More

    ಸಚಿನ್ ತೆಂಡೂಲ್ಕರ್‌ನಿಂದ ಮಿಚೆಲ್ ಮಾರ್ಷ್‌ವರೆಗೆ: ಹುಟ್ಟುಹಬ್ಬದಂದೇ ಶತಕ ಬಾರಿಸಿದ ಕ್ರಿಕೆಟಿಗರಿವರು…

    ನವದೆಹಲಿ: ಕ್ರಿಕೆಟ್​ ಜಗತ್ತು ಲೆಕ್ಕವಿಲ್ಲದಷ್ಟು ಅಸಾಧಾರಣ ಕ್ಷಣಗಳು ಮತ್ತು ದಾಖಲೆಗಳಿಗೆ ಸಾಕ್ಷಿಯಾಗಿದೆ. ಆದರೆ ಕ್ರಿಕೆಟಿಗರು ತಮ್ಮ ಹುಟ್ಟುಹಬ್ಬವನ್ನು ಶತಕದೊಂದಿಗೆ ಆಚರಿಸುವುದು ಮಾತ್ರ ತುಂಬಾ ವಿಶೇಷವಾಗಿದೆ. ಕ್ರಿಕೆಟ್​ನಲ್ಲಿ ಮೈಲಿಗಲ್ಲು ಸಾಧಿಸುವ ಥ್ರಿಲ್​ನೊಂದಿಗೆ ಜೀವನದ ಮತ್ತೊಂದು ವರ್ಷವನ್ನು ಸಂಭ್ರಮಿಸುವುದು ನಿಜಕ್ಕೂ ಅಪರೂಪದ ಸಂಗತಿಯಾಗಿದೆ. ನಿನ್ನೆ (ಅ.20) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್​ ಟೂರ್ನಿಯ 18ನೇ ಪಂದ್ಯವೂ ಇಂಥದ್ದೊಂದು ಕ್ಷಣಕ್ಕೆ ಸಾಕ್ಷಿಯಾಯಿತು.

    Mitchel Marsh

    ಆಸಿಸ್​ ಆಟಗಾರ ಮಿಚೆಲ್​ ಮಾರ್ಷ್​ ನಿನ್ನೆ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಪಾಕ್​ ಬೌಲರ್​ಗಳನ್ನು ಕಾಡಿದ ಮಾರ್ಷ್​ 108 ಎಸೆತ, 10 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನೊಂದಿಗೆ 121 ರನ್​ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮಾರ್ಷ್​ಗೆ ಇದೊಂದು ರೀತಿಯಲ್ಲಿ ಡಬಲ್​ ಸಂಭ್ರಮ ಎಂದರೆ ತಪ್ಪಾಗಲಾರದರು. ಈ ರೀತಿಯ ಅಪರೂಪದ ಕ್ಷಣ ಕೆಲವೇ ಕೆಲ ಕ್ರಿಕೆಟಿಗರಿಗೆ ಮಾತ್ರ ಲಭಿಸಿದ್ದು, ಯಾರ್ಯಾರು ಎಂಬುದನ್ನು ನಾವೀಗ ತಿಳಿಯೋಣ.

    ನ್ಯೂಜಿಲೆಂಡ್​ ತಂಡದ ಆಟಗಾರ ಟಾಮ್​ ಲಾಥಮ್​ ಅವರು 2022ರ ಏಪ್ರಿಲ್​ 2ರಂದು ನೆದರ್ಲೆಂಡ್​ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅಜೇಯ 140 ರನ್​ ಕಲೆಹಾಕುವ ಮೂಲಕ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಲ್ಲದೆ ಶತಕದೊಂದಿಗೆ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದರು.

    Tom Latham

    ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಅವರು 1998ರ ಏ.24ರಂದು ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 134 ರನ್ ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ವಿಶೇಷ ಏನೆಂದರೆ ಅಂದು ಅವರ ಹುಟ್ಟುಹಬ್ಬವೂ ಆಗಿತ್ತು.

    Sachin

    ನ್ಯೂಜಿಲೆಂಡ್​ ತಂಡದ ಮಾಜಿ ಆಟಗಾರ ರಾಸ್​ ಟೇಲರ್​ ಅವರು 2011ರ ಮಾರ್ಚ್​ 8ರಂದು ಪಾಕಿಸ್ತಾನದ ವಿರುದ್ಧ ಶ್ರೀಲಂಕಾದ ಪಲ್ಲೇಕೇಲೆಯಲ್ಲಿ ನಡೆದ ಪಂದ್ಯದಲ್ಲಿ ಹುಟ್ಟುಹಬ್ಬದ ದಿನವೇ 131 ರನ್​ ಶತಕ ಬಾರಿಸಿ ಸಂಭ್ರಮಿಸಿದ್ದರು. ಅಲ್ಲದೆ, ನ್ಯೂಜಿಲೆಂಡ್​ ಗೆಲುವಿಗೆ ಕಾರಣರಾಗಿದ್ದರು.

    Ross Taylor

    ಶ್ರೀಲಂಕಾ ಮಾಜಿ ಆಟಗಾರ ಸನತ್​ ಜಯಸೂರ್ಯ ಅವರು 2008ರ ಜೂನ್​ 30ರಂದು ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಏಷ್ಯಾ ಕಪ್​ ಪಂದ್ಯದಲ್ಲಿ ಹುಟ್ಟುಹಬ್ಬದ ದಿನವೇ 130 ರನ್ ಗಳಿಸಿ ಸಂಭ್ರಮಿಸಿದ್ದರು. ತಂಡದ ಗೆಲವು, ಶತಕ ಮತ್ತು ಹುಟ್ಟುಹಬ್ಬವನ್ನು ಒಟ್ಟಿಗೆ ಸಂಭ್ರಮಿಸಿದ್ದರು.

    Jayasurya

    ಟೀಮ್​ ಇಂಡಿಯಾದ ಮಾಜಿ ಆಟಗಾರ ವಿನೋದ್​ ಕಾಂಬ್ಳಿ ಅವರು 1993ರ ಜನವರಿ 18ರಂದು ರಾಜಸ್ಥಾನದ ಜೈಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಅಜೇಯ 100 ರನ್​ ಬಾರಿಸುವ ಮೂಲಕ ಹುಟ್ಟುಹಬ್ಬದಂದೆ ಶತಕ ಸಂಭ್ರಮ ಮಾಡಿದರು. ಆದರೆ, ಇಂಗ್ಲೆಂಡ್​ 4 ವಿಕೆಟ್​ಗಳ ಅಂತರದಿಂದ ಪಂದ್ಯ ಗೆದ್ದಿದ್ದು, ಕಾಂಬ್ಳಿಗೆ ಕೊಂಚ ನಿರಾಸೆಯಾಯಿತು. (ಏಜೆನ್ಸೀಸ್​)

    Kambli

    ಪಾಕಿಸ್ತಾನ ವಿರುದ್ಧ ಆಲ್​ರೌಂಡ್​ ಪ್ರದರ್ಶನ; ಆಸ್ಟ್ರೇಲಿಯಾಗೆ 62ರನ್​ಗಳ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts