More

    ಕರೊನಾ ಹೊತ್ತಲ್ಲಿ ಪುನೀತ್​ ರಾಜಕುಮಾರ್ ‘ಏನು ಮಾಡೋದು ಸ್ವಾಮಿ..’ ಅಂತಿರೋದ್ಯಾಕೆ?

    ಹಂಬಲ್​ ಪೊಲಿಟೀಶಿಯನ್​ ನೊಗರಾಜ್​’ ನಂತರ ದಾನಿಶ್​ ಸೇಠ್​ ಹೀರೋ ಆಗಿ ನಟಿಸಿರುವ ‘ಫ್ರೆಂಚ್​ ಬಿರಿಯಾನಿ’ ಚಿತ್ರವು ಇದೇ 24ರಂದು ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗುತ್ತಿದೆ. ಆ ಚಿತ್ರದ ಟ್ರೈಲರ್​ ಸಹ ಇತ್ತೀಚೆಗೆ ಬಿಡುಗಡೆಯಾಗಿತ್ತು. ಅದಾದ ಬಳಿಕ ರ್ಯಾಪ್​ ಶೈಲಿಯ ಹಾಡೊಂದು ಬಿಡುಗಡೆ ಆಗಿ ಸದ್ದು ಮಾಡಿತ್ತು. ಇದೀಗ ಪುನೀತ್​ ರಾಜಕುಮಾರ್ ಎಂಟ್ರಿಕೊಟ್ಟಿದ್ದಾರೆ.

    ಇದನ್ನೂ ಓದಿ: PHOTO: ಸಾಕು ನಾಯಿ ಜತೆ ಕೃತಿ ಖರಬಂದ ಲಿಪ್​ಲಾಕ್​!; ಫೋಟೋ ನೋಡಿ ಹೌಹಾರಿದ ನೆಟ್ಟಿಗರು…

    ಹೌದು, ಏನು ಮಾಡೋದು ಸ್ವಾಮಿ ಎಂಬ ಸಾಹಿತ್ಯವುಳ್ಳ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, ವಿಶೇಷ ಎಂಬಂತೆ ಆ ಹಾಡಿಗೆ ಸ್ವತಃ ಪುನೀತ್​ ಧ್ವನಿ ನೀಡಿದ್ದಾರೆ. ಈ ಹಿಂದೆ ಪುನೀತ್​ ನಿರ್ಮಾಣದ ಮಾಯಾಬಜಾರ್ ಚಿತ್ರದಲ್ಲಿ ಲೋಕ ಮಾಯಾಬಜಾರು ಹಾಡಿಗೆ ಸ್ಟೆಪ್ ಹಾಕಿದ್ದ ಪವರ್​ಸ್ಟಾರ್, ಈ ಸಲ ಫ್ರೆಂಚ್​ ಬಿರಿಯಾನಿಯಲ್ಲಿ ಮೈಕ್​ ಹಿಡಿದು ಹಾಡಿಗೆ ಧ್ವನಿಯಾಗಿದ್ದಾರೆ.

    ಈ ಹಾಡಿಗೂ ಮೊದಲು ಅತಿಥಿ ದೇವೋ ಭವ ಸಾಲುಗಳಿಂದ ಶುರುವಾಗುವ ಹಾಡಿನಲ್ಲಿ, ಬೆಂಗಳೂರಿನ ಅವಸ್ಥೆ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಆ ಹಾಡಿಗೆ ರ್ಯಾಪ್​ ಟಚ್​ ನೀಡಿದ್ದು, ಸಖತ್​ ಕಲರ್​ಫುಲ್​ ಆಗಿ ಹಾಡು ಮೂಡಿಬಂದಿತ್ತು. ಇದೀಗ ಎಣ್ಣೆ ಹಾಡಿಗೆ ಪುನೀತ್​ ಧ್ವನಿ ನೀಡಿದ್ದಾರೆ.
    ವಾಸುಕಿ ವೈಭವ್​ ಸಂಗೀತ ನಿರ್ದೇಶನ ನೀಡಿರುವ ಈ ಹಾಡಿಗೆ ಸ್ವತಃ ಅವರೇ ಸಾಹಿತ್ಯ ಬರೆದಿದ್ದಾರೆ. ಅವಿನಾಶ್​ ಬಲೇಕಲ್ಲ ಅವರೂ ಕೈ ಜೋಡಿಸಿದ್ದಾರೆ. ಕಾರ್ತಿಕ್​ ಪಳನಿ ಛಾಯಾಗ್ರಹಣ ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ದಾನಿಶ್​ ಸೇಠ್ ಬೆಂಗಳೂರಿನ ಆಟೋಡ್ರೈವರ್ ಆಗಿ ಕಾಣಿಸಿಕೊಂಡರೆ, ಚಿತ್ರದ ನಿರ್ದೇಶನ ಜವಾಬ್ದಾರಿ ಪನ್ನಗಾ ಭರಣ ಅವರದ್ದು.

    ಇದನ್ನೂ ಓದಿ: PHOTOS: ನಶೆ ಏರಿಸೋ ಲುಕ್​ನಲ್ಲಿ ಬಾಲಿವುಡ್​ ಬೆಡಗಿ ಇಶಾ ಗುಪ್ತಾ

    ಈ ಹಿಂದೆ ಪುನೀತ್​ ನಿರ್ಮಿಸಿದ್ದ ‘ಕವಲು ದಾರಿ’ ಮತ್ತು ‘ಮಾಯಾ ಬಜಾರ್​’ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ನಂತರ ಅಮೇಜಾನ್​ ಪ್ರೈಮ್​ನಲ್ಲಿ ಕಾಣಿಸಿಕೊಂಡಿದ್ದವು. ಈಗಾಗಲೇ ‘ಲಾ’ ಬಿಡುಗಡೆಯಾಗಿದ್ದು, ‘ಫ್ರೆಂಚ್​ ಬಿರಿಯಾನಿ’ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ದಾನಿಶ್​ ಜತೆಗೆ, ಸಾಲ್ ಯೂಸಫ್​, ರಂಗಾಯಣ ರಘು, ದಿಶಾ ಮದನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಸಿಲಿಕಾನ್ ಸಿಟಿಯಿಂದ ದೂರವಿದ್ದು ಕೃಷಿಯಲ್ಲೇ ಖುಷಿ ಕಾಣುತ್ತಿರುವ ಕರಾವಳಿ ಕುವರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts