More

    ಶಿಕ್ಷಕ ನೌಕರಿಯಲ್ಲಿ ವಂಚನೆ ಪ್ರಕರಣ: ಅನಾಮಿಕಾ ಶುಕ್ಲಾ ಆಯ್ತು, ಈಗ ಪ್ರದೀಪ್​​​​​​​​ಕುಮಾರ್ ಸರದಿ

    ಲಖನೌ: ಅನಾಮಿಕಾ ಶುಕ್ಲಾ ಪ್ರಕರಣದ ನಂತರ ಅಂಥದ್ದೇ ಮತ್ತೊಂದು ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ.
    ಸರ್ಕಾರಿ ಶಾಲಾ ಶಿಕ್ಷಕನೊಬ್ಬ ಉತ್ತರ ಪ್ರದೇಶದ ಪ್ರತ್ಯೇಕ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಎರಡು ಶಾಲೆಗಳಿಂದ ಸಂಬಳ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಪ್ರದೀಪ್ ಕುಮಾರ್ ಎಂಬಾತ ಮುಜಾಫರ್​ ನಗರ ಮತ್ತು ಬರೇಲಿ ಜಿಲ್ಲೆಗಳಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಉದ್ಯೋಗದಲ್ಲಿದ್ದ. ಆತ ಜೂನ್ 2011 ರಿಂದ ಮುಜಾಫರ್​​ನಗರದ ಶಾಲಾ ಶಿಕ್ಷಕನಾಗಿದ್ದಾಗಲೇ, ಬರೇಲಿಯ ಶಾಲೆಯಿಂದ ಸಂಬಳವನ್ನೂ ಪಡೆಯುತ್ತಿದ್ದ ಎಂದು ಅವರು ಹೇಳಿದರು.
    ಕುಮಾರ್ ಸಲ್ಲಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ ನಂತರ ಈ ವಿಷಯ ಮಂಗಳವಾರ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಭಾರತೀಯ ರೈಲ್ವೆ ಇತಿಹಾಸದಲ್ಲೇ ಗಮನಾರ್ಹ ಸಾಧನೆ ಮಾಡಿದೆ.. ಅದೇನು ಗೊತ್ತಾ?

    ದಾಖಲೆಗಳ ಆನ್‌ಲೈನ್ ಪರಿಶೀಲನೆಯ ವೇಳೆ, ಪ್ರದೀಪ್ ಕುಮಾರ್ ಮುಜಾಫರ್ ನಗರ ಮತ್ತು ಬರೇಲಿಯ ಎರಡು ಬೇರೆ ಬೇರೆ ಶಾಲೆಗಳಲ್ಲಿ ಶಿಕ್ಷಕನಾಗಿ ಉದ್ಯೋಗದಲ್ಲಿದ್ದ ಎಂದು ನಮಗೆ ತಿಳಿದುಬಂತು. ಅದೇ ದಾಖಲೆಗಳ ಆಧಾರದ ಮೇಲೆ ಆತನಿಗೆ ಕೆಲಸ ಸಿಕ್ಕಿದೆ ಎಂದು ಶಿಕ್ಷಣಾಧಿಕಾರಿ ನರೇಂದರ್ ಸಿಂಗ್ ಹೇಳಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
    ಎಂಟು ವರ್ಷಗಳಿಗಿಂತ ಹೆಚ್ಚು ಕಾಲ ಮುಜಾಫರ್​​ನಗರ ಶಾಲೆಯಲ್ಲಿ ಬೋಧಿಸಿದ ನಂತರ, ಕುಮಾರ್ 2019 ರ ನವೆಂಬರ್‌ನಲ್ಲಿ ವೈದ್ಯಕೀಯ ರಜೆಗೆ ಹೋಗಿದ್ದ. ನಂತರ ರಾಜೀನಾಮೆಯನ್ನು ಕಳುಹಿಸಿದ್ದ ಮತ್ತು ಆತ ಈಗ ಎಲ್ಲಿದ್ದಾನೆ ಎಂಬುದು ತಿಳಿದುಬಂದಿಲ್ಲ ಎಂದು ಅವರು ಹೇಳಿದರು.
    ಕಳೆದ ತಿಂಗಳು, ವಿವಿಧ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಪಡೆಯಲು ಒಂದೇ ರೀತಿಯ ದಾಖಲೆಗಳನ್ನು ಬಳಸಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಹಲವರನ್ನು ಬಂಧಿಸಿದ್ದರು. 

    ಫೇರ್​ ಆ್ಯಂಡ್​ ಲವ್ಲೀ ಹೆಸರು ಬದಲಾಯಿಸಿದ ಹಿಂದುಸ್ತಾನ್​ ಯುನಿಲೀವರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts