More

    ಚೀನಾದಲ್ಲಿದ್ದ ಆ್ಯಪಲ್​ ಪ್ಲಾಂಟ್​ ಕರ್ನಾಟಕಕ್ಕೆ; 5700 ಕೋಟಿ ರೂ. ಹೂಡಿಕೆ!

    ಬೆಂಗಳೂರು: ಆ್ಯಪಲ್ ಐಫೋನ್‌ನ ತಯಾರಕರಾದ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್, ಭಾರತದಲ್ಲಿ ಹೊಸ ಪ್ಲಾಂಟ್‌ಗಾಗಿ 5700 ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ ಎಂದು ವರದಿಯಾಗಿದೆ. ಅಮೆರಿಕ ಹಾಗೂ ಚೀನಾ ಮಧ್ಯೆ ಇರುವ ಉದ್ವಿಗ್ನತೆಯ ನಡುವೆ ಚೀನಾದಲ್ಲಿನ ಸೌಲಭ್ಯಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ನಮ್ಮ ದೇಶದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಬಯಸುತ್ತಿದೆ. ಈ ವಿಚಾರವಾಗಿ ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ. ತೈವಾನ್​ ಕಂಪನಿಯು ಬೆಂಗಳೂರಿನ ವಿಮಾನ ನಿಲ್ದಾಣದ ಬಳಿಯ 300 ಎಕರೆ ಪ್ರದೇಶದಲ್ಲಿ ಐಫೋನ್ ಬಿಡಿಭಾಗಗಳನ್ನು ತಯಾರಿಸಲಿದ್ದು ಮತ್ತು ಅದು ಇನ್ನೂ ಪ್ರಾರಂಭಿಕ ಹಂತದಲ್ಲಿರುವ ಎಲೆಕ್ನಿಕ್ ವಾಹನದ ಮಹತ್ವಾಕಾಂಕ್ಷೆಗಳಿಗೆ ಸಹಾಯ ಮಾಡಲಿದೆ.

    ಇತ್ತೀಚಿನ ದಿನಗಳಲ್ಲಿ, ಅನೇಕ ಕಂಪನಿಗಳು ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನೆಗೆ ಭಾರತವನ್ನು ದೊಡ್ಡ ಉತ್ಪಾದನಾ ಕೇಂದ್ರವಾಗಿ ನೋಡುತ್ತಿವೆ.ಜಾಗತಿಕ ಪೂರೈಕೆ ಚೈನ್​ಗಳು ಪ್ರಸ್ತುತ ಚೀನಾ ಒಳಗಿನ ಪರಿಸ್ಥಿತಿ ಮತ್ತು ನೀತಿಗಳ ಮೇಲೆ ಅವಲಂಬಿತವಾಗಿದೆ. ಆದರೆ ಅನೇಕ ಅಮೆರಿಕದ ಬ್ರ್ಯಾಂಡಗಳು ನಿರ್ದಿಷ್ಟವಾಗಿ ಆ್ಯಪಲ್, ತನ್ನ ಉತ್ಪಾದನೆಯನ್ನು ವಿವಿಧ ದೇಶಗಳಲ್ಲಿ ಮಾಡಲು ಯೋಜಿಸುತ್ತಿದೆ. ಉದಾಹರಣೆಗೆ, ಫಾಕ್ಸ್​ಕಾನ್​, ಝೆಂಗ್​ಝೌನಲ್ಲಿ ಬೃಹತ್ ಸೌಲಭ್ಯವನ್ನು ಹೊಂದಿದ್ದು ಅಲ್ಲಿ ಸುಮಾರು ಎರಡು ಲಕ್ಷ ಜನರನ್ನು ನೇಮಿಸಿಕೊಂಡಿದೆ. ಆದರೆ ಬೆಂಗಳೂರಿನ ಬಳಿ ನಿರ್ಮಾಣ ಆಗಲಿರುವ ಘಟಕದ ಮೂಲಕ ಸುಮಾರು ಒಂದು ಲಕ್ಷ ಉದ್ಯೋಗಗಳನ್ನು ನಿರ್ಮಿಸುವ ಸಾಧ್ಯತೆ ಇದೆ.

    ಕೋವಿಡ್ ಸಂಬಂಧಿತ ಅಂಶಗಳು ಚೀನಾದ ಪ್ಲಾಂಟ್​​ನಲ್ಲಿ ಉತ್ಪಾದನೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಇದು ಇತರ ದೇಶಗಳಲ್ಲಿ ಉತ್ಪಾದನಾ ಪ್ಲಾಂಟ್​ ಹೊಂದುವ ಅಗತ್ಯವನ್ನು ಕಂಪನಿಗಳಿಗೆ ಮತ್ತಷ್ಟು ಒತ್ತಿಹೇಳುತ್ತದೆ. ಆದ್ದರಿಂದ ಬೆಂಗಳೂರಿನ ಸಮೀಪವಿರುವ ಸ್ಥಾವರದ ವರದಿಯ ಯೋಜನೆಗಳು ಹೆಚ್ಚು ಸ್ಥಿರವಾದ ಕಾರ್ಯಾಚರಣೆಯ ಮಾರ್ಗವನ್ನು ಒದಗಿಸಬಹುದಾದರೂ, ಇದು ಕಂಪನಿಯ EV ಯೋಜನೆಗಳಿಗೆ ಆಧಾರವಾಗಿಯೂ ಕಾರ್ಯನಿರ್ವಹಿಸುತ್ತದೆ. ಫಾಕ್ಸ್‌ಕಾನ್ ಈಗಾಗಲೇ ತನ್ನ ಮೊದಲ EVಅನ್ನು ಪ್ರದರ್ಶಿಸಿದೆ, ಇದನ್ನು ಮಾಡೆಲ್ C ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಆರಂಭದಲ್ಲಿ ತೈವಾನ್‌ನಲ್ಲಿ ನೀಡಲಾಗುವುದು. 2021ರಲ್ಲಿ, ಕಂಪನಿಯು ಇವಿಗಳನ್ನು ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು ಯುಲೋನ್ ಗ್ರೂಪ್‌ನೊಂದಿಗೆ ಜಂಟಿ ಉದ್ಯಮವನ್ನು ಘೋಷಿಸಿತು. ಕೆಲವು ಬಿಡಿ ಭಾಗಗಳನ್ನು ಪ್ರಸ್ತಾವಿತ ಭಾರತದ ಸ್ಥಾವರದಲ್ಲಿ ತಯಾರಿಸಬಹುದು.

    ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಕ್ರಾಸ್‌ಒವರ್ ಮತ್ತು ಸಣ್ಣ ಮತ್ತು ಕೈಗೆಟುಕುವ EVಗಳ ದೃಢವಾದ ಯೋಜನೆಗಳೊಂದಿಗೆ, ಜಗತ್ತಿನಲ್ಲಿ ಫಾಕ್ಸ್‌ಕಾನ್‌ನ ಆಕ್ರಮಣವು ಭಾರತದಿಂದಾಗಿ ಉತ್ತೇಜನವನ್ನು ಪಡೆಯಬಹುದು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts