More

    ಎಕ್ಸೆಲ್ ಪಿಯು ಕಾಲೇಜಿನಲ್ಲಿ ಉಚಿತ ಶಿಕ್ಷಣ

    ಬೆಳ್ತಂಗಡಿ: ವಿಜ್ಞಾನ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಶೇಷ ಸಾಧನೆ ಮಾಡಿ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಹತ್ತನೆಯ ತರಗತಿ ತನಕ ಸರ್ಕಾರಿ ಶಾಲೆಯಲ್ಲಿ ಓದಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ.

    ಗ್ರಾಮೀಣ ಪ್ರದೇಶದ, ಅವಕಾಶ ವಂಚಿತ ವಿದ್ಯಾರ್ಥಿಗಳ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕನಸು ನನಸು ಮಾಡಲು ನೀಟ್ ಮತ್ತು ಜೆಇಇ/ ಸಿಇಟಿ ಕೋಚಿಂಗ್ ನೀಡಲು ತೀರ್ಮಾನಿಸಿದೆ. ರಾಷ್ಟ್ರಮಟ್ಟದ ಉನ್ನತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಾದ ಏಮ್ಸ್, ರಾಷ್ಟ್ರಮಟ್ಟದ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿ, ಎನ್‌ಐಐಟಿಗಳ ಪ್ರವೇಶಾತಿ ಪರೀಕ್ಷೆಗಳಿಗೆ ತರಬೇತುಗೊಳಿಸಿ ವಿದ್ಯಾರ್ಥಿಗಳ ಕನಸು ನನಸು ಮಾಡಲು ಎಕ್ಸೆಲ್ ಪದವಿಪೂರ್ವ ಕಾಲೇಜು ಅಣಿಗೊಂಡಿದೆ.

    ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಲು ಸಿ.ಎ ಫೌಂಡೇಷನ್ ಕೋರ್ಸ್, ಕಂಪನಿ ಸೆಕ್ರೆಟರಿ ಹುದ್ದೆಗಾಗಿ ಸಿ.ಎಸ್ ಫೌಂಡೇಷನ್ ಹಾಗೂ ರಾಷ್ಟ್ರಮಟ್ಟದ ಕಾನೂನು ಪದವಿ ಪ್ರವೇಶಕ್ಕಾಗಿ ಕ್ಲಾಟ್ ಕೋಚಿಂಗ್ ನೀಡಲಾಗುವುದು ಎಂದು ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts