More

    ರೀಲ್​ ಮೀರಿಸುವಂತಹ ರಿಯಲ್​ ಸ್ಟೋರಿ: ಜೈಲು ಸೇರಿದರೂ ಕಾನೂನು ಓದಿ, ಸ್ವತಃ ಕೇಸ್​ ನಡೆಸಿ ದೋಷಮುಕ್ತನಾದ!

    ಮೀರತ್​: ಪ್ರತಿಕೂಲ ಪರಿಸ್ಥಿತಿಯನ್ನೇ ಪರಿವರ್ತಿಸಿಕೊಂಡು ಸಾಧನೆ ಮಾಡಿಕೊಳ್ಳುವುದಕ್ಕೆ ಈ ಘಟನೆಯು ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಮೀರತ್‌ನ 18 ವರ್ಷದ ಅಮಿತ್ ಚೌಧರಿ ವಿಶಿಷ್ಟ, ರೋಮಾಂಚಕ ಕಥೆ ಇದು. ರೀಲ್​ ಸ್ಟೋರಿಯನ್ನು ಮೀರಿಸುವ ರಿಯಲ್​ ಸ್ಟೋರಿ.

    ಪೊಲೀಸ್ ಸಿಬ್ಬಂದಿಯ ಹತ್ಯೆಯ ಪ್ರಕರಣದಲ್ಲಿ ಬಂಧಿಸಲ್ಪಟ್ಟ 17 ಜನರಲ್ಲಿ ಅಮಿತ್ ಕೂಡ ಒಬ್ಬರಾಗಿದ್ದರು. ಅಮಿತ್ ಸಂಪೂರ್ಣ ನಿರಪರಾಧಿಯಾಗಿದ್ದರೂ ಭಾರತೀಯ ದಂಡ ಸಂಹಿತೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಅವರ ಮೇಲೆ ವಿವಿಧ ಆರೋಪಗಳನ್ನು ಹೊರಿಸಲಾಗಿತ್ತು.

    ನಂತರ ಅವರನ್ನು ಜೈಲಿನ ಕಂಬಿ ಹಿಂದೆ ಹಾಕಲಾಯಿತು. 2013ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಅವರು ವಿಶಿಷ್ಟ ಪ್ರಯಾಣವನ್ನೇ ಪ್ರಾರಂಭಿಸಿದರು. ತಮ್ಮ ವಿರುದ್ಧದ ಪ್ರಕರಣದಲ್ಲಿ ಸ್ವತಃ ಕಾನೂನು ಹೋರಾಟ ಕೈಗೊಳ್ಳಲು ನಿರ್ಧರಿಸಿದರು. ಇದಕ್ಕಾಗಿ ಕಾನೂನು ಅಧ್ಯಯನವನ್ನೇ ಕೈಗೊಂಡರು.

    ಕೈಲ್ ಗ್ಯಾಂಗ್‌ಗಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಅಮಿತ್ ವಿರುದ್ಧ ಆರೋಪಿಸಿ ಇಬ್ಬರು ಪೊಲೀಸ್ ಕಾನ್​​ಸ್ಟೇಬಲ್​ಗಳ ಹತ್ಯೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಪೋಲೀಸರ ಹತ್ಯೆಯಾಗಿದ್ದರಿಂದ ಹಾಗೂ ಅಂದಿನ ಮುಖ್ಯಮಂತ್ರಿ ಮಾಯಾವತಿ ಅವರಿಂದ ನೇರವಾಗಿ ಆದೇಶಗಳು ಬಂದಿದ್ದರಿಂದ ಆರೋಪಿಗಳನ್ನು ತ್ವರಿತವಾಗಿ ಬಂಧಿಸಲಾಗಿತ್ತು. ಈ ಘಟನೆಯ ಸಮಯದಲ್ಲಿ 18 ವರ್ಷದ ಅಮಿತ್ ಚೌಧರಿ ಅವರು ಶಾಮ್ಲಿಯಲ್ಲಿ ತಮ್ಮ ಸಹೋದರಿ ಜತೆ ಇದ್ದರು. ಪ್ರಕರಣದ ಇತರ 17 ಆರೋಪಿಗಳೊಂದಿಗೆ ಅವರನ್ನೂ ಬಂಧಿಸಲಾಯಿತು.

    ಅವರು ಎರಡು ವರ್ಷಗಳ ಕಾಲ ಜೈಲಿನಲ್ಲಿ ಕೆಲ ಭಯಾನಕ ದರೋಡೆಕೋರರ ನಡುವೆ ಇದ್ದರು. ರೈತನ ಮಗನಾದ ಅಮಿತ್ ನಿರಾಸೆಗೆ ಬಲಿಯಾಗದೆ ಜೈಲಿನಲ್ಲಿದ್ದರೂ ದೃಢನಿಶ್ಚಯದಿಂದ ಇದ್ದರು. ಜೈಲಿನಲ್ಲಿ ಕೊಳೆಯುತ್ತಿರುವಾಗ ಕುಖ್ಯಾತ ದರೋಡೆಕೋರರು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ತಮ್ಮ ಗ್ಯಾಂಗ್‌ ಸೇರಲು ನೀಡಿದ ಆಹ್ವಾನಗಳನ್ನು ಅವರು ನಿರಾಕರಿಸಿದರು.

    2013 ರಲ್ಲಿ ಜಾಮೀನು ಪಡೆದ ನಂತರ ಅವರು ಕಾನೂನು ಅಧ್ಯಯನದಲ್ಲಿ ತೊಡಗಿ, ಬಿಎಎಲ್​ಎಲ್​ಬಿ ಮತ್ತು ಎಲ್ಎಲ್ಎಂ ಪೂರ್ಣಗೊಳಿಸಿದರು. ಅಂತಿಮವಾಗಿ ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ತರುವಾಯ ಅವರು ತಮ್ಮದೇ ಪ್ರಕರಣದಲ್ಲಿ ಹೋರಾಡಿ, ವಿಜಯಶಾಲಿಯಾಗಿ ಹೊರಹೊಮ್ಮಿದರು. ಇತ್ತೀಚೆಗೆ ಬಂದ ತೀರ್ಪಿನಲ್ಲಿ ಅಮಿತ್ ಸೇರಿದಂತೆ 13 ವ್ಯಕ್ತಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.

    ಅಪಹರಣದ ಕಥೆ ಕಟ್ಟಿ ಹಣಕ್ಕಾಗಿ ತಂದೆಗೆ ಬೇಡಿಕೆ ಇಟ್ಟ ಮಗ ಸಿಕ್ಕಿಹಾಕಿಕೊಂಡಿದ್ದು ಹೇಗೆ?

    ಛತ್ತೀಸ್​ಗಢಕ್ಕೆ ಇಬ್ಬರು ಡಿಸಿಎಂಗಳು: ಮಾಜಿ ಸಿಎಂ ಆಗಲಿದ್ದಾರೆ ಸ್ಪೀಕರ್

    ಲಾಭದಲ್ಲಿ ಲಾರ್ಜ್​ ಕ್ಯಾಪ್ ಮೀರಿಸಿದ ಮಿಡ್​ ಕ್ಯಾಪ್​ಗಳು: 9 ತಿಂಗಳಲ್ಲಿ ಶೇಕಡಾ 47 ಗಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts