More

    ಹಿರಿಯ ಸಂಸದ ಜಿ.ಎಂ. ಸಿದ್ದೇಶ್ವರ್​ಗೆ ವಾಟ್ಸ್​ಆ್ಯಪ್​ ವಿಡಿಯೋ ಕಾಲ್ ಬೆದರಿಕೆ; ಎಫ್​ಐಆರ್​ ದಾಖಲು

    ಬೆಂಗಳೂರು: ರಾಜ್ಯದ ಹಿರಿಯ ಸಂಸದ ಜಿ.ಎಂ. ಸಿದ್ದೇಶ್ವರ್ ಅವರಿಗೆ ಅಪರಿಚಿತ ಮಹಿಳೆಯಿಂದ ವಾಟ್ಸ್​ಆ್ಯಪ್ ವಿಡಿಯೋ ಕಾಲ್ ಬೆದರಿಕೆ ಬಂದಿದ್ದು, ಈ ಕುರಿತು ಅವರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಇದನ್ನೂ ಓದಿ: ಯಾರೂ ಸಾವಿಗೀಡಾಗದಿರಲಿ ಎಂದು ಜನರನ್ನು ಸೇರಿಸಿ ಮೃತ್ಯುಂಜಯ ಜಪ ಮಾಡಿಸಿದ ವ್ಯಕ್ತಿ ಮೇಲೆ ಕೇಸ್​ ದಾಖಲು!

    ಘಟನೆಯ ವಿವರ: ದಾವಣಗೆರೆಯ ಹಿರಿಯ ಸಂಸದ ಜಿ.ಎಂ. ಸಿದ್ದೇಶ್ವರ್ ಅವರಿಗೆ ಜುಲೈ 20 ರಂದು ರಾತ್ರಿ 10.16ಕ್ಕೆ ಅಪರಿಚಿತ ಮಹಿಳೆಯೊಬ್ಬಳು “ಹಾಯ್……..”​ ಎಂದು ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಸಿದ್ದೇಶ್ವರ್​ ಅವರಿಗೆ 10:22ಕ್ಕೆ ದಿಢೀರ್ ವಿಡಿಯೋ ಕಾಲ್​ ಬಂದಿದೆ. ಯಾರು, ಏನು ಎಂದು ಪ್ರಶ್ನೆ ಮಾಡಿದಾಗ ಆಕೆ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾರೆ.

    ಕಾಲ್​ ಕಟ್​ ಮಾಡಿದರೂ ಮತ್ತೆ ರಾತ್ರಿ 10.24ಕ್ಕೆ ವಾಟ್ಸ್ ಆಪ್​ ಆಡಿಯೋ ಕಾಲ್ ಮಾಡಿ ಮತ್ತದೇ ಮಾತನ್ನು ಮುಂದುವರಿಸಿದ್ದಾರೆ. ಕರೆಯನ್ನು ಕಟ್ ಮಾಡಿದ್ರು ಪುನಃ ಕಾಲ್​ ಮಾಡುತ್ತಿದ್ದ ಅಪರಿಚಿತ ಮಹಿಳೆ, ಮತ್ತೆ 10.27ಕ್ಕೆ ವಿಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾರೆ ಎಂದು ಸಂಸದ ಆರೋಪಿಸಿದ್ದಾರೆ.

    ಇದನ್ನೂ ಓದಿ: VIDEO| ಉಕ್ಕಿ ಹರಿಯುತ್ತಿದ್ದ ಸೇತುವೆ ಮೇಲೆ ಹುಚ್ಚಾಟ: ನೀರಿನ ರಭಸಕ್ಕೆ ಸಿಲುಕಿದ ಯುವಕರ ಪ್ರಾಣಸಂಕಟ

    ವಿಡಿಯೋ ಕಾಲ್​ ಅನ್ನು ರೆಕಾರ್ಡ್ ಮಾಡಿ ಅಪ್ಲೋಡ್ ಮಾಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾರೆ. ಈ ಘಟನೆ ಸಂಬಂಧ ಜಿ.ಎಂ. ಸಿದ್ದೇಶ್ವರ್, ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಇದೀಗ ಎಫ್​​ಐಆರ್​ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

    VIDEO | ರಾಂಚಿ ರಸ್ತೆಯಲ್ಲಿ ವಿಂಟೇಜ್​​ ಕಾರು ಚಲಾಯಿಸಿದ ‘ಕ್ಯಾಪ್ಟನ್​ ಕೂಲ್’​; ವಿಡಿಯೋ ಮಾಡಿದ ಧೋನಿ ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts