More

    ಎಬಿವಿಪಿಯಿಂದ ಸಿಇಟಿ, ನೀಟ್‌ಗೆ ಉಚಿತ ತರಬೇತಿ

    ಬೆಂಗಳೂರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೆಂಗಳೂರು ಕೇಂದ್ರದ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ನೀಡಲಾಗುತ್ತಿದೆ.

    ಮಾ.10ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ಮಾ.26ರಿಂದ ತರಗತಿಗಳು ಆರಂಭವಾಗಲಿವೆ. ಪ್ರತಿ ದಿನ 6 ಗಂಟೆಗಳ ಕಾಲ ಬೋಧನೆ ನಡೆಯಲಿದೆ. ನುರಿತ ಅಧ್ಯಾಪಕರಿಂದ ಬೋಧನೆ ನಡೆಸಲಾಗುತ್ತದೆ. ಪ್ರತಿ ವಿಷಯಕ್ಕೆ ಉತ್ತಮ ಮುದ್ರಿತ ನೋಟ್ಸ್, ಪ್ರತಿ ವಿಷಯಾಧಾರಿತ ಮಾದರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.ನೋಟ್ಸ್ ಮುದ್ರಣಕ್ಕಾಗಿ ಒಂದು ಸಾವಿರ ರೂ.ಗಳನ್ನು ಪಡೆಯಲಾಗುತ್ತದೆ.

    ತರಗತಿಗಳು ಶೇಷಾದ್ರಿಪುರ 1ನೇ ಮುಖ್ಯರಸ್ತೆಯಲ್ಲಿರುವ ಯುವಶಕ್ತಿ ಕೇಂದ್ರದಲ್ಲಿ ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ 96638 21204/63614 56618 ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts