More

    ಸರ್ಕಾರದಿಂದಲೇ ನೀಟ್​, ಜೆಇಇ ಕೋಚಿಂಗ್! ಪ್ರಾಂಶುಪಾಲರಿಗೆ ಉನ್ನತ ಶಿಕ್ಷಣ ಇಲಾಖೆಯ ಪತ್ರ

    ಭುವನೇಶ್ವರ: ಒಡಿಶಾ ಸರ್ಕಾರವು ರಾಜ್ಯದ ವಿವಿಧ ಹೈಯರ್​ ಸೆಕೆಂಡರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಟ್​ ಮತ್ತು ಜೆಇಇ ಕೋಚಿಂಗ್​ ನೀಡಲು ನಿರ್ಧರಿಸಿದೆ. ಈ ಕುರಿತು ಎಲ್ಲ ಸರ್ಕಾರಿ ಮತ್ತು ಸರ್ಕಾರೇತರ ಅನುದಾನಿತ ಪ್ಲಸ್​-2 ಕಾಲೇಜುಗಳ ಪ್ರಾಂಶುಪಾಲರಿಗೆ ಉನ್ನತ ಶಿಕ್ಷಣ ನಿರ್ದೇಶಕ ರುರಾಮ್​ ಆರ್​. ಅಯ್ಯರ್​ ಕಳೆದ ಬುಧವಾರ ಪತ್ರ ಬರೆದಿದ್ದಾರೆ.

    ನೀಟ್​, ಜೆಇಇ ಆಕಾಂಗಳಿಗೆ ಸರ್ಕಾರಿ ಮತ್ತು ಸರ್ಕಾರೇತರ ಅನುದಾನಿತ ಹೈಯರ್​ ಸೆಕೆಂಡರಿ ಶಾಲೆಗಳಲ್ಲಿ ತಮ್ಮ ಸ್ಪರ್ಧಾತ್ಮಕ ಸಾಮರ್ಥ್ಯ ಹೆಚ್ಚಿಸಲು ಪೂರಕ ಆನ್​ಲೈನ್​ ಕೋಚಿಂಗ್​ ನೀಡಲು ನಿರ್ಧರಿಸಲಾಗಿದೆ. ವರ್ಚುವಲ್​ ಮೋಡ್​ನಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಆದ್ದರಿಂದ ಇಂಟರ್​ಆ್ಯಕ್ಟಿವ್​ ಪ್ಯಾನೆಲ್​ಗಳು ಅಥವಾ ಸ್ಮಾರ್ಟ್​ ಟಿವಿಗಳು ಸೇರಿದಂತೆ ಹೈಯರ್​ ಸೆಕೆಂಡರಿ ಶಾಲೆಗಳಲ್ಲಿ ಅಗತ್ಯ ವ್ಯವಸ್ಥೆಗಳನ್ನು ಅಳವಡಿಸಲು ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.

    ಯೋಜನೆ ಮತ್ತು ಸಮನ್ವಯ ಇಲಾಖೆ ಯೋಜನೆಯಡಿ ಹಲವು ಹೈಯರ್​ ಸೆಕೆಂಡರಿ ಶಾಲೆಗಳು ಸ್ಮಾರ್ಟ್​ ತರಗತಿಗಳ ಅಭಿವೃದ್ಧಿಗೆ ನೆರವು ಪಡೆದಿವೆ. ಅಸ್ತಿತ್ವದಲ್ಲಿರುವ ಹಣಕಾಸು ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ವಿದ್ಯಾರ್ಥಿ ಶೈಣಿಕ ನಿರ್ವಹಣಾ ವ್ಯವಸ್ಥೆ (ಎಸ್​ಎಎಂಎಸ್​) ಖಾತೆ ಅಥವಾ ಎಚ್​ಎಸ್​ಎಸ್​ ಅಭಿವೃದ್ಧಿ ನಿಧಿಯಿಂದ ಲಭ್ಯವಿರುವ ಹಣ ಬಳಸಿಕೊಳ್ಳಲು ಸಂಸ್ಥೆಗೆ ಅನುಮತಿಸಲಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts