More

    ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ

    ಚಿಕ್ಕಮಗಳೂರು: ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಲೋಪದೋಷಗಳಿದ್ದು ಅವುಗಳನ್ನು ಸರಿಪಡಿಸುವ ಜೊತೆಗೆ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲು ಸಂಕಲ್ಪ ಮಾಡಿ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿz್ದೆÃನೆ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭಾಸ್ಕರ್‌ಶೆಟ್ಟಿ ತಿಳಿಸಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು ೩೦ ವರ್ಷಗಳಿಗೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಶಾಲೆಯಿಂದ ಪದವಿಪೂರ್ವ ಕಾಲೇಜು, ಕ್ಷೇತ್ರ ಶಿಕ್ಷಣಾಧಿಕಾರಿ, ಪ್ರಭಾರಿ ಉಪನಿರ್ದೇಶಕರಾಗಿ ವಿವಿಧ ಹಂತದಲ್ಲಿ ಸೇವೆಸಲ್ಲಿಸಿ ಶಿಕ್ಷಣ ಕ್ಷೇತ್ರದ ಬಗ್ಗೆ ಸಂಪೂರ್ಣವಾಗಿ ಅರಿವು ಹೊಂದಿz್ದÉÃನೆ. ಹೀಗಾಗಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಅರಿವಿದೆ. ಈ ಸಮಸ್ಯೆಗಳನ್ನು ಪರಿಹರಿಸುವ ಉz್ದÉÃಶದಿಂದ ಚುನಾವಣೆಗೆ ಸ್ಪರ್ಧಿಸಿz್ದÉÃನೆ ಎಂದರು.
    ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ವರ್ಗದ ಶಿಕ್ಷಕರು ಅನೇಕ ಸಮಸ್ಯೆಗಳಲ್ಲಿದ್ದಾರೆ. ಬಡ್ತಿ, ಮುಂಬಡ್ತಿ ಅವಕಾಶದಿಂದ ವಂಚಿತರಾಗಿದ್ದಾರೆ. ಪಿಂಚಣಿ ಯೋಜನೆಯಲ್ಲಿ ಅನನುಕೂಲವಾಗಿದೆ. ವರ್ಗಾವಣೆ, ನಿಯೋಜನೆಗಳಲ್ಲಿ ವ್ಯಾಪಕವಾದ ತಾರತಮ್ಯವಿದ್ದು ಇವುಗಳನ್ನು ಸರಿಪಡಿಸಲು ಇಲ್ಲಿಯವರೆಗೂ ಯಾರೂ ಪ್ರಯತ್ನ ನಡೆಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಶಿಕ್ಷಣ ಕ್ಷೇತ್ರದಲ್ಲಿನ ಸಂಪೂರ್ಣ ಅರಿವಿನೊಂದಿಗೆ ಸುಧೀರ್ಘಕಾಲದ ಅನುಭವ ಹೊಂದಿರುವ ತಾವು ಶಿಕ್ಷಕ ಸಮೂಹದ ಪರವಾಗಿ ಪ್ರಾಮಾಣಿಕವಾದ ಸೇವೆಸಲ್ಲಿಸುವ ಉz್ದÉÃಶದಿಂದ ಚುನಾವಣೆಗೆ ಸ್ಪರ್ಧಿಸಿz್ದÉÃನೆ. ತಮ್ಮ ಅನುಭವವನ್ನು ಆಧರಿಸಿ ಶಿಕ್ಷಕರ ಸೇವೆ ಮಾಡಲು ಆಶೀರ್ವದಿಸುವಂತೆ ಮನವಿ ಮಾಡಿದರು.
    ತಮ್ಮನ್ನು ಆಯ್ಕೆ ಮಾಡಿದಲ್ಲಿ ಪಠ್ಯಪುಸ್ತಕಗಳ ಗೊಂದಲ, ವೇತನ ಹಾಗೂ ಬಡ್ತಿ-ಮುಂಬಡ್ತಿಯ ತಾರತಮ್ಯ ಸರಿಪಡಿಸುವ ಜೊತೆಗೆ ಎಲ್ಲ ಹಂತದ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ಸಂಕಲ್ಪ ಮಾಡಿz್ದÉÃನೆ ಎಂದರು.
    ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಡಾ. ಸುಬ್ಬಣ್ಣಶೆಟ್ಟಿ, ಗಣೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts