More

    ನಾಪತ್ತೆಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪರಿಂದ ರಾಜೀನಾಮೆ!

    ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ ಡಿಎಲ್) ಟೆಂಡರ್​ಗೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಶಾಂತ್ ಮಾಡಾಳ್ ಮನೆಯಲ್ಲಿ 6 ಕೋಟಿ ನಗದನ್ನು ಲೋಕಾಯುಕ್ತ ಪೊಲೀಸರು ಗುರುವಾರ (ಮಾ. 02) ತಡರಾತ್ರಿ ವಶಪಡಿಸಿಕೊಂಡಿದ್ದರು. ಕೆಎಸ್​ಡಿಎಲ್ ಅಧ್ಯಕ್ಷರೂ ಆಗಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಅವರನ್ನು 40 ಲಕ್ಷ ಲಂಚ ಪಡೆಯುತ್ತಿದ್ದಾಗ ಗುರುವಾರ ಸಂಜೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಅವರ ಖಾಸಗಿ ಕಚೇರಿಯಲ್ಲಿ ಇನ್ನೂ ಒಟ್ಟು 2.02 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು. ಇದೀಗ ವಿರೂಪಕಾಕ್ಷ ಮಾಡಾಳ್ ರಾಜೀನಾಮೆ ನೀಡಿದ್ದಾರೆ.

    ನಿನ್ನೆ ಮಗ ಪ್ರಶಾಂತ್ ಬಂಧನ ಮಾಡಿದ ಮೇಲೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದರು. ಇದೀಗ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ನೀಡಿ ಮುಖ್ಯಮಂತ್ರಿ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ರಾಜೀನಾಮೆಯಲ್ಲಿ ನನ್ನ ಹಾಗು ಕುಟುಂಬದವರ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ನಾಪತ್ತೆಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪರಿಂದ ರಾಜೀನಾಮೆ!

    ನಾಪತ್ತೆಯಾಗಿತುವ ಮಾಡಾಳ್ ವಿರೂಪಾಕ್ಷಪ್ಪನಿಗಾಗಿ ಲೋಕಾಯುಕ್ತ. ಪೊಲೀಸರು ಸದ್ಯ ಹುಡುಕಾಟ ನಡೆಸುತ್ತಿದ್ದಾರೆ. ತನಗೆ ಸಂಬಂಧ ಇಲ್ಲದ ಇಲಾಖೆಯ ಟೆಂಡರ್ ಬಗ್ಗೆ ಹಣ ಪಡೆಯುತ್ತಿದ್ದ ಪ್ರಶಾಂತ್ ತನ್ನ ತಂದೆಯ ಪರವಾಗಿ ಹಣ ಪಡೆಯುತ್ತಿದ್ದಾಗ ಬಂಧನ ಮಾಡಲಾಗಿದೆ.

    ಹೀಗಾಗಿ ಸದ್ಯ ವಿರೂಪಾಕ್ಷಪ್ಪನಿಗಾಗಿ ಲೋಕಾಯುಕ್ತ ಪೊಲೀಸರ ಹುಡುಕಾಟ ನಡೆಸುತ್ತಿದ್ದು ಈಗಾಗಲೇ ಶಾಸಕರ ಮನೆ ಮೇಲೆ ದಾಳಿ ಲೋಕಾಯುಕ್ತ ದಾಳಿ ಮಾಡಿದೆ.

    ಆಸ್ಕರ್​ ವೇದಿಕೆಯಲ್ಲಿ ನಿರೂಪಕಿಯಾಗಿ ದೀಪಿಕಾ ಪಡುಕೋಣೆ!

    ರಣಬೈರೆಗೌಡರ ಕಾಲದ 800 ವರ್ಷ ಹಳೆ ದೇವಾಲಯಕ್ಕೆ ಅಮಿತ್ ಷಾ ಭೇಟಿ…

    ಹಿಂದೆಯೂ ಅಮಾನತಾಗಿದ್ದ ಪ್ರಶಾಂತ್ ಮಾಡಾಳ್ ಕಬಳಿಸಿದ್ದಕ್ಕೆ ಲೆಕ್ಕವೇ ಇಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts