನು ಪಡೆದುಕೊಳ್ಳಲಿದ್ದಾರೆ.

    VIDEO| 40 ಅಡಿ ಎತ್ತರದ ಗೋಡೆಯಲ್ಲಿ ಪಿವಿ ಸಿಂಧು ಚಿತ್ರ, ಅಭಿಮಾನಿಗಳು ಫಿದಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts